ಆಶಾ ಕಾರ್ಯಕರ್ತೆರಿಗೆ ವಿವಿಧ ಸೌಲಭ್ಯ ಒದಗಿಸಲು ಒತ್ತಾಯ; ಪ್ರತಿಭಟನೆ

By Ravi Janekal  |  First Published Dec 27, 2022, 9:38 PM IST

ಆರ್‌ಸಿಹೆಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಿ, ರೊಟೀನ್ ಕೆಲಸಗಳು ಮತ್ತು ಇತರ ನಿಗದಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಮಾಸಿಕ ಗೌರವಧನ ನಿಗದಿ ಪಡಿಸಬೇಕೆಂದು ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.


ದಾವಣಗೆರೆ. (ಡಿ 27) : ಆರ್‌ಸಿಹೆಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಿ, ರೊಟೀನ್ ಕೆಲಸಗಳು ಮತ್ತು ಇತರ ನಿಗದಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಮಾಸಿಕ ಗೌರವಧನ ನಿಗದಿ ಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಯುಟಿಯುಸಿ ಪದಾಧಿಕಾರಿಗಳ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಆಶಾ ಕಾರ್ಯಕರ್ತೆ(ASHA Workers)ಯರು ಕಳೆದ 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗುವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಸದಾ ಅರಿವು ನೀಡುವುದು, ಗ್ರಾಮ ನೈರ್ಮಲ್ಯ, ವಿವಿಧ ಸರ್ವೆಗಳನ್ನು ಕಾಲ ಕಾಲಕ್ಕೆ ಮಾಡುವುದು ಸೇರಿದಂತೆ ಸೇವೆ ಕಲ್ಪಿಸುವುದಕ್ಕೆ ಇಲಾಖೆ ಮತ್ತು ಜನತೆಯ ಕೊಂಡಿಯಾಗಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವರು. ಹಗಲಿರುಳು ಸಲ್ಲಿಸುತ್ತಿರುವ ಇವರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನ ಸಂಪೂರ್ಣವಾಗಿ ಸಿಗದೇ ಸಾವಿರಾರು ರೂ. ನಷ್ಟ ಅನುಭವಿಸುತ್ತಿದ್ದೇವೆ.

Tap to resize

Latest Videos

ದಾವಣಗೆರೆ ಕೃಷಿ ಮಾರುಕಟ್ಟೆಯಲ್ಲಿ ರೌಡಿ ಕಾಟ; ಮಟ್ಟಹಾಕುವಂತೆ ರೈತರ ಆಗ್ರಹ

ಆರ್ ಸಿ ಹೆಚ್ ಪೋರ್ಟಲ್(RCH Portal) ನಿಂದ ಪ್ರೋತ್ಸಾಹಧನ ಪಾವತಿ ಮಾಡುವುದನ್ನು ನಿಲ್ಲಿಸಬೇಕು. "ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ರೂ.5000, ನಿಗದಿತ ರೊಟೀನ್ ಚಟುವಟಿಕೆಗಳ ನಿಶ್ಚಿತ ಗೌರವಧನ ರೂ.2000 ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನ ಸರಾಸರಿ ರೂ.5000 ಗಳನ್ನು ಒಟ್ಟು ಗೂಡಿಸಿ ಮಾಸಿಕ ರೂ.12,000 ಒಂದೇ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿಸಬೇಕು.

ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯೇ ಸರಿ ಇಲ್ಲ ಅನ್ನೋದು ತಪ್ಪು: ಸಚಿವ ಸುಧಾಕರ್‌

ಕಳೆದ 2 ವರ್ಷಗಳಿಂದ ಕಾರ್ಯಕರ್ತೆಯರಿಗೆ ಆಗಿರುವ ಆರ್ಥಿಕ ನಷ್ಟವನ್ನು ತುಂಬಿ ಕೊಡಲು ಹಿಂಬಾಕಿ ರೂಪದಲ್ಲಿ ನಷ್ಟ ಪರಿಹಾರ ನೀಡಬೇಕು. ಹಾಗೆಯೇ ಕಳೆದ 2 ವರ್ಷದಿಂದ ಕೋವಿಡ್-19, ನಾನ್-ಎಮ್ಸಿಟಿಎಸ್ ರೂ.2000, ಟೀಮ್ ಬೇಸ್ಟ್ ಇನ್ ಸೆಂಟಿವ್‌ ಯಾರಿಗೆ ಬಂದಿಲ್ಲ ಅವರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು.ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಅವರ ಗೌರವಧನವನ್ನು ಹೆಚ್ಚಿಗೆ ಮಾಡಿ ಸರ್ಕಾರದಿಂದ ಆದೇಶ ಮಾಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಿಪ್ಪೇಸ್ವಾಮಿ, ಲೀಲಾವತಿ,ಮಂಜುಳಾ ಕೊಂಡದಹಳ್ಳಿ,ಅನಿತಾ,ಲಲಿತ, ಪರ್ವಿನ್ ಬಾನು,ಸುಮಾ ನಲ್ಲೂರು,ರೀತಾ ಮತ್ತಿತರರಿದ್ದರು.

click me!