'ಯುವಶಕ್ತಿಯ ಸದ್ಬಳಕೆ ಆಗುವ ದೇಶದಲ್ಲಿ ಎಲ್ಲಾ ವಿಧದಲ್ಲಿ ಅಭಿವೃದ್ಧಿ'

By Kannadaprabha News  |  First Published Oct 21, 2023, 8:13 AM IST

ಯಾವ ದೇಶದಲ್ಲಿ ಯುವಶಕ್ತಿಯ ಸದ್ಬಳಕೆ ಆಗುತ್ತದೆಯೋ ಆ ದೇಶ ಎಲ್ಲ ವಿಧದಲ್ಲಿ ಅಭಿವೃದ್ಧಿ ಹೊಂದಿರುತ್ತದೆ. ರಾಷ್ಟ್ರ ನಿರ್ಮಾಣದ ಮೂಲ ಅಡಿಗಲ್ಲೇ ವ್ಯಕ್ತಿ. ವ್ಯಕ್ತಿಯಿಂದ ಕುಟುಂಬ, ಗ್ರಾಮ, ತಾಲೂಕು ,ಜಿಲ್ಲೆ, ರಾಜ್ಯ, ನಂತರ ರಾಷ್ಟ್ರ. ಯುವ ಮನಸ್ಸುಗಳಿಂದ ಸಶಕ್ತ ಸಮಾಜ ನಿರ್ಮಿಸಲು ಖಂಡಿತಾ ಸಾಧ್ಯವಿದೆ ಎಂದು ಕೊರಟಗೆರೆ ತಾಲೂಕಿನ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹೊಸಕೆರೆ ರಿಜ್ವಾನ್ ಬಾಷ ಅಭಿಪ್ರಾಯಪಟ್ಟರು.


 ಕೊರಟಗೆರೆ :  ಯಾವ ದೇಶದಲ್ಲಿ ಯುವಶಕ್ತಿಯ ಸದ್ಬಳಕೆ ಆಗುತ್ತದೆಯೋ ಆ ದೇಶ ಎಲ್ಲ ವಿಧದಲ್ಲಿ ಅಭಿವೃದ್ಧಿ ಹೊಂದಿರುತ್ತದೆ. ರಾಷ್ಟ್ರ ನಿರ್ಮಾಣದ ಮೂಲ ಅಡಿಗಲ್ಲೇ ವ್ಯಕ್ತಿ. ವ್ಯಕ್ತಿಯಿಂದ ಕುಟುಂಬ, ಗ್ರಾಮ, ತಾಲೂಕು ,ಜಿಲ್ಲೆ, ರಾಜ್ಯ, ನಂತರ ರಾಷ್ಟ್ರ. ಯುವ ಮನಸ್ಸುಗಳಿಂದ ಸಶಕ್ತ ಸಮಾಜ ನಿರ್ಮಿಸಲು ಖಂಡಿತಾ ಸಾಧ್ಯವಿದೆ ಎಂದು ಕೊರಟಗೆರೆ ತಾಲೂಕಿನ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹೊಸಕೆರೆ ರಿಜ್ವಾನ್ ಬಾಷ ಅಭಿಪ್ರಾಯಪಟ್ಟರು.

ಗುಬ್ಬಿ ಸ.ಪ.ಪೂ.ಕಾಲೇಜಿನಿಂದ ಹಳೇ ಗುಬ್ಬಿಯಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ‘ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ, ಪ್ರೀತಿಸುವುದಾದರೆ ಬದುಕನ್ನು ಪ್ರೀತಿಸಬೇಕು. ಸೌಂದರ್ಯ ಪ್ರಜ್ಞೆ ಇರಲಿ. ತಮಗಿರುವ ಅಗಾಧ ಶಕ್ತಿಯನ್ನು ಸೃಜನಾತ್ಮಕ ಚಟುವಟಿಗಳಲ್ಲಿ ತೊಡಗಿಸಿ. ಸಮಯ ಅತ್ಯಮೂಲ್ಯವಾದ್ದು. ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳಿರಲಿ. ಅಡ್ಡದಾರಿಗಳಿಂದ ಯಶಸ್ಸನ್ನು ಪಡೆಯಲಾಗದು. ರಾಜ ಮಾರ್ಗದಲ್ಲೇ ಸಾಗಬೇಕು. ಮುಖದಲ್ಲಿ ರಾಜಕಳೆಯಿದ್ದರೂ ಕೀಳರಿಮೆ ಏಕೆ ಕಾಲೇಜು ದಿನಗಳೆಂದರೆ ಸುಂದರ ಭವಿಷ್ಯವೊಂದಕ್ಕೆ ಭಾಷ್ಯ ಬರೆಯುವ ಪರ್ವಕಾಲ. ಅದು ಸಂಧಿಸುವ ಕಾಲವಲ್ಲ. ಸ್ವಾವಲಂಬಿ ಜೀವನದ ಕನಸು ಕಾಣುವ ಕಾಲ. ಪುಸ್ತಕದ ಪಾಠ ಮಸ್ತಕಕ್ಕೇರಿ ದುಡಿಯುವ ಹಸ್ತಗಳಿಗಿಸಿಕೊಳ್ಳುವ ಕಲೆಯನ್ನು ಕಲಿಯುವ ಕಾಲ. ವೃಥಾ ಕಾಲಹರಣ ಮಾಡದೆ, ದುಶ್ಚಟಗಳಿಗೆ ದಾಸರಾಗದೆ, ಪ್ರೀತಿ- ಪ್ರೇಮದ ಹುಚ್ಚಾಟಕ್ಕೆ ಮಾರುಹೋಗದೆ ಸ್ಪಷ್ಟ ಗುರಿಯೆಡೆಗೆ ನಿಮ್ಮ ಪಯಣ ಸಾಗುತ್ತಿದ್ದರೆ ಸಮಾಜದ ಸುಧಾರಣೆ ನಿಮ್ಮಿಂದಲೇ ಪ್ರಾರಂಭವಾಗುತ್ತದೆ ಎಂದರು.

