‘ಕಾಂತಾರ’ ಸಿನಿಮಾ ಪೋಸ್ಟರ್‌ ಮೇಲೆ ಅವಹೇಳನ ಬರಹ: ಜನರ ಆಕ್ರೋಶ

By Kannadaprabha News  |  First Published Oct 8, 2022, 1:30 AM IST

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಹಾಕಲಾದ ‘ಕಾಂತಾರ’ ಚಿತ್ರದ ಪೋಸ್ಟರ್‌ ಮೇಲೆ ಅವಹೇಳನಕಾರಿಯಾಗಿ ಬರೆದ ಕಿಡಿಗೇಡಿಗಳು 


ಶಿವಮೊಗ್ಗ(ಅ.08):  ಕಾಂತಾರ ಸಿನಿಮಾ ಪೋಸ್ಟರ್‌ ಮೇಲೆ ಕಿಡಿಗೇಡಿಗಳು ಅಶ್ಲೀಲ ಬರಹ ಬರೆದು ದೇವರನ್ನು ಅಪಮಾನಿಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಹಾಕಲಾದ ‘ಕಾಂತಾರ’ ಚಿತ್ರದ ಪೋಸ್ಟರ್‌ ಮೇಲೆ ಕಿಡಿಗೇಡಿಗಳು ಅವಹೇಳನಕಾರಿಯಾಗಿ ಬರೆದಿದ್ದಾರೆ. ಸಿನಿಮಾ ಪೋಸ್ಟರ್‌ ಮೇಲೆ ಪೆನ್ನಿನಲ್ಲಿ ಬರೆದಿರುವ ಬರಹ ಇದಾಗಿದ್ದು, ಕಪ್ಪುಬಣ್ಣದ ಬರಹ ಎದ್ದು ಕಾಣುವಂತಿತ್ತು. ಬೆಳಗ್ಗೆ ಪೋಸ್ಟರ್‌ನಲ್ಲಿ ಅವಹೇಳನಕಾರಿ ಬರಹ ಗಮನಿಸಿದ ಕೆಲವರು ಕೂಡಲೇ ಜಯನಗರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಅವಹೇಳನಕಾರಿ ಬರಹವನ್ನು ಅಳಿಸಿ ಹಾಕಿದರು.

ಸಿನಿಮಾ ಪೋಸ್ಟರ್‌ ಮೇಲೆ ಕಿಡಿಗೇಡಿಗಳು ಅವಹೇಳನವಾಗಿ ಬರೆದಿರುವುದು ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಘಟನೆಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಪೊಲೀಸರು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

Tap to resize

Latest Videos

Kantara; ಸರ್ಕಾರಿ ಶಾಲೆಯ ರೆಕಾರ್ಡ್ ಬ್ರೇಕ್ ಮಾಡಿದೆ ಕಾಂತಾರ- ಪ್ರಮೋದ್ ಶೆಟ್ಟಿ

ಇನ್ನು ಪ್ರಕೃತಿ ಮತ್ತು ಮನುಷ್ಯರ ಸಂಬಂಧ ಕುರಿತು ‘ಕಾಂತಾರ’ ಚಿತ್ರ ಎಲ್ಲ ಕಡೆ ಜನಪ್ರಿಯವಾಗಿದೆ. ಸಿನಿಮಾ ಪೋಸ್ಟರ್‌ ಅನ್ನೇ ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ದೇವರನ್ನು ಅಪಮಾನಿಸುವ ಬರಹ ಬರೆದಿದ್ದಾರೆ. ಈ ಬರಹ ಸಿನಿಮಾಕ್ಕೆ ಸಂಬಂಧಿಸಿ ಬರೆಯಲಾಗಿದೆಯೋ ಅಥವಾ ಬೇರೆ ಉದ್ದೇಶಗಳಿವೆಯೋ ಎನ್ನುವುದು ಬರೆದಿರುವುದು ಯಾರು ಎಂಬುದು ಪೊಲೀಸ್‌ ತನಿಖೆಯಿಂದ ಹೊರಬರಬೇಕಿದೆ.
 

click me!