ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೆ.ಆರ್. ಕ್ಷೇತ್ರದಲ್ಲಿ ಲಿಂಗಾಯತ- ವೀರಶೈವರಿಗೆ ಟಿಕೆಟ್ ನೀಡಬೇಕು, ತಪ್ಪಿದರೆ ಜೆಡಿಎಸ್ ಬೆಂಬಲಿಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ತುಂಬಲ ಲೋಕೇಶ್ ಎಚ್ಚರಿಸಿದರು.
ಮೈಸೂರು : ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೆ.ಆರ್. ಕ್ಷೇತ್ರದಲ್ಲಿ ಲಿಂಗಾಯತ- ವೀರಶೈವರಿಗೆ ಟಿಕೆಟ್ ನೀಡಬೇಕು, ತಪ್ಪಿದರೆ ಜೆಡಿಎಸ್ ಬೆಂಬಲಿಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ತುಂಬಲ ಲೋಕೇಶ್ ಎಚ್ಚರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಕೆ.ಆರ್. ಕ್ಷೇತ್ರದಲ್ಲಿ ವೀರಶೈವ- ಲಿಂಗಾಯತ ಸಮಾಜದವರಿಗೆ ಟಿಕೆಟ್ ನೀಡಬೇಕು. ಕಳೆದ ಚುನಾವಣೆ ಗಮನಿಸಿದರೆ ಕಾಂಗ್ರೆಸ್ ನಮ್ಮ ಸಮಾಜಕ್ಕೆ ಆದ್ಯತೆ ನೀಡಿಲ್ಲ. ಜಿಲ್ಲೆಯ ಹನ್ನೊಂದು ಕ್ಷೇತ್ರದಲ್ಲಿ ಎಲ್ಲಿಯೂ ವೀರಶೈವರಿಗೆ ಟಿಕೆಟ್ ನೀಡಿಲ್ಲ. ಈ ನೋವನ್ನು ಈಗಲಾದರೂ ಹೋಗಲಾಡಿಸಬೇಕು ಎಂದರು.
undefined
ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವುದಾದರೆ ನಮ್ಮ ಸಮಾಜದವರಿಗೆ ಟಿಕೆಟ್ ನೀಡಬೇಕು. ಸಮಾಜದ ನಾಯಕರಾದ ಎಂ.ಬಿ. ಪಾಟೀಲ, ಶಾಮನೂರು ಶಿವಶಂಕರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅರ್ಜಿ ಸಲ್ಲಿಸಿರುವವರಲ್ಲಿ ನಮ್ಮವರನ್ನು ಪರಿಗಣಿಸಬೇಕು ಮತ್ತು ಈವರೆಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿರುವುದಾಗಿ ಅವರು ಹೇಳಿದರು.
ವರುಣ ಕ್ಷೇತ್ರದಲ್ಲಿ 70 ಸಾವಿರ ಮಂದಿ ವೀರಶೈವ- ಲಿಂಗಾಯತ ಮತದಾರರು ಇದ್ದಾರೆ. ಆದರೆ ಅಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಕೆ.ಆರ್. ಕ್ಷೇತ್ರದಲ್ಲಿ 45 ಸಾವಿರ ಇದ್ದೇವೆ. ಅಲ್ಲಿ ಕನಿಷ್ಠ 42 ಸಾವಿರ ಮಂದಿ ಮತ ಚಲಾಯಿಸುತ್ತಾರೆ. ನಾವು ಈ ಎರಡೂ ಕ್ಷೇತ್ರದಿಂದ ನಮ್ಮ ಸಮಾಜಕ್ಕೆ ಟಿಕೆಟ್ ದೊರಕಬಹುದು ಎಂದು ಅಂದಾಜಿಸಿದ್ದೆವು. ಆದರೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಆ ಸೂಚನೆ ಇಲ್ಲ. ಹೀಗಾಗಿ, ಕೃಷ್ಣರಾಜ ಕ್ಷೇತ್ರದಿಂದಾದರೂ ಟಿಕೆಟ್ ಕೊಡಬೇಕು ಎನ್ನುವುದು ನಮ್ಮ ಆಗ್ರಹ ಎಂದರು.
