ಪಶು ಸಂಗೋಪನಾ ಇಲಾಖೆ ಮೂಲಕ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇಲ್ಲವೆಂದರೆ ಜನರಿಗೆ ಯೋಜನೆಗಳನ್ನು ಹೇಗೆ ತಲುಪಿಸುತ್ತಿರಿ. ಅಧಿಕಾರಿಗಳ ಈ ವರ್ತನೆ ಕಂಡ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಭೆಯಲ್ಲಿದ್ದ ಅಧಿಕಾರಿಗಳನ್ನೇ ತರಾಟೆಗೆ ಪಡೆದು ಅಸಮಾಧಾನ ವ್ಯಕ್ತಪಡಿಸಿರೋ ಬಾಗಲಕೋಟೆಯಲ್ಲಿ ನಡೆಯಿತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.14): ಪಶು ಸಂಗೋಪನಾ ಇಲಾಖೆ ಮೂಲಕ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇಲ್ಲವೆಂದರೆ ಜನರಿಗೆ ಯೋಜನೆಗಳನ್ನು ಹೇಗೆ ತಲುಪಿಸುತ್ತಿರಿ. ಅಧಿಕಾರಿಗಳ ಈ ವರ್ತನೆ ಕಂಡ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಭೆಯಲ್ಲಿದ್ದ ಅಧಿಕಾರಿಗಳನ್ನೇ ತರಾಟೆಗೆ ಪಡೆದು ಅಸಮಾಧಾನ ವ್ಯಕ್ತಪಡಿಸಿರೋ ಬಾಗಲಕೋಟೆಯಲ್ಲಿ ನಡೆಯಿತು. ನವನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆ ಯೋಜನೆಗಳ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಪಶು ಸಂಗೋಪನೆ ಇಲಾಖೆ ಸಚಿವನಾಗಿ ಮೂರು ವರ್ಷ ಆಗಿದೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಈ ಯೋಜನೆಗಳ ಮಾಹಿತಿ ಇಲ್ಲವೆಂದರೆ, ಇನ್ನೂ ಜನರಿಗೆ ಯೋಜನೆಗಳನ್ನು ಹೇಗೆ ತಲುಪಿಸುತ್ತೀರಿ ಎಂದು ಸಚಿವರು ಪ್ರಶ್ನಿಸಿದರು.
undefined
ಮಾಹಿತಿ ನೀಡದ ಅಧಿಕಾರಿಗಳಿಂದ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ: ಸಭೆಯಲ್ಲಿ ಇಲಾಖೆ ಅಧಿಕಾರಿಗಳ ಉತ್ತರ ಕಂಡು ಸಚಿವರು ಅಧಿಕಾರಿಗಳಿಗೆ ಸ್ವಷ್ಟವಾದ ಮಾಹಿತಿ ಇಲ್ಲ ಅಂದರೆ ಜನರಿಗೆ ನಿಮ್ಮಿಂದ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ. ಇಲಾಖೆಯ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾ ಪ್ರತಿ ತಿಂಗಳು ಒಂದೊಂದು ತಾಲೂಕಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಕಾರ್ಯವೈಖರಿಯನ್ನು ಪರಿಶೀಲಿಸಿ ತಿದ್ದುವ ಕೆಲಸವಾಗಬೇಕು. ಪ್ರತಿಯೊಂದು ಯೋಜನೆಗಳು ಕೇಳಿದ ತಕ್ಷಣ ಹೇಳುವಂತಾಗಬೇಕು. ಇಲಾಖೆಯ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಜವಾಬ್ದಾರಿ ಅರಿವು ಕೆಲಸ ನಿರ್ವಹಿಸುವಂತೆ ಮಾಡಬೇಕು. ಅಂದಾಗ ಮಾತ್ರ ಸರಕಾರದ ಯೋಜನೆಗಳು ರೈತರಿಗೆ ತಲುಪಿಸಲು ಸಾಧ್ಯವೆಂದರು.
ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಪ್ರವಾಹದ ಎಚ್ಚರಿಕೆ
ಅಂಗನವಾಡಿಗಳಲ್ಲಿ ಹಾಲಿನ ಪುಡಿ ಪೋಲಾಗದಂತೆ ತಡೆಯಲು ಸೂಚನೆ: ಅಂಗನವಾಡಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಂಎಫ್ ವತಿಯಿಂದ ನೀಡುವ 500 ಗ್ರಾಂ ಹಾಲಿನ ಪುಡಿ ನೀಡುತ್ತಿರುವುದರಿಂದ ಅದನ್ನು ತೆರೆಯುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಚೆಲ್ಲುತ್ತಿದ್ದಾರೆ. ಹಾಲಿನ ಪುಡಿ ಚೆಲ್ಲುವುದನ್ನು ತಡೆಗಟ್ಟಲು 500 ಗ್ರಾಂ ಬದಲಾಗಿ 300 ಗ್ರಾಂ ಹಾಲಿನ ಪುಡಿ ಪಾಕೆಟುಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸುನೀಲಕುಮಾರ್ ಮತ್ತು ಜಿ.ಪಂ ಸಿಇಒ ಭೂಬಾಲನ್ ಸಚಿವರಿಗೆ ಮನವಿ ಮಾಡಿದಾಗ ಈ ಬಗ್ಗೆ ಕೆಎಂಎಫ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಈ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಇಲಾಖಾ ಕಾಮಗಾರಿ ತ್ವರಿತಗೊಳಿಸಲು ಸಚಿವರ ಆದೇಶ: ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಶಿಧರ ಮಾತನಾಡಿ ಬೀಳಗಿಯಲ್ಲಿ 20 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಿಸಲಾಗುತ್ತಿದ್ದು, ನರೇಗಾದಡಿ ಕ್ರೀಯಾ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಶೆಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಕ್ಟೋಬರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜಿಲ್ಲಾ ಗೋಶಾಲೆ ಅಲ್ಲದೇ ಎರಡು ಗೋಶಾಲೆಗಳು ಮಂಜೂರಾಗಿದ್ದು, ಈಗಾಗಲೇ ಗೋಶಾಲೆಗಳಿಗೆ ಜಾಗ ಗುರ್ತಿಸಲಾಗಿದ್ದು, ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಮಂಜೂರು ಮಾಡಿಕೊಡುವುದಾಗಿ ತಿಳಿಸಿದ್ದಾರೆಂದು ಸಭೆಗೆ ತಿಳಿಸಿದರು.
