ಸ್ಥಳೀಯರಿಂದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ, ಘಟನಾ ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ, ಪರಿಶೀಲನೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.20): ಅರಣ್ಯ ಇಲಾಖೆ ಆನೆ ಹಿಮ್ಮೆಟ್ಟಿಸುವ ಶಿಬಿರ ಕಲ್ಕೊಳದ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಮೃತಪಟ್ಟಿದ್ದಾನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಲ್ಲೆಯಿಂದ ಮೃತಪಟ್ಟಿರುವ ಆರೋಪ
ಶಿವಮೊಗ್ಗ ಮೂಲದ ರವಿ ಎಂಬುವರು ಮೃತಪಟ್ಟಿದ್ದು, ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ. ಕಡೂರು ತಾಲೂಕು ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹಾಗೂ ಚಿಕ್ಕಮಗಳೂರು ಅರಣ್ಯ ವಲಯದ ಕಲ್ಲೋಳ ಕೋಟೆ ಆನೆ ಶಿಬಿರದ ಶೌಚಾಲಯ ಕೊಠಡಿಯಲ್ಲಿ ರವಿ ಎಂಬುವರ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಹೇಳುವಂತೆ ಶ್ರೀಗಂಧ ಕಳ್ಳತನಕ್ಕೆ ಇಬ್ಬರು ಬಂದಿದ್ದರು. ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಶೌಚಾಲಯಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿ ರವಿ ಮೃತಪಟ್ಟಿದ್ದಾನೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.
ಅಮೃತ್ ಯೋಜನೆ ಕಾಮಗಾರಿ ತಾರ್ಕಿಕ ಅಂತ್ಯವಿಲ್ಲ, ಚಿಕ್ಕಮಗಳೂರು ನಗರಸಭೆ ವಿರುದ್ದ ಜನರ ಆಕ್ರೋಶ
ರವಿ ಹಾಗೂ ಮತ್ತೊಬ್ಬ ವ್ಯಕ್ತಿ ಅರಣ್ಯದಲ್ಲಿ ಬಿದಿರು ಕಡಿಯಲು ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದರಿಂದ ರವಿ ಮೃತಪಟ್ಟಿದ್ದಾನೆ. ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಹಲ್ಲೆ ನಡೆಸಿ ಮೃತಪಟ್ಟ ಬಳಿಕ ಶಿಬಿರ ಶೌಚಾಲಯದಲ್ಲಿ ಮೃತದೇಹವನ್ನು ಇರಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿಭಟನೆ:
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರು ಜಮಾಯಿಸಿದ್ದು ಈ ವೇಳೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಮಾತಿಕ ಚಕಾಮಕಿ ನಡೆದಿದೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಹಲ್ಲೆಯಿಂದ ಆರೋಪಿ ಮೃತಪಟ್ಟಿದ್ದು ಹಲ್ಲೆ ನಡೆಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Chikkamagaluru: ಗುಣಮಟ್ಟದ ವಿದ್ಯುತ್‌ಗೆ ಆದ್ಯತೆ; ಸಚಿವ ಸುನೀಲ್‌ಕುಮಾರ್
ಇಲ್ಲಿ ಶ್ರೀಗಂಧವೇ ಇಲ್ಲ ಕದಿಯಲು ಹೇಗೆ ಬರುತ್ತಾರೆಂದು ಪ್ರಶ್ನಿಸಿದ ಗ್ರಾಮಸ್ಥರು ಇವರ ಬಿದಿರುಕಡಿಯಲು ಬಂದಿರುವ ಸಾಧ್ಯತೆಗಳಿವೆ. ಸಿಕ್ಕಿಬಿದ್ದು, ವಿಚಾರಣೆ ವೇಳೆ ಹಲ್ಲೆ ನಡೆಸಿದ್ದು, ಸಾವಪ್ಪಿರುವ ಸಾಧ್ಯತೆಗಳಿವೆ ಬಳಿಕ ಶೌಚಾಲಯಕ್ಕೆ ತಂದು ಹಾಕಿರುವ ಸಾಧ್ಯತೆಗಳಿವೆ ಎಂದು ದೂರಿದರು.ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಅಧಿಕಾರಿಗಳ ಹೇಳಿಕೆ:
ತೊಗರಿಹಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೇಟೆಯಲ್ಲಿ ಶ್ರೀಗಂಧ ಕಳವು ಹೆಚ್ಚಾಗಿದ್ದು, ಪಾಳಿಯಲ್ಲಿ ಕಾವಲು ಕಾಯಲು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಶಿವಮೊಗ್ಗ ಮೂಲಕ ೫ ಜನರು ಗಂಧಕಳವು ಮಾಡಲು ಆಗಮಿಸಿದ್ದು, ಅದರಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಿಕ್ಕಿಬಿದ್ದ ಇಬ್ಬರನ್ನು ವಿಚಾರಣೆಗೆಂದು ಆನೆ ಹಿಮ್ಮೆಟ್ಟಿಸುವ ಕಲ್ಲೊಳದಲ್ಲಿರುವ ಶಿಬಿರದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದು, ಹೃದಯಾಘಾತದಿಂದ ಸಾವಪ್ಪಿರುವ ಸಾಧ್ಯತೆಗಳಿವೆ ತನಿಖೆಯ ವೇಳೆಯಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ. ವಿಷಯವನ್ನು ಮೃತರ ಮನೆಯವರಿಗೆ ತಿಳಿಸಿದ್ದು, ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.