ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆಗೆ ಒತ್ತಾಯ

By Kannadaprabha News  |  First Published Jun 29, 2023, 5:55 AM IST

ತುಮಕೂರು ಜಿಲ್ಲೆಯು ವಿಶಾಲ ವಿಸ್ತರಣೆಯ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು ತಾಲೂಕು ಕೇಂದ್ರವನ್ನು ಹೊಂದಿದೆ. ಒಂದು ತಾಲೂಕು ಕೇಂದ್ರದ ಗಡಿಯಿಂದ ಮತ್ತೊಂದು ತಾಲೂಕು ಗಡಿಗೆ ಸುಮಾರು 100 ಕಿ.ಮೀ. ವಿಸ್ತರಣೆ ಹೊಂದಿದ್ದು, ಸಮರ್ಪಕ ಆಡಳಿತ ನೀಡುವುದು ಕಷ್ಟದಾಯಕವಾಗಿದೆ. ಆದ್ದರಿಂದ ಶಿರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಸುಲಲಿತ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್‌.ಪಿ.ಧರಣೇಶ್‌ ಗೌಡ ಒತ್ತಾಯಿಸಿದರು.


 ಶಿರಾ :  ತುಮಕೂರು ಜಿಲ್ಲೆಯು ವಿಶಾಲ ವಿಸ್ತರಣೆಯ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು ತಾಲೂಕು ಕೇಂದ್ರವನ್ನು ಹೊಂದಿದೆ. ಒಂದು ತಾಲೂಕು ಕೇಂದ್ರದ ಗಡಿಯಿಂದ ಮತ್ತೊಂದು ತಾಲೂಕು ಗಡಿಗೆ ಸುಮಾರು 100 ಕಿ.ಮೀ. ವಿಸ್ತರಣೆ ಹೊಂದಿದ್ದು, ಸಮರ್ಪಕ ಆಡಳಿತ ನೀಡುವುದು ಕಷ್ಟದಾಯಕವಾಗಿದೆ. ಆದ್ದರಿಂದ ಶಿರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಸುಲಲಿತ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್‌.ಪಿ.ಧರಣೇಶ್‌ ಗೌಡ ಒತ್ತಾಯಿಸಿದರು.

ತಾಲೂಕು ವಕೀಲರ ಸಂಘದ ವತಿಯಿಂದ ನಗರದಲ್ಲಿ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ನ್ಯಾಯಾಲಯದ ಆವರಣದಿಂದ ತಹಸೀಲ್ದಾರ್‌ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್‌ ನಾಗಮಣಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

Tap to resize

Latest Videos

ಶಿರಾ ನಗರವು ತುಮಕೂರಿನ ನಂತರ ಜಿಲ್ಲೆಯಾಗುವ ಎಲ್ಲಾ ಮೂಲಭೂತ ಸೌಕರ್ಯಗಳು, ರಸ್ತೆ ಸಂಪರ್ಕ ವ್ಯವಸ್ಥೆ, ಸ್ಥಳಾವಕಾಶ ಹೊಂದಿದ್ದು, ಶಿರಾವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಸುತ್ತಮುತ್ತಲ ತಾಲೂಕುಗಳಿಗೆ ಕೇಂದ್ರ ಸ್ಥಾನವಾಗುತ್ತದೆ. ಶಿರಾದಲ್ಲಿ 2000 ಎಕರೆಗೂ ಹೆಚ್ಚು ಪ್ರದೇಶವನ್ನು ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿರಾ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಎಂದರು.

ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಗುರುಮೂರ್ತಿ ಗೌಡ ಮಾತನಾಡಿ, ಶಿರಾ ತಾಲೂಕು ಕೇಂದ್ರವು ಬಹು ವೇಗದಿಂದ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಶಿರಾ ನಗರದ ಸುತ್ತಮುತ್ತ ಸುಮಾರು 2500 ಎಕರೆ ಸರಕಾರಿಇದ್ದು ಈ ಜಾಗವು ಸರಕಾರಿ ಕಚೇರಿಗಳು ಹಾಗೂ ಇತರೆ ಕಾರ್ಯಗಳಿಗೆ ವಿಶಾಲವಾದ ಸ್ಥಳಾವಕಾಶವ ಹೊಂದಿದೆ. ನಗರಕ್ಕೆ ಹೇಮಾವತಿ, ಅಪ್ಪರ್‌ ಭದ್ರ, ಎತ್ತಿನ ಹೊಳೆಯಿಂದ ನೀರು ಸರಬರಾಜು ಆಗಲು ವ್ಯವಸ್ಥೆ ಮಾಡಲಾಗುತ್ತಿದೆ. ಶಿರಾದ 10 ಕಿ.ಮೀ. ವ್ಯಾಪ್ತಿಯಲ್ಲಿ ಮದಲೂರು ಕೆರೆ, ಚಿಕ್ಕಸಂದ್ರ ಕೆರೆ, ಕಳ್ಳಂಬೆಳ್ಳ ಕೆರೆ, ಶಿರಾ ದೊಡ್ಡ ಕೆರೆ ಸೆರಿದಂತೆ ನಾಲ್ಕು ದಿಕ್ಕುಗಳಲ್ಲೂ ಕೆರೆಗಳಿದ್ದು ನೀರಿನ ಸಮಸ್ಯೆ ಇರುವುದಿಲ್ಲ. ಈಗಾಗಲೇ ಕೈಗಾರಿಕಾ ವಲಯವು ಸ್ಥಾಪನೆಗೊಂಡು ಕೈಗಾರಿಕೆಗಳೂ ಚಾಲ್ತಿಯಲ್ಲಿವೆ. ತಾಲೂಕಿನ ಸುತ್ತಮುತ್ತ ಸೋಲಾರ್‌ ಘಟಕಗಳು ಇರುವುದರಿಂದ ವಿದ್ಯುತ್‌ ಸಮಸ್ಯೆಯೂ ಇರುವುದಿಲ್ಲ ಎಂದರು.

ಶಿರಾ ಮೂಲಕ ಸುಮಾರು ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಇದರ ಜೊತೆಗೆ ಬೆಂಗಳೂರಿನಿಂದ ಪೂನಾ ಬಹುರಾಷ್ಟ್ರೀಯ ಹೆದ್ದಾರಿ ಹಾಗೂ ಆಂಧ್ರಪ್ರದೇಶದ ಅಮರಾವತಿಯಿಂದ ಶಿರಾ ನಗರದ ಮೂಲಕ ಕೇರಳದ ಕಲ್ಲಿಕೋಟೆವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲವೆ. ಇಷ್ಟೆಲ್ಲಾ ಸೌಲಭ್ಯ ಇರುವ ಶಿರಾವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಕಳ್ಳಂಬೆಳ್ಳವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಸಿ.ಸರಸ್ವತಿ, ಜಂಟಿ ಕಾರ್ಯದರ್ಶಿ ಡಿ.ಈರಣ್ಣ, ಖಜಾಂಚಿ ಬಿ.ಆರ್‌.ರಾಮಕೃಷ್ಣ, ಕಂಬದೂರಪ್ಪ, ವಕೀಲರಾದ ಜವನಯ್ಯ, ನೋಟರಿ ಹಾಗೂ ವಕೀಲರಾದ ಎಚ್‌.ಸಿ.ಈರಣ್ಣ, ಜಿ.ಎಸ್‌.ಶಶಿಧರ್‌, ಬಸವರಾಜು, ರೆಹಮತ್‌, ಹೊನ್ನೇಶ್‌ ಗೌಡ, ಮಂಜುನಾಥ್‌, ಮಂಗಳಮ್ಮ, ಜಗದೀಶ್‌, ರಾಜೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

click me!