Tap to resize

Latest Videos

undefined

ಗುಬ್ಬಿ ಕ.ಸಾ.ಪ ಅಧ್ಯಕ್ಷರಾದ ಯತೀಶ್, ಪತ್ರಕರ್ತರಾದ ಪ್ರಸನ್ನ ದೊಡ್ಡಗುಣಿ, ನಿವೃತ್ತ ಉಪನ್ಯಾಸಕರಾಗಿ ಸಿದ್ದಲಿಂಗಯ್ಯ ಮಾತನಾಡಿದರು. ಗ್ರಾಮಸ್ಥರಾದ ರಂಗಶಾಮಯ್ಯ, ಶಿಬಿರದ ಆಯೋಜಕರಾದ ಶ್ರೀನಿವಾಸಮೂರ್ತಿ, ದೊಡ್ಡರಂಗಯ್ಯ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ಆರ್ಥಿಕತೆ ಅಭಿವೃದ್ಧಿಗೆ ಯುವಶಕ್ತಿ ಶ್ರಮಿಸಲಿ

ಬಳ್ಳಾರಿ (ಜು.14) ಭಾರತದ ಆರ್ಥಿಕತೆಯು ವಿಶ್ವ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಇದನ್ನು 3ನೇ ಸ್ಥಾನಕ್ಕೆ ತರಲು ಈ ದೇಶದ ಯುವಶಕ್ತಿಯ ಪರಿಶ್ರಮ ಮಹತ್ವದ್ದು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಭಿಪ್ರಾಯಟ್ಟರು.

ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ(Vijayanagara Sri Krishnadevaraya University)ದಲ್ಲಿ ಗುರುವಾರ ಜರುಗಿದ 11ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಉದ್ದೇಶ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ವಿಕಸನಗೊಳ್ಳಬೇಕು. ಶಿಕ್ಷಣ ಬದುಕು ರೂಪಿಸಬೇಕು. ದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಪೂರಕವಾಗಬೇಕು. ಬದಲಾಗುತ್ತಿರುವ ಸಮಯ ಮತ್ತು ಸಂದರ್ಭಗಳೊಂದಿಗೆ ಹೊಸ ಹೊಸ ತಂತ್ರಜ್ಞಾನದ ಜತೆಗೆ ನವೀಕರಿಸಲು ಮತ್ತು ಪ್ರಾಯೋಗಿಕ, ಸಾಮಾಜಿಕ ಮತ್ತು ಹೊಸ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ವಿಶ್ವವಿದ್ಯಾಲಯಗಳು ಶಿಕ್ಷಕರು ಹೆಚ್ಚು ಆಸ್ಥೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ದೇಶದಲ್ಲಿ ವ್ಯಕ್ತಿಯ ನಿರ್ಮಾಣ ಮತ್ತು ಸಮಾಜದ ಉನ್ನತಿಯಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಕೊಡುಗೆಯನ್ನು ಹೊಂದಿದೆ. ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆ ಮೂಡಿಸುವುದರ ಜತೆಗೆ ಸಂಸ್ಕೃತಿಯ ಸಂರಕ್ಷಣೆ, ರಾಷ್ಟ್ರದ ಏಕತೆ- ಸಮಗ್ರತೆ ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಂತಹ ಶಿಕ್ಷಣವನ್ನು ಈಗಿನ ಯುವ ಪೀಳಿಗೆಯು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.

click me!