ಜಾನುವಾರ ಗರ್ಭಧಾರಣೆಯಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ 6ನೇ ಸ್ಥಾನ: ಜಾನುವಾರು ಗರ್ಭಧಾರಣೆಯಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ ಆರನೇ ಸ್ಥಾನ ಪಡೆದುಕೊಂಡಿದೆ. ಜಾನುವಾರು ಸಂಖ್ಯೆ ಕಡಿಮೆಯಾಗಿದೆಯಾದರೂ ಹಾಲು ಉತ್ಪಾದನೆಯಲ್ಲಿ ಮುಂದಿದ್ದೇವೆ. ರಬಕವಿ-ಬನಹಟ್ಟಿ ಹಾಗೂ ಹುನಗುಂದದಲ್ಲಿ ಗೋಶಾಲೆ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತಿದೆ. ಅಮೀನಗಡದ ಪಾಲಿಕ್ಲಿನಿಕ್ ಕಟ್ಟಡ ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಂಡರು. ಜಿಲ್ಲೆಯಲ್ಲಿ 18 ಪಶು ಆಸ್ಪತ್ರೆ, 84 ಪಶು ಚಿಕಿತ್ಸಾಲಯ, 37 ಪ್ರಾಥಮಿಕ ಪಶು ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿವೆ ಎಂದರು.
ಬಾಗಲಕೋಟೆ ಡಿಸಿ & ಎಸ್.ಪಿಗೆ ಅಭಿನಂದಿಸಿದ ಸಚಿವ ಚವ್ಹಾಣ್: ಗೋಹತ್ಯೆ ನಿಷೇಧ ಕಾಯ್ದೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಉಲ್ಲಂಘನೆಯಾಗದಂತೆ ಮೂಖ ಪ್ರಾಣಿ ಸಂರಕ್ಷಣೆ ಮಾಡಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ಸಚಿವರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಬಾಗಲಕೋಟೆ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಮಾದರಿ ಗೋಶಾಲೆ ಮತ್ತು ನೂತನವಾಗಿ ನಿಮಾ೯ಣವಾಗುತ್ತಿರೋ ಬಿಜೆಪಿ ಕಚೇರಿ ಕಟ್ಟಡಕ್ಕೆ ಸಚಿವರ ಭೇಟಿ: ಬಾಗಲಕೋಟೆ ಪಟ್ಟಣದ ಹೊರವಲಯದ ಮುಚಖಂಡಿ ಬಳಿ ಇರುವ ಪಾಂಜರಪೋಳ್ ಮಾದರಿ ಗೋಶಾಲೆಗೆ ಭೇಟಿ ನೀಡಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಗೋಹತ್ಯೆ ತಡೆಗಟ್ಟಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ವಶಪಡಿಸಿಕೊಂಡ ಗೋವುಗಳನ್ನು ಪರಿಶೀಲಿಸಿದರು. ಅಲ್ಲದೆ ಗೋವುಗಳಿಗೆ ಹೆಚ್ಚಿನ ಮೇವು ನೀಡುವಂತೆ ಗೋಶಾಲೆ ಅಧ್ಯಕ್ಷರಿಗೆ ಸೂಚನೆ ನೀಡಿದರು ಇನ್ನು ಪಟ್ಟಣದ ನವನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ಬಿಜೆಪಿ ಕಟ್ಟಡ ಕಾಮಗಾರಿಯನ್ನು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ವೀಕ್ಷಣೆ ಮಾಡಿದರು.
ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳಿಗೆ Hescom ಶಾಕ್, ಕತ್ತಲಲ್ಲಿ ಜನ
ಕೆರೂರ ಗಲಾಟೆಯಲ್ಲಿ ಗಾಯಗೊಂಡವರ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಘರ್ಷಣೆ ವೇಳೆ ಹಲ್ಲೆಗೊಳಗಾಗಿ ಪಟ್ಟಣದ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆಯ ಸದಸ್ಯ ಅರುಣ್ ಕಟ್ಟಿಮನಿ, ಲಕ್ಷ್ಮಣ, ಯಮನೂರ್ ಹಾಗೂ ಮಿರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಪಾಲ್ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ರವಿ ಚವ್ಹಾಣ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ್, ಮಲ್ಲಯ್ಯ ಮೂಗನೂರುಮಠ, ಎಸ್.ಸಿ ಮೋರ್ಚಾ ಕಾರ್ಯದರ್ಶಿ ಚಂದ್ರಕಾಂತ್ ಖಾತೆದಾರ್, ಒಬಿಸಿ ಮೋರ್ಚಾದ ಮಂಜು ಬಜಣ್ಣನವರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.