ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ರೈಲಿನ ಸೇವೆ ದೊರಕಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಇದರ ಬಳಕೆಯನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತಿಳಿಸಿದರು.
ತಿಪಟೂರು : ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ರೈಲಿನ ಸೇವೆ ದೊರಕಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಇದರ ಬಳಕೆಯನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತಿಳಿಸಿದರು.
ತಿಪಟೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸ್ವಾಗತಿಸಿ ಮಾತನಾಡಿದ ಅವರು, ಭಾರತದಲ್ಲೇ ನಿರ್ಮಾಣವಾಗಿರುವ ಸ್ವದೇಶಿ ರೈಲು ಇದಾಗಿದ್ದು ದೇಶೀಯ ವೈಜ್ಞಾನಿಕ ಹಾಗೂ ತಾಂತ್ರಿಕತೆಯಿಂದ ಕೂಡಿರುವ ಈ ರೈಲಿನಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿದ್ದು, ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸಬಹುದಾಗಿದೆ. ಈ ಭಾಗದಲ್ಲಿ 28 ರೈಲುಗಳು ಪ್ರತಿನಿತ್ಯ ಓಡಾಡುತ್ತವೆ. ಕೆಲವು ರೈಲುಗಳು ನಿಲುಗಡೆಯಿಲ್ಲವಾಗಿದ್ದು ಅವಶ್ಯ ಕ್ರಮ ಕೈಗೊಳ್ಳಲಾಗಿದೆ. ಕಟ್ಟೆಕಡೆಯ ವ್ಯಕ್ತಿಯೂ ರೈಲಿನಲ್ಲಿ ಓಡಾಡಬೇಕೆಂಬುದು ಮೋದಿಯವರ ಕನಸಾಗಿದ್ದು ಅದರಂತೆ ರೈಲ್ವೆಯಲ್ಲಿ ಸಾಕಷ್ಟುಬದಲಾವಣೆಗಳನ್ನು ತಂದಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಎಲೆಕ್ಟ್ರಿಕಲ್ ರೈಲಾಗಿದ್ದು 480 ಕಿ.ಲೋ ಮೀಟರ್‌ನ್ನು 6ಗಂಟೆ 30 ನಿಮಿಷದಲ್ಲಿ ತಲುಪುವ ಈ ರೈಲು ದೇಶದ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.
ಶಾಸಕ ಕೆ. ಷಡಕ್ಷರಿ ಮಾತನಾಡಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇರೆ ರೈಲುಗಳಿಗಿಂತ ವಿಭಿನ್ನ ಹಾಗೂ ವಿಶೇಷವಾಗಿದ್ದು ಸುಖಕರವಾಗಿ ಪ್ರಯಾಣ ಮಾಡಬಹುದಾಗಿದ್ದು ತಾಂತ್ರಿಕ ಮತ್ತು ಅತ್ಯಾಧುನಿಕತೆಯಿಂದ ಕೂಡಿದೆ. ಇಂತಹ ವಿಶೇಷ ರೈಲು ನಮ್ಮ ತಿಪಟೂರಿನಲ್ಲಿಯೂ ಹಾದು ಹೋಗಲಿದ್ದು ಇಲ್ಲಿ ನಿಲುಗಡೆ ಕಲ್ಪಿಸಿದಲ್ಲಿ ಈ ಭಾಗದ ಜನರೂ ಸಹ ರೈಲಿನಲ್ಲಿ ಸಂಚರಿಸುವಂತಾಗಬೇಕು. ಆದ್ದರಿಂದ ವಂದೇ ಭಾರತ್ ರೈಲು ತಿಪಟೂರಿನಲ್ಲಿಯೂ ನಿಲುಗಡೆಯಾಗುವಂತೆ ಲೋಕಸಭಾ ಸದಸ್ಯರು ಸಂಬಂಧಪಟ್ಟಅಧಿಕಾರಿಗಳಿಗೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಉಪವಿಭಾಗಾಧಿಕಾರಿ ಸಿ.ಆರ್. ಕಲ್ಪಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ರೈಲ್ವೆ ಸಹಾಯಕ ಆರಕ್ಷಕ ಉಪ ನಿರೀಕ್ಷಕ ದೇವರಾಜೇಗೌಡ್ರು, ಮುಖ್ಯ ಆರಕ್ಷಕ ನಂದೀಶ್, ಲಕ್ಷ್ಮೀನಾರಾಯಣ್, ಆರಕ್ಷಕ ಮಹೇಶ್‌ಕುಮಾರ್, ರೈಲ್ವೆ ಸ್ಟೇಷನ್ ಮಾಸ್ಟರ್ ಹರಿಲಾಲ್ ಮೀನಾ, ಆಲ್ ಇಂಡಿಯಾ ರೈಲ್ವೆ ಟ್ರ್ಯಾಕ್ ಮೇಂಟೇನರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ವಿ. ಕಾಂತರಾಜು ಸೇರಿದಂತೆ ಸಿಬ್ಬಂದಿಗಳಿದ್ದರು.
