Chikkamagalur: ಸಹಕಾರ ಸಾರಿಗೆ ಆರಂಭಿಸಿ... ಇಲ್ಲಾ  ಬಂದ್ ಅನಿವಾರ್ಯ

By Contributor Asianet  |  First Published Apr 5, 2022, 10:09 PM IST

* ಸಹಕಾರ ಸಾರಿಗೆ ಪುನರಾರಂಭಕ್ಕೆ ಗಡುವು ; ಶೃಂಗೇರಿ ಬಂದ್‌ ಗೆ ನಿರ್ಧಾರ 
* ಮಲೆನಾಡಿಗರ ಜೀವನಾಡಿಯಾಗಿದ್ದ ಸಂಸ್ಥೆ
* ಆರ್ಥಿಕ ಸಂಕಷ್ಟದಿಂದ ಬೀಗ ಹಾಕಿ ಮೂರು ವರ್ಷ
* ಜಿಲ್ಲಾಡಳಿತಕ್ಕೆ ಸಂಘಟನೆಗಳ ಒತ್ತಾಯ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ. 05) ಚಿಕ್ಕಮಗಳೂರು (Chikkamagaluru) ಜಿಲ್ಲೆಯ  ಸಹಕಾರ ಸಾರಿಗೆ (Sahakara Sarige) ಕೇವಲ ನಾಲ್ಕು ಚಕ್ರದ ಬಸ್ಸಲ್ಲ. ಮಲೆನಾಡಿಗರ (Malenadu)ಪಾಲಿನ ರಥ. ಮಕ್ಕಳನ್ನ ಶಾಲೆಗೆ, ವೃದ್ಧರನ್ನ ಆಸ್ಪತ್ರೆಗೆ ಸೇರಿದಂತೆ ಲಕ್ಷಾಂತರ ಜನರನ್ನ ಸಮಯಕ್ಕೆ ಸರಿಯಾಗಿ ಮುಟ್ಟಬೇಕಾದ ಜಾಗ ಮುಟ್ಟಿಸಿದ ಸಮಯ ಸಾಧಕ. ಜೊತೆಗೆ, ಏಷ್ಯಾ ಖಂಡದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾದ ಕಾರ್ಮಿಕರ ಬೆವರಿನ ಸಂಸ್ಥೆ. ಆದರೆ, ಇಂತಹಾ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಅಸಹಕಾರ , ಆರ್ಥಿಕ ಸಂಕಷ್ಟದ ಪರಿಣಾಮ ಬೀಗ ಹಾಕಿ 3 ವರ್ಷಗಳೇ ಕಳೆದಿದೆ.

Tap to resize

Latest Videos

ಸಂಸ್ಥೆಯನ್ನ ಭೋಗ್ಯಕ್ಕೆ ಅಥವಾ ಮಾರಾಟಕ್ಕೆ ಕಾರ್ಮಿಕರು ಚಿಂತಿಸಿದ್ದರೂ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ.ಇದು ಕಾರ್ಮಿಕರಿಗೆ (Labours) ಚಿಂತೆ ಗೆ ಮತ್ತಷ್ಟು ಕಾರಣವಾಗಿ ಹೋರಾಟದ ಹಾದಿಯನ್ನು ಕಾರ್ಮಿಕರು ಹಿಡಿದ್ದಾರೆ. 

ಶೃಂಗೇರಿ ಬಂದ್ ಗೆ (Sringeri) ಕರೆ ನೀಡುವುದು ಅನಿವಾರ್ಯ: ಕೊಪ್ಪದಲ್ಲಿ 3 ವರ್ಷಗಳಿಂದ ಸ್ಥಗಿತವಾಗಿರುವ ಸಹಕಾರ ಸಾರಿಗೆಯನ್ನು ತಕ್ಷಣ ಮತ್ತೆ ಆರಂಭಿಸಬೇಕು ಇಲ್ಲದೇ ಹೋದಲ್ಲಿ ಶೃಂಗೇರಿ ಬಂದ್ ಗೆ ಕರೆ ನೀಡುವುದು ಅನಿವಾರ್ಯ ಆಗುತ್ತದೆ ಎಂದು  ಜಿಲ್ಲಾ ಟ್ರಾನ್ಸ್ ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಇಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ  ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಸಾರಿಗೆ ಸಂಸ್ಥೆಯನ್ನು ಕೂಡಲೇ ಪುನರಾರಂಭಿಸಿ ಕಾರ್ಮಿಕರ ಜೀವನೋಪಾಯಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸಹಕಾರ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ  ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ  ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನ ತಂದಿದೆ ಎಂದರು . ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು ಸಂಸ್ಥಗೆ ಬೀಗ ಹಾಕಿರುವ ಪರಿಣಾಮ ಕಾರ್ಮಿಕರ ಕುಟುಂಬ ಬೀದಿಗೆ ಬಂದಿದೆ. 

ಕೊಪ್ಪ ತಹಶೀಲ್ದಾರ್  ಆಡಳಿತಾಧಿಕಾರಿ ಅಧಿಕಾರಿಯಾಗಿ ವಹಿಸಿಕೊಳ್ಳಲು ಆಗ್ರಹ  ಸಹಕಾರ ಸಾರಿಗೆ ಸಂಸ್ಥೆಗೆ ಹೊಸ  ಆಡಳಿತ ಮಂಡಳಿಯ ಅವಶ್ಯಕತೆಯಿದ್ದು  ಕೊಪ್ಪ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಎರಡು ತಿಂಗಳು ಕಳೆದರೂ ಅಧಿಕಾರ ವಹಿಸಿ ಕೊಂಡಿಲ್ಲ ಎಂದು ಆರೋಪಿಸಿದರು.

Chikkamagalur: ಮಲೆನಾಡಿನಲ್ಲಿ ಸಹಕಾರ ಸಾರಿಗೆ ಬಸ್ ನಿಂತು 3 ವರ್ಷ, ಬೇಕು ಸಹಕಾರ

ಸಂಸ್ಥೆಗೆ ಬೀಗ ಹಾಕಿರುವುದರಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.  ತೆರವುಗೊಳಿಸಿ ಭ್ರಷ್ಟಾಚಾರದ ತನಿಖೆಗೆ ಅನುಕೂಲ ಮಾಡಿಕೊಡಬೇಕು. ನೂತನ ಆಡಳಿತ ಮಂಡಳಿ ರಚನೆ ಮಾಡಬೇಕೆಂದು ಒತ್ತಾಯಿಸಿದರು ಇದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದೇ ಇದ್ದಲ್ಲಿ  ಏಪ್ರೀಲ್ 14 ರಂದು ಕೊಪ್ಪ ತಾಲ್ಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹ ಹಾಗೂ ಏಪ್ರೀಲ್ 22 ರಂದು ಶೃಂಗೇರಿ ಕ್ಷೇತ್ರವನ್ನು ಬಂದ್ಗೆ ಕರೆ ಕೊಡುವುದಾಗಿ ಎಚ್ಚರಿಸಿದ್ದಾರೆ. ಸಂಘದ ಅಧ್ಯಕ್ಷ ಹೆಚ್.ಆರ್.ಸಂಜೀವ, ಉಪಾಧ್ಯಕ್ಷ ಎಚ್.ಸಿ.ಕಟ್ಟೇಗೌಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸಹಕಾರ ಸಂಸ್ಥೆಗೆ ಸರ್ಕಾರದಿಂದ ಸಿಕ್ಕಿದ್ದು ಬರೀ ಅಸಹಕಾರ. ಇದರಿಂದ ಈ ಸಂಸ್ಥೆಯಲ್ಲಿ ಇರುವ 300 ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕಳೆದ 3 ವರ್ಷಗಳಿಂದ ಕಾರ್ಮಿಕರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿ ಮಾಡಿರುವ ಸಾಲಕ್ಕೆ ಬಸ್ ಗಳನ್ನು ಹರಾಜು ಹಾಕುವ ಯತ್ನವೂ ಒಮ್ಮೆ ನಡೆದಿದೆ.  ಸರ್ಕಾರ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.

click me!