ನಗರದೊಳಗೆ ಹಾದು ಹೋಗಿರುವ ಎನ್.ಹೆಚ್.206ರ ರಸ್ತೆಯ ಮುಖ್ಯ ಸರ್ಕಲ್‌ಗಳಲ್ಲಿ ರಸ್ತೆ ಹಾಗೂ ಡಿವೈಡರ್ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ರೋಡ್ ಹಂಫ್ಸ್ ಗಳನ್ನು ಹಾಕಲಾಗಿದ್ದು, ಈ ಹಂಫ್ಸ್‌ಗಳಿಗೆ ಬಿಳಿ ಪಟ್ಟೆಅಳವಡಿಸಿಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ‘ರೋಡ್ ಹಂಫ್ಸ್‌ಗಳಿಗೆ ಬಿಳಿ-ಹಳದಿ ಪಟ್ಟೆಅಳವಡಿಸದೆ ಹೆಚ್ಚಾಗುತ್ತಿರುವ ಅಪಘಾತಗಳು’ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರವಾಗಿತ್ತು.
ತಿಪಟೂರು : ನಗರದೊಳಗೆ ಹಾದು ಹೋಗಿರುವ ಎನ್.ಹೆಚ್.206ರ ರಸ್ತೆಯ ಮುಖ್ಯ ಸರ್ಕಲ್‌ಗಳಲ್ಲಿ ರಸ್ತೆ ಹಾಗೂ ಡಿವೈಡರ್ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ರೋಡ್ ಹಂಫ್ಸ್ ಗಳನ್ನು ಹಾಕಲಾಗಿದ್ದು, ಈ ಹಂಫ್ಸ್‌ಗಳಿಗೆ ಬಿಳಿ ಪಟ್ಟೆಅಳವಡಿಸಿಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ‘ರೋಡ್ ಹಂಫ್ಸ್‌ಗಳಿಗೆ ಬಿಳಿ-ಹಳದಿ ಪಟ್ಟೆಅಳವಡಿಸದೆ ಹೆಚ್ಚಾಗುತ್ತಿರುವ ಅಪಘಾತಗಳು’ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರವಾಗಿತ್ತು.
ಸುದ್ದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ತಾಲೂಕು ಆಡಳಿತ ನಗರದ ಹಾಸನ ಸರ್ಕಲ್, ಕಲ್ಪತರು ಕಾಲೇಜು, ತಾಲೂಕು ಕಛೇರಿ, ಸಾರ್ವಜನಿಕ ಆಸ್ಪತ್ರೆ, ಅಂಬೇಡ್ಕರ್ ವೃತ್ತ (ಐಬಿ), ಗುರುದರ್ಶನ್ ಹೋಟೆಲ್, ಬಾಲಕಿಯರ ಕಾಲೇಜು, ಕೋಡಿ ಸರ್ಕಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಹಾಕಲಾಗಿರುವ ಹಂಫ್ಸ್‌ಗಳಿಗೆ ಬಿಳಿ ಪಟ್ಟೆಅಳವಡಿಸಲಾಗಿದೆ. ಪತ್ರಿಕೆಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗುಂಬೆ ಘಾಟಿಯಲ್ಲಿ ರಿಫ್ಲೆಕ್ಟರ್
ಉಡುಪಿ (ಜೂ.23): ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿ ಹಾಗೂ ಇತರ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆದ ಅಫಘಾತಗಳಿಂದ ಜೀವಹಾನಿಯಾಗಿದ್ದು, ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ರಸ್ತೆಯಲ್ಲಿ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ, ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐಯ್ ಅಳವಡಿಕೆ. ತಿರುವುಗಳಲ್ಲಿ ಭಾಗಿರುವ ಮರದ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಲಹೆ ಪಡೆಯಲಾಯಿತು. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಫಘಾತ ವಲಯ ಎಚ್ಚರಿಕೆ ಸೈನ್ ಬೋರ್ಡ್ ಗಳನ್ನು ಹಾಕಲಾಗಿದ್ದು, ಇನ್ನೂ ಹೆಚ್ಚು ಸೈನ್ ಬೋರ್ಡ್ ಗಳನ್ನು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಕಿರಿದಾದ ರಸ್ತೆ ಇರುವಲ್ಲಿ, ತಿರುವು ರಸ್ತೆ, ಅಫಘಾತ ವಲಯ ಸೈನ್ ಬೋರ್ಡ್ ಗಳನ್ನು ಕೂಡ ಹಾಕಲು ನಿರ್ಧಾರ ಕೈಗೊಳ್ಳಾಗಿದೆ.