ಬೆಂಗಳೂರು - ಧಾರವಾಡ 6 ಗಂಟೆ ಪ್ರಯಾಣ
ಧಾರವಾಡ (ಜೂ.19): ರಾಜ್ಯದಲ್ಲಿ ಬೆಂಗಳೂರು- ಧಾರವಾಡ ನಗರಗಳ ನಡುವೆ ಪಗ್ರಾಯೋಗಿಕ ಸಂಚಾರ ಆರಂಭಿಸಲಾದ ವಂದೇ ಭಾರತ್ ರೈಲು ನಿಗದಿತ ಅವಧಿಗಿಂತ 40 ನಿಮಿಷ ಮುಂಚೆಯೇ ಧಾರವಾಡ ರೈಲು ನಿಲ್ದಾಣಕ್ಕೆ ಆಗಮಿಸಿದೆ. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿಯೇ ವಂದೇ ಭಾರತ್ ರೈಲು ಚಲಿಸಿದ್ದು, ಅತಿ ಕಡಿಮೆ ಅವಧಿಯಲ್ಲಿ ತಮ್ಮ ನಿಲ್ದಾಣ ತಲುಪಿದ ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ.
ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟ ವಂದೇ ಭಾರತ್ ರೈಲು ಧಾರವಾಡ ರೈಲು ನಿಲ್ದಾಣವನ್ನು 12.40ಕ್ಕೆ ತಲುಪಬೇಕಿತ್ತು. ಆದರೆ, 12.10ಕ್ಕೆ ರೈಲು ಧಾರವಾಡದ ನಿಲ್ದಾಣವನ್ನು ತಲುಪಿದೆ. ಅವಧಿಗೂ ಮುನ್ನವೇ ಆಗಮಿಸಿದ ವಂದೇ ಭಾರತ್ ರೈಲು. ನಿರೀಕ್ಷಿತ ವೇಳೆಗಿಂತ ಮುಂಚೆ ರೈಲು ಬಂದಿದ್ದು, ರೈಲು ಸಿಬ್ಬಂದಿ ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೋಮುಗಲಭೆ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ
ಇನ್ನು ಧಾಡವಾರ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಪ್ರಯಾಣಿಕರು ನೋಡಿ ಸಂಭ್ರಮಿಸುತ್ತಿದ್ದಾರೆ. ರೈಲಿನ ಬೋಗಿಯೊಳಗೆ ಹೋಗಿ ಖುಷಿಪಡುತ್ತಿರೋ ಜನರು. ಸಂಪೂರ್ಣವಾಗಿ ಹವಾನಿಯಂತ್ರಿ ವ್ಯವಸ್ಥೆಯಿಂದ (ಎ ಸಿ ಯಿಂದ) ಕೂಡಿರುವ ಟ್ರೈನ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ದಾರವಾಡ ರೇಲ್ವೆ ಸ್ಟೆಷನ್ ನಲ್ಲಿ ನಿಂತರ ರೈಲನ್ನು ಹತ್ತಿ ನೋಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನ ಹೇಳಿದ ಪ್ರಯಾಣಿಕರು.
ಸಾಮಾನ್ಯ ರೈಲಿಗಿಂತ ಸುಸಜ್ಜಿತ ವ್ಯವಸ್ಥೆ: ಟ್ರೈಯಲ್ ರನ್ ಮಾಡುತ್ತಿರುವ ವಂದೇ ಭಾರತ ಎಕ್ಸ್‌ಪ್ರಸ್ ರೈಲು ಸಾಮಾನ್ಯ ರೇಲ್ವೆಗಿಂತ ಇದೊಂದು ವಿಶೇಷತೆಯಿಂದ ಕೂಡಿದೆ. ಪುಲ್ ಎ ಸಿ ಯಿಂದ ಕೂಡಿದೆ. ನಮಗೆ ಬಹಳ ಖುಷಿ ಇದೆ. ಸದ್ಯ ಧಾರವಾಡದಿಂದ ಬೆಂಗಳೂರಿನತ್ತ ತೆರಳಿದ ವಂದೇ ಭಾರತ ರೈಲು ತಲುಪಿದೆ. ಎಲ್ಲವೂ ಅಟೋಮೇಟಿಕ್ ಆಗಿ ಓಪನ್ ಆಗುತ್ತಿರುವ ಬಾಗಿಲುಗಳು. ಎಲ್ಲವೂ ಸುಸಜ್ಜಿತವಾಗಿರುವ ಟ್ರೈನ್ ಆಗಿದೆ. ಸದ್ಯ ಪ್ರತಿ ಘಂಟೆಗೆ 140 ಕೀಮೀ ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿದೆ.