ಹಾಸನಾಂಬೆ ದೇವಸ್ಥಾನದಲ್ಲೆ ಭಕ್ತನ ಸಾವು, ದೇವಿ ದರ್ಶನ ಮಾಡುವ ಮುನ್ನವೇ ದೇಗುಲದ ಬಾಗಿಲಲ್ಲೇ ಪ್ರಾಣಬಿಟ್ಟ ಭಕ್ತ
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ(ಅ.21): ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದೇವಿ ದರ್ಶನಕ್ಕೆಂದು ಆಗಮಿಸಿದ್ದ ಭಕ್ತನೊಬ್ಬ ಮಹಾದ್ವಾರದ ಬಳಿಯೇ ಸಾವನ್ನಪ್ಪಿದ ಘಟನೆ ನಿನ್ನೆ(ಗುರುವಾರ) ನಡೆದಿದೆ. ಹಾಸನ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಗಿರೀಶ್ (42) ಸಾವನ್ನಪ್ಪಿದ ಮೃತ ದುರ್ದೈವಿಯಾಗಿದ್ದಾನೆ. ದೇವಿಯ ದರ್ಶನ ಪಡೆಯಲು ಕಾತುರನಾಗಿ ಸರತಿ ಸಾಲಿನಲ್ಲಿ ಮಹಾದ್ವಾರದವರೆಗೂ ಬಂದಿದ್ದ ಗಿರೀಶ್ ಮಹಾದ್ವಾರ ದಾಟುವ ಮುನ್ನವೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
undefined
2 ಗಂಟೆಗೂ ಅಧಿಕ ಕಾಲ ಹಾಸನಾಂಬೆ ದೇವಿ ದರ್ಶನ ಮಾಡಲೆಂದು ಸರದಿ ಸಾಲಿನಲ್ಲಿ ನಿಂತಿದ್ದು, ದೇವಾಲಯದ ಗೋಪುರದ ಬಳಿ ಬಂದಾಗ ಏಕಾಏಕಿ ಹೃದಯಘಾತವಾಗಿ ಕುಸಿದು ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಕರೆಸಿ ಪರೀಕ್ಷಿಸಿದ್ದಾರೆ. ಕೂಡಲೇ ತುರ್ತು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೂ ಭಕ್ತ ಗಿರೀಶ್ ಬದುಕುಳಿದಿಲ್ಲ.
ದಿವ್ಯಾಂಗ ಪತ್ನಿಯನ್ನು ಹೊತ್ತು ಹಾಸನಾಂಬೆ ದರ್ಶನ ಮಾಡಿಸಿದ ಪತಿ
ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆಯೇ ಗಿರೀಶ್ ಸಾವನ್ನಪ್ಪಿದ್ದಾರೆ. ಗಿರೀಶ್ ದೇವಿ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಹರಸಾಹಸಪಟ್ಟು ಬಂದಿದ್ದನು. ಆದ್ರೆ ದೇವಿ ದರ್ಶನ ಪಡೆಯುವ ಮುನ್ನವೇ ಗಿರೀಶ್ ಪ್ರಾಣಪಕ್ಷಿ ಹಾರಿಹೋಗಿದೆ. ಹಾಸನಾಂಬೆ ಮಹೋತ್ಸವ ವೇಳೆ ಭಕ್ತನೊಬ್ಬ ದೇಗುಲದ ಆವರಣದಲ್ಲಿ ಸಾವನ್ನಪ್ಪಿರುವುದು ಇದೇ ಮೊದಲು ಎಂಬುದು ಹಿರಿಯರ ಮಾತು.