ಅಂತೆಯೇ ಈ ಬಾರಿ ಬಿಜೆಪಿಯಿಂದ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ನಿರಾಕರಿಸಿದರೆ ನಮ್ಮ ಸಮಾಜದವರನ್ನು ಪರಿಗಣಿಸಬೇಕು. ಎರಡೂ ಪಕ್ಷದವರು ಟಿಕೆಟ್ ಕೊಡದಿದ್ದರೆ, ಜೆಡಿಎಸ್ ಬೆಂಬಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಗೆದ್ದರೆ ವೀರಶೈವ ಲಿಂಗಾಯತರೇ ಮತ್ತೆ ಸಿಎಂ: ಬಾಲಚಂದ್ರ ಜಾರಕಿಹೊಳಿ
ಸುದ್ದಿಗೋಷ್ಠಿಯಲ್ಲಿ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಟಿ. ಲಿಂಗರಾಜು ಹಡಜನ, ಸಮಾಜದ ಮುಖಂಡರಾದ ಗುರುಸ್ವಾಮಿ, ಎಲ….ಎಸ್. ಮಹದೇವಸ್ವಾಮಿ, ಗಂಗಾಧರಸ್ವಾಮಿ, ಬಿ.ಕೆ. ನಾಗರಾಜ್ ಹಾಗೂ ಪ್ರಕಾಶ್ ಇದ್ದರು.
ಬಿಜೆಪಿ ಮೇಲೆ ವೀರಶೈವ ಸಮಾಜದ ಆಶೀರ್ವಾದ ಇರಲಿ
ಗೋಕಾಕ(ಮಾ.25): ಕಳೆದ 6 ಚುನಾವಣೆಗಳಲ್ಲಿ ನಾನು ಜಾತಿ ಪಕ್ಷ ಮಾಡಿಲ್ಲ. ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ. ಪ್ರತಿ ವೇದಿಕೆಯಲ್ಲಿ ಹೇಳಿದ್ದೇನೆ. ಬಿಜೆಪಿ ಮೇಲೆ ವೀರಶೈವ ಸಮಾಜ ಆಶೀರ್ವಾದ ಇರುತ್ತೆ. ಸದಾ ಈ ಆಶೀರ್ವಾದ ಇರಲಿ. ಹಂತ, ಹಂತವಾಗಿ ಮುಸ್ಲಿಂ ಸಮಾಜದವರು ಸೇರಿ ಇತರರು ಬಿಜೆಪಿ ಪರ ವಾಲುತ್ತಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ವೀರಶೈವ ಲಿಂಗಾಯತ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿ, ನಾನು 5 ಬಾರಿ ಕಾಂಗ್ರೆಸ್ ಶಾಸಕನಾಗಿದ್ದಾಗ ಬಿಜೆಪಿ ಅಂದ್ರೆ ಕೋಮುವಾದಿ ಪಕ್ಷ ಅಂತಾ ತಲೆಯಲ್ಲಿ ತುಂಬುತ್ತಿದ್ರು ನಿಜವಾದ ಕೋಮುವಾದಿ ಪಕ್ಷ ಅಂದರೆ ಕಾಂಗ್ರೆಸ್ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಶ್ರೀಗಳು ಮಾತನಾಡಿದ ಬಳಿಕ ಮಾತನಾಡಲು ಸಂಕೋಚವೆನಿಸುತ್ತಿದೆ. ನಾಗನೂರಲ್ಲಿ ನಡೆದ ಸಮಾವೇಶ ಈಗ ಗೋಕಾಕ್‌ನಲ್ಲಿ ನಡೆದ ಸಮಾವೇಶದಿಂದ ವಿಶೇಷ ಸಂದೇಶ ರವಾಣೆಯಾಗಲಿದೆ. ಎಸ್ಸಿ ಎಸ್ಸಿಯಲ್ಲಿ, ಒಕ್ಕಲಿಗ ಒಕ್ಕಲಿಗರಲ್ಲಿ ಜಗಳ ಹಚ್ಚಿ ಲಾಭ ಪಡೆಯುವ ಪಕ್ಷ ಕಾಂಗ್ರೆಸ್. ನೀವು ಎಲ್ಲರೂ ಆಶೀರ್ವಾದ ಮಾಡಬೇಕು. ಮಾದರಿ ಕ್ಷೇತ್ರ ಮಾಡಲು ನನಗೆ ಅನುಕೂಲ ಮಾಡಬೇಕು ಎಂದು ಕೋರಿದರು.
