ಜೋಯಿಡಾ-ಕಾರವಾರ ನಡುವೆ ಅಣಶಿ ಗುಡ್ಡ ಕುಸಿತದ ಪರಿಣಾಮ ಬಂದ್ ಆದ ಬಸ್‌ಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ತಾಲೂಕಿನ ಜನತೆ ಆಗ್ರಹಿಸಿದ್ದಾರೆ
ಜೋಯಿಡಾ (ಆ.1) : ಜೋಯಿಡಾ-ಕಾರವಾರ ನಡುವೆ ಅಣಶಿ ಗುಡ್ಡ ಕುಸಿತದ ಪರಿಣಾಮ ಬಂದ್ ಆದ ಬಸ್‌ಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ತಾಲೂಕಿನ ಜನತೆ ಆಗ್ರಹಿಸಿದ್ದಾರೆ ಕಳೆದ 25 ದಿನಗಳಿಂದ ಅಣಶಿ ಮಾರ್ಗವಾಗಿ ಕಾರವಾರಕ್ಕೆ, ಬೆಳಗಾವಿ-ದಾಂಡೇಲಿ-ಹುಬ್ಬಳ್ಳಿಗೆ ಸಂಚರಿಸುವ ಸಾರಿಗೆ ಬಸ್‌ಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ತುಂಬ ಹಿಂಸೆ ಅನುಭವಿಸುವಂತಾಗಿದೆ. ಜೋಯಿಡಾದ ಜನತೆಗೆ ಪಕ್ಕದಲ್ಲೇ ಕಾರವಾರ ಇದ್ದರೂ ಹಳಿಯಾಳ ಯಲ್ಲಾಪುರ ಅಂಕೋಲಾ ಸುತ್ತಿ ಕಾರವಾರ ಸೇರುವ ಸ್ಥಿತಿ ಬಂದಿದೆ.
ಜೋಯಿಡಾ: ಒಲೆ ಬೆಂಕಿಯ ಬೆಳಕಲ್ಲಿ ಮಕ್ಕಳ ವಿದ್ಯಾಭ್ಯಾಸ..!
undefined
ಕಾರವಾರ :- ಅಣಶಿ ಘಟ್ಟದಲ್ಲಿ ನಿರಂತರ ಗುಡ್ಡ ಕುಸಿತ ಹಿನ್ನಲೆ ಅಣಶಿ ಘಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ನೀಡಿದ್ದರು ರಾತ್ರಿವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಪ್ರತಿ ಮಳೆಗಾಲಕ್ಕೂ ಗುಡ್ಡ ಕುಸಿತ, ವಾಹನ ಸಂಚಾರ ನಿಷೇಧ ಆಗುತ್ತಲೇ ಇದೆ.
ಅಣಶಿ ಘಟ್ಟದ ದಾರಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಮಳೆಗಾಲದಲ್ಲಿ ಎಲ್ಲ ಕಡೆ ಇದು ಸರ್ವೇ ಸಾಮಾನ್ಯ. ಆದರೆ ಕಳೆದ ವರ್ಷದಂತೆ ಗುಡ್ಡ ಕುಸಿದಿರಲಿಲ್ಲ. ಜಿಲ್ಲಾ ಆಡಳಿತ ಅಗತ್ಯ ಕ್ರಮ ಕೈಕೊಂಡು ಭಾರೀ ವಾಹನ ಹೊರತು ಪಡಿಸಿ ಇನ್ನುಳಿದ ವಾಹನಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ರಾತ್ರಿ ಸಂಚಾರಕ್ಕೂ ಅವಕಾಶ ನೀಡಿದೆ. ಹಾಗೆಯೇ ಸಾರಿಗೆ ವಾಹನಗಳಿಗೂ ಅವಕಾಶ ನೀಡಲಿ ಎನ್ನುವುದು ಪ್ರಯಾಣಿಕರ ಅಭಿಮತ.
Uttara Kannada: ಜೋಯಿಡಾ-ದಾಂಡೇಲಿಯಲ್ಲಿ ಕಾನೂನು ನಿಯಮ ಮೀರಿ ಜಲಸಾಹಸ ಚಟುವಟಿಕೆ
ಕಳೆದ ವಾರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ತಾಲೂಕಿನ ಗ್ರಾಮಸ್ಥರು ಅಣಶಿ ಘಟ್ಟಪ್ರದೇಶದಲ್ಲಿ ಹಗಲು ರಾತ್ರಿ ಸಂಚರಿಸಲು ಅನುಮತಿ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿದ ತಂಡದ ಸೂಚನೆಯಂತೆ ಹಗಲು-ರಾತ್ರಿ ರಸ್ತೆಯಲ್ಲಿ ಸಂಚರಿಸಲು ಆದೇಶ ನೀಡಿದ್ದರು. ಆದರೆ ಗ್ರಾಮಸ್ಥರ ಬಸ್‌ಗಳು ಓಡಾಡಲು ಅನುಮತಿ ಕೊಡಿ ಎಂದು ಪ್ರತ್ಯೇಕವಾಗಿ ಕೇಳಿರಲಿಲ್ಲ. ಈಗ ಸಂಬಂಧ ಪಟ್ಟಸಾರಿಗೆ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕೂಡಲೇ ಈ ಮಾರ್ಗದಲ್ಲಿ ಬಸ್‌ನ ಸೇವೆ ಪ್ರಾರಂಭಿಸಿ ಅನುಕೂಲ ಕಲ್ಪಿಸಿ ಕೊಡಬೇಕಾಗಿದೆ.
ಈ ರಸ್ತೆಯಲ್ಲಿ ಬಸ್ ಸಂಚಾರವಿಲ್ಲದ ಕಾರಣ ನಮಗೆ ಕಾರವಾರ-ಗೋವಾ, ಕರಾವಳಿ ತಾಲೂಕುಗಳಿಗೆ ಹೋಗಲು ಮತ್ತು ಅಸ್ನೋಟಿ, ಕಾರವಾರದ ಕಾಲೇಜು ವಿದ್ಯಾರ್ಥಿಗಳಿಗೂ ತುಂಬ ತೊಂದರೆಯಾಗಿದೆ. ಕೂಡಲೇ ಬಸ್‌ಗಳು ಸಂಚರಿಸಲು ಅವಕಾಶ ಕಲ್ಪಿಸಬೇಕು.
- ದಿನೇಶ ಬಾಂಡೋಳಕರ ಸ್ಥಳೀಯ