ರೈತಮುಖಿ ಚಿಂತನೆಗಳಲ್ಲಿ ತೊಡಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು ತಿಳಿಸಿದರು.
ಕೆ.ಆರ್.ಪೇಟೆ : ರೈತಮುಖಿ ಚಿಂತನೆಗಳಲ್ಲಿ ತೊಡಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು ತಿಳಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ಬಿ.ಜಿ.ಹೊಸಕೊಪ್ಪಲು ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿಕ್ಕೆ ಕುಮಾರಣ್ಣ, ಕೆ.ಆರ್ .ಪೇಟೆಗೆ ಮಂಜಣ್ಣ ಘೋಷಣೆಯೊಂದಿಗೆ ಪಂಚರತ್ನ ಯೋಜನೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರ ಬದುಕನ್ನು ಹಸನುಗೊಳಿಸಲು 90 ವರ್ಷವಾದರೂ ಸದಾ ಚಿಂತಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಲು ದೇವೇಗೌಡ ಅಪ್ಪಾಜಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೇಮಾವತಿ ನದಿ ನೀರು ಈ ಭಾಗಕ್ಕೆ ಹರಿಯಲು ಪ್ರಮುಖ ಕಾರಣಕರ್ತರೇ ನೀರಾವರಿ ಪಿತಾಮಹ ದೇವೇಗೌಡರು. ಅವರು ದೂರದೃಷ್ಟಿಯುಳ್ಳ ರಾಜಕಾರಣಿ ಎಂದು ಬಣ್ಣಿಸಿದರು.
ಮಾಜಿ ಸಿಎಂ.ಕುಮಾರಣ್ಣ ರೈತರ ಸಾಲಮನ್ನಾ ಮಾಡಿ ಮಾದರಿಯಾದರು. ರೈತರ ಆತ್ಮಹತ್ಯೆ ತಡೆಯಲು ದಿಟ್ಟಕ್ರಮಗಳನ್ನು ಕೈಗೊಂಡರು. ವಿಧವೆಯರಿಗೆ, ವೃದ್ದರಿಗೆ, ಅಂಗವಿಕಲರಿಗೆ ಮಾಶಾಸನ ಜಾರಿಗೊಳಿಸಿದರು. ಶಾಲಾ ಕಟ್ಟಡಗಳ ನಿರ್ಮಾಣ, ತಾಂತ್ರಿಕ ಕಾಲೇಜುಗಳು, ವಿದ್ಯುತ… ಉಪವಿದ್ಯುತ್ ಕೇಂದ್ರಗಳು, ಗ್ರಾಮ ವಾಸ್ತವ್ಯ ಸೇರಿದಂತೆ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ ಕುಮಾರಣ್ಣ ಮತ್ತೆ ನಮ್ಮ ನಾಡಿಗೆ ಮುಖ್ಯಮಂತ್ರಿಯಾಗಲು ನಿಮ್ಮೆಲ್ಲರ ಸಹಕಾರಬೇಕು ಎಂದು ಮನವಿ ಮಾಡಿದರು.
