ಮಾಗಡಿ ದೇವಾಲಯದ ಹುಂಡಿ ತೆರೆದಾಗ ಕಾದಿದ್ದ ಅಚ್ಚರಿ

By Web DeskFirst Published Aug 1, 2019, 7:59 PM IST
Highlights

ದೇವಾಲಯದ ಹುಂಡಿ ತರೆದಾಗ ಅಚ್ಚರಿ ಕಾದಿತ್ತು. ಬ್ಯಾನ್ ಆಗಿ ವರ್ಷಗಳೇ ಉರುಳಿದ್ದರೂ ಆ ನೋಟುಗಳು ಸಿಕ್ಕಿದ್ದವು. ಅಲ್ಲದೇ ಭಕ್ತರು ಈ ದೇವರಿಗೆ ವಿದೇಶಿ ಕರೆನ್ಸಿಯನ್ನು ಅರ್ಪಿಸಿದ್ದಾರೆ.

ಬೆಂಗಳೂರು[ಆ,. 01] ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಗುರಿಯಾಗಿದ್ದ  500 ಹಾಗೂ 1000 ಮುಖ ಬೆಲೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಮಾಗಡಿಯ ತಿರುಮಲೆ ರಂಗನಾಥ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆದ ನೋಟುಗಳು ಕಂಡುಬಂದಿವೆ.

500 ರೂ ಮುಖಬೆಲೆಯ 10 ಹಾಗೂ 1000 ಮುಖಬೆಲೆಯ 3 ನೋಟುಗಳು ದೊರಕಿವೆ. ಇಂದು ಹುಂಡಿಯಲ್ಲಿನ ಹಣ ಏಣಿಕೆ ಕಾರ್ಯ ವೇಳೆ ಸಿಕ್ಕಿವೆ. ಬ್ಯಾನ್ ಆದ ನೋಟುಗಳನ್ನು ಹುಂಡಿಯಲ್ಲಿ ಭಕ್ತಾದಿಗಳು ಹಾಕಿದ್ದಾರೆ.

ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

ಜೊತೆಗೆ ಈ ಬಾರಿ ಹುಂಡಿಯಲ್ಲಿ ವಿಶೇಷವಾಗಿ ವಿದೇಶಿ ಕರೇನ್ಸಿಗಳು ಪತ್ತೆಯಾಗಿವೆ. ಅಮೇರಿಕಾ, ಇಂಗ್ಲೆಂಡ್, ಬ್ಯಾಂಕಾಕ್, ಹಾಗೂ ಯುಎಇ ದೇಶದ ನೋಟುಗಳು ಪತ್ತೆಯಾಗಿವೆ. ಹುಂಡಿಯಲ್ಲಿ ಒಟ್ಟು 27,87,160 ರೂ.  ಸಂಗ್ರಹವಾಗಿತ್ತು.

2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಘೋಷಣೆ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಮಾಡಿತ್ತು. ಕಪ್ಪು ಹಣಕ್ಕೆ ಕಡಿವಾಣ ಹಾಕಲು ಆಗ ಚಲಾವಣೆಯಲ್ಲಿದ್ದ  500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು  ಬ್ಯಾನ್ ಮಾಡಿದ್ದರು.

click me!