Koppal| ಪುರುಷರನ್ನು ಮೀರಿಸಿದ ಪದವೀಧರೆ ಕೃಷಿ ಕಾರ್ಯ: ಹೆಣ್ಮಕ್ಳೇ ಸ್ಟ್ರಾಂಗ್‌ ಗುರು..!

By Kannadaprabha News  |  First Published Nov 13, 2021, 1:11 PM IST

*  ನೌಕರಿ ಸಿಕ್ಕಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದ ಮಹಿಳೆ
*  ಪುರುಷರೂ ನಾಚುವಂತೆ ಕೃಷಿ ಚಟುವಟಿಕೆ ಮಾಡುವ ಮಂಜುಳಾ
*  ಓದಿನಲ್ಲಿಯೂ ಪ್ರಯತ್ನ ನಿಲ್ಲಿಸದ ಪದವೀಧರೆ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.13):  ಇವರು ಬಿಎ ಪದವೀಧರೆ(BA Graduate). ಜೊತೆಗೆ ಡಿಇಡಿಯನ್ನೂ(D.ed) ಮಾಡಿದ್ದಾರೆ. ನೌಕರಿಗಾಗಿ(Job) ಯತ್ನ ನಡೆದಿದೆ. ಆದರೆ ನೌಕರಿ ಸಿಕ್ಕಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಕೃಷಿಯಲ್ಲಿ(Agriculture) ಪುರುಷರನ್ನು ಮೀರಿಸುವಂತೆ ಕೆಲಸ ಮಾಡುತ್ತಿದ್ದಾರೆ. ಎಡೆ ಹೊಡೆಯುವುದು, ಕ್ರಿಮಿನಾಶಕ ಸಿಂಪರಣೆ ಮಾಡುವುದರಿಂದ ಹಿಡಿದು ಎಲ್ಲ ಕೆಲಸ ಮಾಡುವ ಮೂಲಕ ಮಹಿಳೆಯರು ಎಂದರೆ ಪುರುಷರಿಗೇನೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

Latest Videos

undefined

ಹೌದು, ಇವರೇ ಕೊಪ್ಪಳ(Koppal) ನಗರದ ನಿವಾಸಿ ಮಂಜುಳಾ ಬಸವರಾಜ ಉಂಡಿ(Manjula Basavaraj Undi). ತನ್ನ ಕೆಲಸ ಕಾರ್ಯದ ಮೂಲಕ ಪತಿಯ ಮನೆಯಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾಳೆ. ಪಿಎಸ್‌ಐ ಪರೀಕ್ಷೆ(PSI Examination) ಸಹ ಬರೆದಿರುವ ಇವರು ಡಿಇಡಿ ಹಾಗೂ ಬಿಎ ಪದವಿ ಪಡೆದಿದ್ದಾಳೆ. ಹೀಗಾಗಿ, ಶಿಕ್ಷಕ ವೃತ್ತಿಗೂ(Teacher Career) ಪ್ರಯತ್ನ ಮಾಡುತ್ತಿದ್ದಾಳೆ.

ಕೆಲಸ ಎಂದರೆ ಪುರುಷ(Male) ಮಾತ್ರ ಮಾಡಬೇಕು, ಸ್ತ್ರೀ(Female) ಮಾಡಬೇಕು ಎಂದು ಏನು ಇಲ್ಲ. ಯಾವುದೇ ಕೆಲಸ ಯಾರು ಬೇಕಾದರೂ ಮಾಡಬಹುದು ಎನ್ನುತ್ತಾಳೆ. ಇವರದು ಸ್ವಂತ ಭೂಮಿ ಇಲ್ಲ. ಆದರೂ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ ಇದೆ. ಹೀಗಾಗಿ, ಸುಮಾರು 7 ಎಕರೆ ಭೂಮಿಯನ್ನು ಲೀಸ್‌ನಲ್ಲಿ ಹಾಕಿಕೊಂಡು ಕೃಷಿ ಮಾಡುತ್ತಿದ್ದಾರೆ. ಇವರ ಪತಿ. ಒಂದು ದಿನ ಪತಿ ಬಸವರಾಜ ಕಡಲೆ ಬೆಳೆಗೆ ರೋಗ ಬಂದಿದ್ದರಿಂದ ಕ್ರಿಮಿನಾಶಕ ಸಿಂಪರಣೆ(Sterilization Spraying) ಮಾಡಲು ಮುಂದಾಗುತ್ತಾರೆ. 

ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ

ಕಾರ್ಮಿಕನೋರ್ವ ಬರುತ್ತೇನೆ ಎಂದು ಹೇಳಿ ಕೈ ಕೊಡುತ್ತಾನೆ. ಆಗ ಕ್ರಿಮಿನಾಶಕ ಸಿಂಪರಣೆ ಮಾಡುವ ಕೆಲಸಕ್ಕೆ ಅಡ್ಡಿಯಾಗುತ್ತದೆ. ಮಂಜುಳಾ ನಾನು ಕ್ರಿಮಿನಾಶಕ ಹೊಡೆಯುತ್ತೇನೆ ಎನ್ನುತ್ತಾಳೆ. ಪತಿ ಬೇಡವೆಂದರೂ ಬಿಡದೆ ಕ್ರಿಮಿನಾಶಕ ಸಿಂಪರಣೆ ಮಾಡಲು ಶುರು ಮಾಡುತ್ತಾರೆ. ಹೀಗೆ ಹೆಗಲಿಗೆ ಪಂಪ್ ಹಾಕಿಕೊಂಡು ಪುರುಷರಂತೆ ಕ್ರಿಮಿನಾಶಕ ಸಿಂಪರಣೆ ಮಾಡಲು ಶುರು ಮಾಡಿದ ಇವರು ಎಲ್ಲರೊಂದಿಗೂ ಸೈ ಎನಿಸಿಕೊಳ್ಳುತ್ತಾರೆ. ಕೇವಲ ಕ್ರಿಮಿನಾಶಕ ಸಿಂಪರಣೆ ಮಾಡುವುದು ಅಷ್ಟೇ ಅಲ್ಲ, ಎಡೆ ಹೊಡೆಯುವುದು, ಬಿತ್ತನೆ(Sowing) ಮಾಡುವುದರಿಂದ ಹಿಡಿದು ಎಲ್ಲವನ್ನು ಮಾಡುತ್ತಾರೆ. ಈಗ ಪುರುಷರೂ ನಾಚುವಂತೆ ಕೃಷಿ ಚಟುವಟಿಕೆ ಮಾಡುತ್ತಾರೆ. ಇದರಲ್ಲಿಯೇ ಏನಾದರೂ ಸಾಧನೆ(Achievement) ಮಾಡ ಬೇಕು ಎನ್ನುವ ಬಯಕೆ ಹೊಂದಿದ್ದಾರೆ.

ನಿಲ್ಲದ ಪ್ರಯತ್ನ: 

ಇದರ ಜತೆಗೆ ಓದಿನಲ್ಲಿಯೂ(Study) ಪ್ರಯತ್ನ ನಿಲ್ಲಿಸಿಲ್ಲ. ಡಿಇಡಿ ಆಗಿರುವುದರಿಂದ ಶಿಕ್ಷಕಿಯಾಗುವುದಕ್ಕೆ(Teacher) ಪ್ರಯತ್ನಿಸುತ್ತಾಳೆ. ಜೊತೆಗೆ ಪಿಎಸ್‌ಐ ದೈಹಿಕ ಪರೀಕ್ಷೆ ಪಾಸಾಗಿ,ಲಿಖಿತ ಪರೀಕ್ಷೆ ಬರೆದಿದ್ದಾರೆ. ಅದರಲ್ಲೂ ಶಕ್ತಿಮೀರಿ ಶ್ರಮಿಸುತ್ತಿದ್ದಾಳೆ ಮಂಜುಳಾ. ಪುರುಷರಂತೆ ಕ್ರಿಮಿನಾಶಕ ಸಿಂಪರಣೆ ಮಾಡುವ ಮಂಜುಳಾ ಉಂಡಿ 