ಎಚ್.ಡಿ.ದೇವೇಗೌಡರು, ಕುಮಾರಣ್ಣರಂತಹ ದಿಗ್ಗಜರನ್ನು ಹೊಂದಿರುವ ಜೆಡಿಎಸ್ ಪ್ರಾದೇಶಿಕ ಪಕ್ಷಕ್ಕೆ ತಾವೆಲ್ಲರೂ ಆಶೀರ್ವಾದ ಮಾಡಬೇಕು. ಕುಮಾರಣ್ಣರ ಮನೆಗೆ ಪ್ರತಿದಿನ ರಾಜ್ಯದ ವಿವಿಧ ಮೂಲೆಗಳಿಂದ ಬರುವ ಸಾವಿರಾರು ಬಡಜನರ ರೈತರ, ಕಷ್ಟಸುಖಗಳನ್ನು ನೋಡಿ ಈ ಸಮಸ್ಯೆಗಳಿಂದ ರೈತರನ್ನು ಪಾರು ಮಾಡಲು ಪಂಚರತ್ನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನೀವೆಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಬೂಕನಕೆರೆ ಗ್ರಾಪಂ ವ್ಯಾಪ್ತಿಯ ಬೊಮ್ಮೇಗೌಡನ ಕೊಪ್ಪಲು, ಮೋದೂರು, ಬಿ.ಬಾಚಹಳ್ಳಿ, ಶೀಳನೆರೆಕೊಪ್ಪಲು, ವಿಜಯಹೊಸಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಮನೆಮನೆ ಬೇಟಿ ಮಾಡಿ ರೈತರಿಗೆ ಪಂಚರತ್ನ ಕಾರ್ಯಕ್ರಮದ ಮಹತ್ವಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ನಾಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಕಾರ್ಯಾಧ್ಯಕ್ಷ ರಾಜೇಗೌಡ, ಮನ್ಮುಲ್… ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, JDS ಮುಖಂಡ ಹುಲ್ಲೇಗೌಡ, ತಾಪಂ ಮಾಜಿ ಸದಸ್ಯ ಮೋಹನ್, ಬೂಕನಕೆರೆ ಹೋಬಳಿ ಘಟಕದ ಅಧ್ಯಕ್ಷ ನಂದೀಶ…, ಯುವ ಘಟಕದ ಅಧ್ಯಕ್ಷ ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ…, ಪಾಪಣ್ಣ, ರಮೇಶ…, ಚಂದ್ರಣ್ಣ, ಸೇರಿದಂತೆ ಹಲವರು ಹಾಜರಿದ್ದರು.
HDD ಕೊಡುಗೆ ಅಪಾರ
ಹುಣಸೂರು ರಾಜ್ಯದಲ್ಲಿ ನಾಯಕ ಸಮುದಾಯದ ಮೀಸಲಾತಿ ಕೊಡಿಸಲು ಶ್ರಮಿಸಿದ್ದವರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕೂಡುಗೆ ಅಪಾರವಾಗಿದೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ನಾಯಕ ಸಮುದಾಯಕ್ಕೆ ಮಾಜಿ ಶಾಸಕ ದಿ. ಎಸ್. ಚಿಕ್ಕಮಾದು ಅವರು ಶ್ರಮಿಸಿದ್ದಾರೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಪ್ರಶಂಸಿದರು.
ಪಟ್ಟಣದ ಕಲ್ಕುಣಿಕೆಯ ನಾಯಕ ಸಮುದಾಯ ಭವನದಲ್ಲಿ ಸೋಮವಾರ ರಾಜನಹಳ್ಳಿಯಲ್ಲಿ ಫೆ. 8 ಮತ್ತು 9ರಂದು ನಡೆಯುವ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಹ್ವಾನ ಕೋರಿ ಭಿತ್ತಿಪತ್ರ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
ನಮ್ಮ ಸಮುದಾಯದ ಮೀಸಲಾತಿಗಾಗಿ (Resarvation) ಎಚ್.ಡಿ. ದೇವೇಗೌಡರು (HD Devegowda) ಮತ್ತು ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಎಚ್. ವಿಶ್ವನಾಥ್ ಅವರು ಸಾಥ್ ನೀಡಿದ್ದಾರೆ. ಅಲ್ಲದೆ ಚಿಕ್ಕಮಾದು ಅವರ ಕೊಡುಗೆ ಸಮುದಾಯಕ್ಕೆ ಬಹಳ ಅಪಾರವಾಗಿದೆ ಎಂದರು.
ಫೆ. 8 ಮತ್ತು 9 ರಂದು ರಾಜನಹಳ್ಳಿಯಲ್ಲಿ ನಡೆಯುವ 5ನೇ ವರ್ಷದ ಜಾತ್ರೆಗೆ ರಾಜ್ಯದ ಮೂಲೆ ಮೂಲೆ ಯಿಂದ ಸಮುದಾಯವರು ಬರುತ್ತಾರೆ, ತಾವೆಲ್ಲರೂ ಆಗಮಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಸಮುದಾಯದ ಭಾಂದವರಿಗೆ ಕರೆ ನೀಡಿದರು.