ಚಂಡಮಾರುತ ಹಿನ್ನೆಲೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಪ್ರವಾಸಿಗರು ಕಡತೀರದಲ್ಲಿ ಹುಚ್ಚಾಟ ನಡೆಸಿದ ಘಟನೆ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ.
ಉತ್ತರ ಕನ್ನಡ (ಜೂ.18) ಚಂಡಮಾರುತ ಹಿನ್ನೆಲೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಪ್ರವಾಸಿಗರು ಕಡತೀರದಲ್ಲಿ ಹುಚ್ಚಾಟ ನಡೆಸಿದ ಘಟನೆ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ.
ದೈತ್ಯ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದ್ದರೂ ಬಂಡೆಗಳ ಮೇಲೆ ನಿಂತು ಪೋಸು ಕೊಡುತ್ತಿರುವ ಪ್ರವಾಸಿಗರು. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದ ಹೆಚ್ಚಿದ ಪ್ರವಾಸಿಗರ ಸಂಖ್ಯೆ. ಪುರುಷರಿಗಿಂತ ಮಹಿಳೆಯರು ಹೆಚ್ಚು. ಕಡಲ ತೀರಕ್ಕೆ ಆಗಮಿಸುತ್ತಿರುವ ಮಹಿಳಾಮಣಿಗಳು. ಆದರೆ ಸೈಕ್ಲೋನ್ ಎಫೆಕ್ಟ್ ಯಾರೂ ಸಮುದ್ರದತ್ತ ಸುಳಿಯದಂತೆ ಜಿಲ್ಲಾ ಡಳಿತ ಹೈವೇವ್ ಎಚ್ಚರಿಕೆ ನೀಡಿದೆ. ಇದ್ಯಾವುದೂ ಲೆಕ್ಕಿಸದೇ ಸಮುದ್ರದ ದಡಕ್ಕೆ ಬಂದ ಪ್ರವಾಸಿಗರು. ಯಾವುದೇ ಲೈಫ್ ಜಾಕೆಟ್ ಇಲ್ಲದೆ ದೈತ್ಯೆ ಅಲೆಗಳ ಮಧ್ಯೆ ಹುಚ್ಚಾಟ ಆಡುತ್ತಿದ್ದಾರೆ. ಲೈಫ್‌ಗಾರ್ಡ್ ಮಾತಿಗೆ ಕ್ಯಾರೆ ಎನ್ನದೇ ಅಪಾಯಕಾರಿ ಬಂಡೆಗಲ್ಲುಗಳ ಮೇಲೆ ನಿಲ್ಲುತ್ತಿರುವ ಮಹಿಳೆಯರು. ಪ್ರಾಣ ಕಳೆದುಕೊಳ್ಳುವ ಆತಂಕವಿದ್ರೂ ಡೋಂಟ್ ಕೇರ್. ಪ್ರವಾಸಿಗರ ಹುಚ್ಚಾಟದಿಂದ ಲೈಫ್‌ಗಾರ್ಡ್‌ಗಳಿಗೆ ಪ್ರಾಣಸಂಕಟ ಅನುಭವಿಸುವಂತಾಗಿದೆ.
undefined
ಮುರ್ಡೇಶ್ವರದಲ್ಲಿ ಸಮುದ್ರಕ್ಕಿಳಿಯುವುದಕ್ಕೆ ನಿರ್ಬಂಧ: ಭಟ್ಕಳ ಸಹಾಯಕ ಆಯುಕ್ತರ ಆದೇಶ
ಒಂದೆಡೆ ದೈತ್ಯಾಕಾರದಲ್ಲಿ ಬಂದು ದಡಕ್ಕೆ ಅಪ್ಪಳಿಸುತ್ತಿರುವ ಅಲೆಗಳು. ಇನ್ನೊಂದೆಡೆ ಯಾವುದೇ ಸುರಕ್ಷಕ್ರಮ ಇಲ್ಲದೆ ಮೈಮರೆತು ಆಟವಾಡುತ್ತಿರುವ ಪ್ರವಾಸಿಗರು ನಿನ್ನೆಯಷ್ಟೆ ಪ್ರವಾಸಿಗ ಇಂಥ ಹುಚ್ಚಾಟಕ್ಕೆ ಇಳಿದು ಸಮುದ್ರಪಾಲಾಗಿದ್ದ. ಆದರೂ ಎಚ್ಚೆತ್ತುಕೊಳ್ಳದ ಪ್ರವಾಸಿಗರು. ಪ್ರವಾಸಿಗರು ಕಡಲಿನತ್ತ ಹೋಗದಂತೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಪ್ರವಾಸಿಗರು ಬರುತ್ತಿದ್ದಾರೆ.