ಮಹಾ ವಿಧಾನ ಪರಿಷತ್ತಿನಲ್ಲಿ ಸಿಎಂ ಬೊಮ್ಮಾಯಿಗೆ ಅವಮಾನ
ನಾನು ಕಾಂಗ್ರೆಸ್‌ನಲ್ಲಿ ಮಂತ್ರಿ ಇದ್ದಾಗ ಹೈದರಾಬಾದ್‌ಗೆ ತೆರಳಿದ್ದೆ. ಆಗ ಪ್ರಮುಖ ನಾಯಕರು ಹೈದರಾಬಾದ್‌ನಲ್ಲಿದ್ದರು. ಆಗ ನಾನು ಬಾಲಚಂದ್ರ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ ಇದ್ದರು. ಯಡಿಯೂರಪ್ಪರನ್ನು ಸಿಎಂ ಮಾಡುವಾಗ ಬಹಳಷ್ಟುಸಲ ಶ್ರೀಗಳ ಜೊತೆ ಮಾತನಾಡಿದ್ದೇನೆ. ನಾನು ಬಿಜೆಪಿ ಬರ್ತೆನಿ ಯಡಿಯೂರಪ್ಪ ಸಿಎಂ ಮಾಡಬೇಕು ಅಂತಾ ಕಂಡಿಷನ್ ಹಾಕಿದೆ. ಬಿಜೆಪಿ ಪಕ್ಷದಲ್ಲಿ ಬಿಜೆಪಿಯಲ್ಲಿ 75 ವರ್ಷ ಇದ್ದವರಿಗೆ ಸಿಎಂ ಮಾಡಲ್ಲ, ಆಗ ಬಿಎಸ್‌ವೈ ಸಿಎಂ ಮಾಡಿದರು. ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಉತ್ತಮ ಭವಿಷ್ಯ ಇದೆ ಎಂದರು.
ವೀರಶೈವ ಲಿಂಗಾಯತ ಸಮಾಜಕ್ಕೆ ಸಿಎಂ ಸ್ಥಾನ ನೀಡುವ ಪಕ್ಷ ಬಿಜೆಪಿ ಮಾತ್ರ. ವೀರಶೈವ ಸಮಾಜ, ಮುಸಲ್ಮಾನ ಸಮಾಜ ಗಟ್ಟಿಯಾಗಿ ನಿಂತರೇ ನಿಮ್ಮ ಅನಿಸಿಕೆ ಸಫಲ ಆಗುತ್ತೆ. ತಾವುಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ. ಕಾಂಗ್ರೆಸ್ ಪಕ್ಷದವರ ಗ್ಯಾರಂಟಿ ಕಾರ್ಡ್‌ಗೆ ತಲೆಕೆಡಿಸಿಕೊಳ್ಳದಿರಿ. ಅವರು ರಾಜಸ್ಥಾನ ಛತ್ತೀಸ್ಗಢದಲ್ಲಿ ಹಲವು ಭರವಸೆ ಕೊಟ್ಟಿದ್ದರು. ಆದರೆ, ಈಡೇರಿಸಿಲ್ಲ. ಅವರ ಗ್ಯಾರಂಟಿಯಲ್ಲಿ ಅಕ್ಕಿ ಒಂದು ಮಾತ್ರ ಕೊಡ್ತಾರೆ, ಏಕಂದರೇ ಅದನ್ನ ಕೇಂದ್ರ ಸರ್ಕಾರ ಕೊಡುತ್ತೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.