ರಾಜಧನ ವಂಚನೆ ತಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮಾಸಿಕ ವರದಿ ಕೇಳಲು ಮುಂದಾಗಿರುವುದು ಕ್ರಷರ್ ಮಾಲೀಕರು ಹಾಗು ಕ್ವಾರಿ ಲೀಸ್‌ದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ.ಚಿನ್ನದ ಮೊಟ್ಟೆಯಂತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ರಾಜಧನ ಸೋರಿಕೆ ತಡೆಗಟ್ಟಲು ರಾಜ್ಯ ಸರ್ಕಾರದ ಮೇಲೆ ಕಣ್ಣು ಬಿದ್ದಿದೆ.
,ಗುಂಡ್ಲುಪೇಟೆ : ರಾಜಧನ ವಂಚನೆ ತಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮಾಸಿಕ ವರದಿ ಕೇಳಲು ಮುಂದಾಗಿರುವುದು ಕ್ರಷರ್ ಮಾಲೀಕರು ಹಾಗು ಕ್ವಾರಿ ಲೀಸ್‌ದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ.ಚಿನ್ನದ ಮೊಟ್ಟೆಯಂತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ರಾಜಧನ ಸೋರಿಕೆ ತಡೆಗಟ್ಟಲು ರಾಜ್ಯ ಸರ್ಕಾರದ ಮೇಲೆ ಕಣ್ಣು ಬಿದ್ದಿದೆ.
ರಾಜಧನ ವಂಚನೆ ತಡೆಯಲು ಗಣಿ ಮತ್ತು ಭೂ ಇಲಾಖೆ ವಿನೂತನ ಮಾದರಿಯಲ್ಲಿ ಕ್ರಷರ್‌ನ ಯಂತ್ರಗಳ ಚಾಲನೆ,ರಾ ಮೆಟಿರಿಯಲ್ ಸಂಗ್ರಹ,ವಿದ್ಯುತ್ ಬಿಲ್ ಆಧಾರದಲ್ಲಿ ರಾಜಧನ ಸಂಗ್ರಹ ಹಾಗು ಸೋರಿಕೆ ತಡೆಗೆ ಮುಂದಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಣ್ಣಿಗೆ ಮಣ್ಣು ಎರಚಿ ಬಹುತೇಕ ಕ್ರಷರ್‌ಗಳು ರಾಯಲ್ಟಿ ಕಟ್ಟದೆ ರಾ ಮೆಟಿರಿಯಲ್ ಖರೀದಿ ಮಾಡುತ್ತಿದ್ದಾರೆ. ಅಲ್ಲದೆ ಕ್ರಸರ್ ಉತ್ನನ್ನಗಳ ಮಾರಾಟದಲ್ಲೂ ಎಂಡಿಪಿಯಲ್ಲೂ ವಂಚಿಸುತ್ತಿದ್ದಾರೆಂಬ ಆರೋಪ ಸಾಕಷ್ಟು ಕೇಳಿ ಬಂದಿತ್ತು.
undefined
ಕಲ್ಲು ಗಣಿಗಾರಿಕೆಯಲ್ಲಿ ಸೋರಿಕೆಯಾಗುತ್ತಿದ್ದ ರಾಜಧನ ತಡೆಯಲು ವಿನೂತನ ಪ್ರಯೋಗದ ಸುತ್ತೋಲೆ ಪ್ರಕಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪದ್ಮಜ ತಂಡ ರಚಿಸಿದ್ದಾರೆ. ಈಗಾಗಲೇ ಜಿಲ್ಲೆಯ ೧೫ ಕ್ರಷರ್ ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುತ್ತೋಲೆ ಹಿಂಗಿದೆ:
ಕ್ರಷರ್ ಮಾಲೀಕರು ಕಚ್ಛಾ ವಸ್ತುವಾದ ಕಟ್ಟಡದ ಕಲ್ಲನ್ನು ಯಾವ ಯಾವ ಕಲ್ಲು ಗಣಿ ಗುತ್ತಿಗೆಗಳಿಂದ ಪಡೆಯುತ್ತಿದ್ದಾರೆ? ಎಂಬುದನ್ನ ಮಾಹೆಯಾನ ಪರಿಶೀಲಿಸಿ, ಗಣಿಗಾರಿಕೆ ನಡೆಸಲಾದ ಪ್ರಮಾಣ/ವಿದ್ಯುತ್ ಬಳಕೆ, ಶುಲ್ಕದ ಬಿಲ್ಲಿನ ಆಧಾರದ ಮೇರೆಗೆ ಎಷ್ಟು ಪ್ರಮಾಣದ ಬೋಡ್ರೇಸ್ ಗಳನ್ನು ಪುಡಿ ಮಾಡಿದೆ. ಕಟ್ಟಡದ ಕಲ್ಲಿನ ಅಂತಿಮ ಉತ್ಪನ್ನಗಳಾದ ಎಂ.ಸ್ಯಾಂಡ್,ಜಲ್ಲಿ ಮತ್ತು ಇತ್ಯಾದಿಗಳನ್ನು ತಯಾರಿಸಿರುವ ಮಾಹಿತಿಯನ್ನು ಪಡೆಯಲು ಹಾಗು ಕ್ರಷರ್ ಘಟಕದ ಮಾಲೀಕರು ಖನಿಜ ರವಾನೆ ಪರವಾನಿಗೆ ಪಡೆಯದೆ, ಅನಧಿಕೃತ ಮೂಲಗಳಿಂದ ಕಚ್ಛಾ ಕಟ್ಟಡದ ಕಲ್ಲನ್ನು ಪಡೆದು ಬಳಕೆ ಮಾಡಿರುವುದು ಕಂಡು ಬಂದಲ್ಲಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ನೀಡಲಾಗಿದೆ.
ಕ್ರಷರ್ ಘಟಕಗಳಲ್ಲಿ ಬಳಸಲಾದ ಕಟ್ಟಡ ಕಲ್ಲಿನ ಪ್ರಮಾಣವನ್ನು ಮಾಹೆವಾರು ಹಾಗು ಸೆಕಂಡರಿ ಪರ್ಮಿಟ್ ವಿತರಿಸುವ ಬಗ್ಗೆ ಪರಿಶೀಲಿಸಿ, ಸಂಬಂಧ ಪಟ್ಟ ಭೂ ವಿಜ್ಞಾನಿಗಳು ಕಚೇರಿಯ ಮುಖ್ಯಸ್ಥರ ಮೂಲಕ ಕೇಂದ್ರ ಕಚೇರಿಗೆ ಮಾಹಿತಿ ಪ್ರತಿ ತಿಂಗಳು ಸಲ್ಲಿಸಬೇಕಿದೆ.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ(ಕಾರ್ಯ ನಿರ್ವಹಿಸುತ್ತಿರುವ ಮತ್ತು ಸ್ಥಗಿತಗೊಂಡಿರುವ) ಕ್ರಷರ್ ಗಳ ಅನುಗುಣವಾಗಿ ಸುತ್ತೋಲೆಯೊಂದಿಗೆ ಅನುಬಂಧದಲ್ಲಿ ಮಾಹಿತಿ ಭರ್ತಿ ಮಾಡಿ ಪ್ರತಿ ತಿಂಗಳ ೧೦ ರೊಳಗೆ ಭೂ ವಿಜ್ಞಾನ ಕೇಂದ್ರ ಕಚೇರಿಗೆ ಕಳುಹಿಸಬೇಕಿದೆ.
ʼಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಂದ್ರ ಕಚೇರಿಯ ಆದೇಶದಂತೆ ಈಗಾಗಲೇ ೧೫ ಕ್ರಷರ್ ಗಳ ಪರಿಶೀಲನೆ ನಡೆಸಿ ಮಾಹಿತಿ ನೀಡಲಾಗಿದೆ.ಮತ್ತೊಂದು ಸಭೆಯ ಬಳಿಕ ಎಲ್ಲಾ ನಿಯಮ ಪಾಲನೆ ಆಗಲಿದೆ.
-ಪದ್ಮಜ,ಉಪ ನಿರ್ದೇಶಕಿ,ಗಣಿ ಮತ್ತು ಭೂ ವಿಜ್ಞಾನ ಇಲಾಖೆ