Chamarajanagara Quarry Tragedy ದುರಂತ ನಡೆದು ತಿಂಗಳಾದರೂ ಗುತ್ತಿಗೆ ಪಡೆದಿದ್ದ ಹಕೀಂ ಬಂಧನವಿಲ್ಲ

By Suvarna News  |  First Published Apr 5, 2022, 9:26 PM IST
  • ಗಣಿ ದುರಂತ ನಡೆದು ತಿಂಗಳಾದರೂ ಉಪ ಗುತ್ತಿಗೆ ಪಡೆದಿದ್ದ ಹಕೀಂ ಬಂಧನವಿಲ್ಲ 
  •  ರಾಜ್ಯದಿಂದ ರಾಜ್ಯಕ್ಕೆ ಪಲಾಯನ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸ್ತಿರೋ ಆರೋಪಿ. 
  •  ಸತ್ತವರಿಗೆ ಪರಿಹಾರ ಕೊಡಿಸುವಂತೆ ಸರ್ಕಾರ,ಅಧಿಕಾರಿಗಳಿಗೆ ಮನವಿ. 

ವರದಿ: ಪುಟ್ಟರಾಜು. ಆರ್.ಸಿ.  ಏಷಿಯಾನೆಟ್  ಸುವರ್ಣ ನ್ಯೂಸ್ ‌

ಚಾಮರಾಜನಗರ (ಎ.5): ಆ ಗಣಿ ದುರಂತ ನಡೆದು ತಿಂಗಳಾಯ್ತು. ಆದ್ರೂ ದುರಂತಕ್ಕೆ ಕಾರಣವಾದ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಯಾವ ಅಧಿಕಾರಿಯನ್ನು ಹೊಣೆ ಮಾಡಿಲ್ಲ. ಸತ್ತವರಿಗೆ ಪರಿಹಾರವೂ ಸಿಗಲಿಲ್ಲ. ಇದೆಲ್ಲವನ್ನೂ ನೋಡ್ತಿದ್ರೆ ಗಡಿಜಿಲ್ಲೆಯ ಗಣಿ ಲಾಭಿಗೆ ಸರ್ಕಾರ ,ಅಧಿಕಾರಿಗಳು ಮಣಿದ್ರಾ? ಎಂಬ ಅನುಮಾನ ಕಾಡ್ತಿದೆ.

Tap to resize

Latest Videos

undefined

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡದಲ್ಲಿ ಅನೇಕ ವರ್ಷಗಳಿಂದ ಗಣಿಗಾರಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿತ್ತು. ಈ ಸ್ಥಳದಲ್ಲಿ ಕಳೆದ ತಿಂಗಳು ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿ ಐವರು ಗಾಯಗೊಂಡಿದ್ರು. ಆದ್ರೆ ಘಟನೆ ನಡೆದು ಒಂದು ತಿಂಗಳಾದ್ರೂ ಘಟನೆಗೆ ಕಾರಣನಾದ ಪ್ರಮುಖ ಆರೋಪಿ ಕೇರಳ ಮೂಲದ ಹಕೀಂ ನನ್ನು ಇದೂವರೆಗೂ ಬಂಧಿಸಿಲ್ಲ. ಅಲ್ಲದೇ ಗಣಿ ದುರಂತಕ್ಕೆ ಈ ವರೆಗೂ ಯಾವ ಅಧಿಕಾರಿಯನ್ನು ಹೊಣೆಗಾರನನ್ನಾಗಿ ಸರ್ಕಾರ ಮಾಡಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಖಡಕ್ ಸೂಚನೆ ನೀಡಿ ಪ್ರಮುಖ ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಎಂದು ಹೇಳಿ ಹದಿನೈದು ದಿನವಾದ್ರೂ ಅವರ ಮಾತಿಗೆ ಯಾವೊಬ್ಬ ಅಧಿಕಾರಿಯೂ ಸಹಾ ತಲೆಕೆಡಿಸಿಕೊಂಡಿಲ್ಲ. ಇದು ಜಿಲ್ಲೆಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Hassan Slave ಅರಸೀಕೆರೆಯಲ್ಲಿ ಕೂಲಿ ಅರಸಿ ಬಂದ 53 ಮಂದಿಯನ್ನು ಕೂಡಿ ಹಾಕಿ ಚಿತ್ರಹಿಂಸೆ!

ಇನ್ನು ಪೊಲೀಸ್ ಇಲಾಖೆ ಹಕೀಂ ನನ್ನು ಬಂಧಿಸಲು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಶೋಧ ನಡೆಸಲಾಗಿದೆ. ಆದ್ರೆ ಹಕೀಂ ಪ್ರತಿದಿನವೂ ರಾಜ್ಯದಿಂದ ರಾಜ್ಯಕ್ಕೆ ಸ್ಥಳ ಬದಲಾವಣೆ ಮಾಡುತ್ತಿದ್ದಾನೆ. ಹೀಗಾಗಿ ಈತನ ಬಂಧನ ಸವಾಲಾಗಿ ಪರಿಣಮಿಸಿದೆ. ಇನ್ನೂ ಈಗಾಗಲೇ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಹಕೀಂ ವಿರುದ್ದ ಕೇರಳದಲ್ಲೂ ಮೂರು,ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ. ಆತನ ಸ್ನೇಹಿತರು ಸಹ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಿದ್ದಾರೆ‌. ಇವರ ಸಹಾಯ ಪಡೆದು ಆತ ತಲೆಮರೆಸಿಕೊಳ್ಳುತ್ತಿರುವ ಸಂಭವ ಸಹ ಇದೆ ಎಂಬುದು ಪೋಲಿಸ್ ಅಧಿಕಾರಿಗಳ ಅಭಿಪ್ರಾಯ.

ಗಣಿ ದುರಂತದಲ್ಲಿ ಮೃತಪಟ್ಟ ಮೂವರಿಗೂ ಯಾವುದೇ ಪರಿಹಾರ ಸಹಾ ಸಿಕ್ಕಿಲ್ಲ. ಮತ್ತು ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ತಲೆದಂಡವೂ ಆಗಿಲ್ಲ. ಒಟ್ಟಾರೆ ಇದೆಲ್ಲವನ್ನೂ ನೋಡ್ತಿದ್ರೆ ಚಾಮರಾಜನಗರ ಜಿಲ್ಲೆಯಲ್ಲಿ ಗಣಿಧಣಿಗಳ ಪ್ರಭಾವಕ್ಕೆ ಸರ್ಕಾರ ಮಣಿದಿದೆಯಾ ಎಂಬ ಅನುಮಾನ ಕಾಡುತ್ತದೆ.

Kolara Mango Market : ಹಲಾಲ್ - ಝಟ್ಕಾ ಕಟ್ ಆಯ್ತು ಇದೀಗ ಮಾವು ಕಟ್!

click me!