ಕೆಲಸದಲ್ಲಿ ಯಾವುದೇ ಭೇದ-ಭಾವ ಇಲ್ಲ. ಎಲ್ಲರೂ ಎಲ್ಲ ಕೆಲಸ ಮಾಡಬಹುದು. ಆಳುಗಳನ್ನೇ ನಂಬಿ ಕೆಲಸ ಮಾಡಿದರೇ ಆಗುವುದಿಲ್ಲ. ಹೀಗಾಗಿ,ನಾನೇ ಎಲ್ಲ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ನನಗೆ ಆಸಕ್ತಿಯೂ ಇದೆ. ಹೀಗಾಗಿ ಖುಷಿಯಾಗುತ್ತದೆ ಎಂದು ಪದವೀಧರೆ ಮಂಜುಳಾ ಉಂಡಿ ತಿಳಿಸಿದ್ದಾರೆ. 

ಬಾರದ ಲೋಕಕ್ಕೆ ತೆರಳಿದ ಅಪ್ಪು: ಕಣ್ಣೀರಲ್ಲೇ ಕೈತೊಳೆಯುತ್ತಿರವ ಅಂಧ ಸಹೋದರಿಯರು

ಎಡೆ ಹೊಡೆಯಲು ಹೆಗಲುಕೊಟ್ಟ ಅತಿಥಿ ಶಿಕ್ಷಕ, ಎತ್ತಿನಂತೆ ಹೊಲದಲ್ಲಿ ದುಡಿಯುತ್ತಿರುವ ಪದವೀಧರ..!

ಖಾಸಗಿ ಶಾಲೆಯಲ್ಲಿ(Private School) ಅತಿಥಿ ಶಿಕ್ಷಕನಾಗಿ(Guest Teacher) ಕೆಲಸ ಮಾಡುತ್ತಿದ್ದ ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ ಬಿಇಡಿ ಪದವೀಧರ ಮರಿಯಪ್ಪ ಹಳ್ಳಿ ಈಗ ಅಪ್ಪನ ಕೃಷಿಗೆ ಸಾಥ್‌ ನೀಡಲು ಎತ್ತಿನಂತೆ ಎಡೆ ಹೊಡೆಯುವುದಕ್ಕೆ ಹೆಗಲು ಕೊಡುತ್ತಿದ್ದಾರೆ. ಹೊಲದಲ್ಲಿನ ಬೆಳೆಯನ್ನು ಎಡೆ ಹೊಡೆಯಲು ಎತ್ತು ಇಲ್ಲದಿರುವುದರಿಂದ ಮತ್ತು ಬಾಡಿಗೆ ಕೊಡುವುದು ಕಷ್ಟವಾಗಿರುವುದರಿಂದ ಮನೆಯಲ್ಲಿಯೇ ಇರುವ ಪದವೀಧರ ಈಗ ಹೆಗಲು ಕೊಟ್ಟು ಎತ್ತಿನಂತೆ ಎಳೆಯುತ್ತಿದ್ದಾನೆ.

ಎತ್ತು, ಎಮ್ಮೆಗಳನ್ನು ಕೃಷಿಯಲ್ಲಿ ಹೀಗೆ ದುಡಿಸಿಕೊಳ್ಳುವುದು ತಪ್ಪು ಎನ್ನುವ ಕಾಲ ಇದು. ಟ್ರ್ಯಾಕ್ಟರ್‌ ಮೊದಲಾದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೃಷಿ ಮಾಡಬೇಕು ಎನ್ನಲಾಗುತ್ತದೆ. ಅಂಥದ್ದರಲ್ಲಿ ಎತ್ತುಗಳಂತೆ ಪದವೀಧರ ಶಿಕ್ಷಕ ಗಳೆ ಹೊಡೆಯುವುದಕ್ಕೆ ನೊಗ ಹೊತ್ತು ಎಳೆಯುತ್ತಿರುವ ದೃಶ್ಯ ಮನಕಲಕುವಂತೆ ಇದೆ.
 

click me!