ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಿನ್ನಡೆ ಮಾಡಿಲ್ಲ: ಸಚಿವ ಎಂಟಿಬಿ ನಾಗರಾಜ್‌

By Govindaraj S  |  First Published Jan 9, 2023, 8:47 PM IST

ಕ್ಷೇತ್ರಕ್ಕೆ ನಾನು ಬಂದ ಸಮಯದಿಂದ ಅಲ್ಪಸಂಖ್ಯಾತ ಸಮುದಾಯ ನನ್ನ ಬೆಂಬಲಕ್ಕೆ ನಿಂತಿದೆ. ಸಮುದಾಯದ ಅಭಿವೃದ್ಧಿಗೂ ಹಿನ್ನಡೆ ಮಾಡಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.


ಹೊಸಕೋಟೆ (ಜ.09): ಕ್ಷೇತ್ರಕ್ಕೆ ನಾನು ಬಂದ ಸಮಯದಿಂದ ಅಲ್ಪಸಂಖ್ಯಾತ ಸಮುದಾಯ ನನ್ನ ಬೆಂಬಲಕ್ಕೆ ನಿಂತಿದೆ. ಸಮುದಾಯದ ಅಭಿವೃದ್ಧಿಗೂ ಹಿನ್ನಡೆ ಮಾಡಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ನಗರದ 17ನೇ ವಾರ್ಡಿನಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಿಸಿದ್ದ ಮನ್ಸೂರ್‌, ಮುನೀರ್‌ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, 2004ರಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ಬಂದಾಗ ಮಿನಿ ಬಿಹಾರದ ರೀತಿ ತಾಲೂಕಿನ ಚಿತ್ರಣ ಇತ್ತು. 

ಕಳ್ಳತನ, ದರೋಡೆ, ಜಾತಿ ಜಾತಿಗಳ ನಡುವೆ ಸಂಘರ್ಷ, ಮತ ಕೇಂದ್ರಕ್ಕೆ ಹೋಗಿ ಮತ ಹಾಕಲು ಕೂಡ ಜನ ಭಯ ಪಡುವಂತಹ ಸನ್ನಿವೇಶ ಇತ್ತು. ನಾನು ಮತ ಕೇಳಲು ಹೋದಾಗ ಹಲವಾರು ಗ್ರಾಮಗಳಲ್ಲಿ ನಮ್ಮ ಕಾರುಗಳ ಮೇಲೆ ಕಲ್ಲು ತೂರಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ಇವೆಲ್ಲವನ್ನು ಮೆಟ್ಟಿನಿಂತು ಕ್ಷೇತ್ರದಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಿದ್ದೇನೆ. ಎಲ್ಲಾ ವರ್ಗದ ಜನರಿಗೂ ಸರ್ವಧರ್ಮ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟುಅನುದಾನ ತಂದಿದ್ದೇನೆ ಎಂದು ಹೇಳಿದರು.

Tap to resize

Latest Videos

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೋಷನ್‌ ಮಾತನಾಡಿ, ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಎಂಟಿಬಿ ನಾಗರಾಜ್‌ ಅವರಿಂದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಆಗಿಲ್ಲ. ಬದಲಾಗಿ ಅಭಿವೃದ್ಧಿ ಆಗಿದೆ. ಇದನ್ನು ಉಪಚುನಾವಣೆ ನಂತರ ಸಾಕಷ್ಟುಜನ ಅರ್ಥ ಮಾಡಿಕೊಂಡಿದ್ದು, ಎಂಟಿಬಿ ಪರವಾಗಿ ನಿಲ್ಲಲು ಸನ್ನದ್ದರಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೆಲುವು ನಮ್ಮದಾಗಲಿದೆ. ಮತ್ತಷ್ಟುಒಳ್ಳೆ ದಿನಗಳು ಬರಲಿವೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಎ.ಅಪ್ಸರ್‌, ಜಿಲ್ಲಾ ಕಾರ್ಯದರ್ಶಿ ಕಟ್ಟಿಗೇನಹಳ್ಳಿ ಬಾಬು, ಸದಸ್ಯರಾದ ಗುಲ್ಜಾರ್‌, ಶಾಜಿಯಾ ಖಲಿಂಪಾಷ, ನಾಮ ನಿರ್ದೇಶನ ಸದಸ್ಯ ಇನಾಯತ್‌ ವುಲ್ಲಾ, ಟೌನ್‌ಬ್ಯಾಂಕ್‌ ಅಧ್ಯಕ್ಷ ಬಾಲಚಂದ್ರ, ಮುಖಂಡರಾದ ಶಕೀಲ್‌ ಇತರರಿದ್ದರು.

ಬಿಜೆಪಿ ಅ​ಧಿಕಾರ ಬಂದ ಮೇಲೆ ಹೆಚ್ಚಿದ ದಾರಿದ್ರ್ಯ: ಶಾಸಕ ಶರತ್‌ ಬಚ್ಚೇಗೌಡ

ಮೈನಾರಿಟಿಗೆ ವಿಶೇಷ ಅನುದಾನ 3 ಕೋಟಿ: ತಾಲೂಕಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಾರ್ಡ್‌ಗಳ ಅಭಿವೃದ್ಧಿ ದೃಷ್ಟಿಯಿಂದ 3 ಕೋಟಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮೈನಾರಿಟಿ ಗ್ರಾಂಟ್‌ ತಂದಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನನ್ನ ಅಧಿ​ಕಾರಾವ​ಧಿಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಉಪ ಚುನಾವಣೆ ನಂತರ ನಡೆದ ನಗರಸಭೆ ಚುನಾವಣೆಯಲ್ಲಿ 31ಕ್ಕೆ 23 ಸ್ಥಾನಗಳನ್ನು ಬಿಜೆಪಿ ಪಕ್ಷಕ್ಕೆ ನೀಡಿದ್ದಾರೆ. ಪ್ರಮುಖವಾಗಿ ಬಿಜೆಪಿಯಿಂದ ಸ್ಪ​ರ್ಧಿಸಿದ 3 ಜನ ಸದಸ್ಯರು ಭರ್ಜರಿ ಗೆಲುವು ಸಾ​ಸಿದ್ದು ನನ್ನ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂಬುದನ್ನು ಮರೆಯಬಾರದು ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

click me!