ಗ್ರಾಪಂ ಸದಸ್ಯರ ವೇತನ ₹10,000ಕ್ಕೆ ಹೆಚ್ಚಿಸಲು ಆಗ್ರಹ

Published : Dec 12, 2022, 08:14 PM ISTUpdated : Dec 12, 2022, 08:17 PM IST
ಗ್ರಾಪಂ ಸದಸ್ಯರ ವೇತನ ₹10,000ಕ್ಕೆ ಹೆಚ್ಚಿಸಲು ಆಗ್ರಹ

ಸಾರಾಂಶ

ಗ್ರಾಪಂ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಬಾರದು ಹಾಗೂ ಗ್ರಾಪಂ ಸದಸ್ಯರ ಗೌರವಧನವನ್ನು ಸಾವಿರದಿಂದ ಹತ್ತು ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಸೂರ‍್ಯನಾರಾಯಣ ರಾವ್‌ ಹೇಳಿದರು.

ಮಾಲೂರು (ಡಿ.12) : ಗ್ರಾಪಂ ಚುನಾಯಿತಿ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಬಾರದು ಹಾಗೂ ಗ್ರಾಪಂ ಸದಸ್ಯರ ಗೌರವಧನವನ್ನು ಸಾವಿರದಿಂದ ಹತ್ತು ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಸೂರ‍್ಯನಾರಾಯಣ ರಾವ್‌ ಹೇಳಿದರು.

ಅವರು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ತಾಲೂಕಿನ 160 ಪಂಚಾಯತಿ ಸದಸ್ಯರೊಡನೆ ಬೆಂಗಳೂರು ಚಲೋಗೆ ಚಾಲನೆ ನೀಡಿ ಮಾತನಾಡಿದರು.

 ಅಧ್ಯಕ್ಷ ಸ್ಥಾನಕ್ಕಾಗಿ ಗ್ರಾಮ ಪಂಚಾಯತಿಯಲ್ಲೂ ರೆಸಾರ್ಟ್ ಪಾಲಿಟಿಕ್ಸ್

ಎಲ್ಲ ಹಂತದ ಜನಪ್ರತಿನಿಧಿಗಳಿಕ್ಕಿಂತ ಹೆಚ್ಚು ಕಾಲ ಜನರೊಡನೆ ವ್ಯವಯಿಸುವ ಪಂಚಾಯ್ತಿ ಸದಸ್ಯರು ತಮ್ಮ ಕುಟುಂಬದ ನಿರ್ವಹಣೆಗೆ ಕೆಲಸ ಮಾಡದೆ ದಿನದ ಇಪ್ಪತ್ತಾಲ್ಕು ಗಂಟೆ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ ನಮ್ಮಗೆ ನೀಡುತ್ತಿರುವ ಗೌರವಧನ ಕೇವಲ ಒಂದು ಸಾವಿರ ರು.ಮಾತ್ರ. ಇದನ್ನು ಸದಸ್ಯರಿಗೆ ಹತ್ತು ಸಾವಿರ ,ಅಧ್ಯಕ್ಷರಾದವರಿಗೆ 15 ಸಾವಿರ ನೀಡಬೇಕೆಂದ ಸೂರ‍್ಯನಾರಾಯಣ ಅವರು ಕೇರಳದಂತೆ ಪಂಚಾಯ್ತಿ ಸದಸ್ಯರಿಗೆ ಹತ್ತು ಸಾವಿರ, ಅಧ್ಯಕ್ಷರಿಗೆ ಹದಿನೈದು ಸಾವಿರ ಮಾಸಿಕ ಗೌರವ ಧನ ನೀಡುವ ಜತೆಯಲ್ಲಿ ವಾಹನ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷೆ ಕೆ.ಜಿ.ಹಳ್ಳಿ ಪಂಚಾಯ್ತಿಯ ಮಮತಾ, ಮಾಸ್ತಿ ಚೇತನ್‌, ನೊಸಗೆರೆ ಚಂದ್ರಶೇಖರ್‌, ಜಯಮಂಗಲ ವಸಂತಮ್ಮ ,ಮಡಿವಾಳ ವೆಂಕಟೇಶ್‌, ಲಕ್ಕೂರು ಚೇತನ್‌ ,ಚಿಕ್ಕತಿರುಪತಿ ಪ್ರೇಮ್‌ , ಹಸಾಂಡಹಳ್ಳಿ ಅಭಿಷೇಕ್‌, ಸಿ.ಎಂ.ನಾರಾಯಣಸ್ವಾಮಿ, ಕೋಟೆ ಮುನಿರಾಜು ಇದ್ದರು. Assembly Election: ಸಿದ್ದು ಸ್ಪರ್ಧೆ: ಕೋಲಾರದ ಕಾಂಗ್ರೆಸ್‌ ಸಭೆಯಲ್ಲಿ ಗದ್ದಲ

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC