ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಹೇಗೆ ಅಭಿವೃದ್ಧಿ ಮಾಡಲಾಗುತ್ತದೆಯೋ ಅದೇ ರೀತಿ ಬೇಡಿಕೆಗಳು ಹೆಚ್ಚುತ್ತ ಹೋಗುತ್ತವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಚವಡಳ್ಳಿ ಗ್ರಾಮದಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮುಂಡಗೋಡ (ಜ.01): ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಹೇಗೆ ಅಭಿವೃದ್ಧಿ ಮಾಡಲಾಗುತ್ತದೆಯೋ ಅದೇ ರೀತಿ ಬೇಡಿಕೆಗಳು ಹೆಚ್ಚುತ್ತ ಹೋಗುತ್ತವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಚವಡಳ್ಳಿ ಗ್ರಾಮದಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದಿಂದ ಮಕ್ಕಳಿಗೆ ಅಡಿಪಾಯದಿಂದಲೇ ಉತ್ತಮ ವಾತಾವರಣದ ಶಾಲೆಗಳನ್ನು ನೀಡಬೇಕೆಂಬ ಉದ್ದೇಶದಿಂದ ಉತ್ತಮ ಗುಣಮಟ್ಟಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಬಹುತೇಕ ಗ್ರಾಮೀಣ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿದೆ. ಹುಡುಕಿದರೂ ಕೂಡ ಬಾಕಿ ಉಳಿದ ರಸ್ತೆಗಳು ಸಿಗುವುದಿಲ್ಲ. ಕಟ್ಟಕಡೆಯ ರೈತರು ಕೂಡ ಆರ್ಥಿಕ ಬೆಳೆಗಳನ್ನು ಸಬಲರಾಗಲೆಂದು ದೇಶಕ್ಕೆ ಅನ್ನ ನೀಡುವ ಕೃಷಿಕರ ಸಬಲೀಕರಣಕ್ಕಾಗಿ ನೂರಾರು ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಅಂತಿಮ ಹಂತ ತಲುಪಿದೆ. ಕೃಷಿಕ ಮತ್ತು ಕಾರ್ಮಿಕ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಕೃಷಿ ಮತ್ತು ಕಾರ್ಮಿಕ ವರ್ಗದ ಪ್ರಗತಿ ಅತ್ಯಗತ್ಯ. ಇಲ್ಲಿಯ ರೈತರು ಕೂಡ ಕಬ್ಬು ಮುಂತಾದ ಆರ್ಥಿಕ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಜ.12ರಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ: ಜಿಲ್ಲಾಧಿಕಾರಿ ಗುರುದತ್ತ
2008, 2013 ಮತ್ತು 2019ರ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ನೀಡಿ ಗೆಲ್ಲಿಸಿದ ಚವಡಳ್ಳಿ ಭಾಗದ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಈ ವರೆಗೆ .10 ಕೋಟಿಯನ್ನು ಈ ಭಾಗದ ಅಭಿವೃದ್ಧಿಗಾಗಿ ನೀಡಲಾಗಿದೆ. ಈ ವರ್ಷ ನಮಗೆ ಪರೀಕ್ಷೆ ವರ್ಷವಾಗಿದ್ದು, ಈ ಪರೀಕ್ಷೆಯಲ್ಲಿ ನಮ್ಮನ್ನು ಪಾಸ್ ಮಾಡುವವರು ಮತದಾರರು. ನಮ್ಮ ಅವಧಿಯಲ್ಲಿ ನಾವು ಮಾಡಿದ ಕೆಲಸವನ್ನು ಪರಿಗಣಿಸಿ ಅಂಕ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಚವಡಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ ಕಟಗಿ, ಪರಶುರಾಮ ತಹಸೀಲ್ದಾರ, ನಾಗಭೂಷಣ ಹಾವಣಗಿ, ಕೆಂಜೋಡಿ ಗಲಬಿ, ದೇವು ಜಾನು ಪಾಟೀಲ, ಬಸಯ್ಯ ನಡುವಿನಮನಿ, ನಿಂಗಜ್ಜ ಕೋಣನಕೇರಿ, ಉಮೇಶ ಬಿಜಾಪುರ, ವೈ.ಪಿ. ಪಾಟೀಲ, ಪಿ.ಜಿ. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರ, ಜಿಪಂ ಎಂಜಿನಿಯರ್ ಪ್ರದೀಪ ಭಟ್ಟಮುಂತಾದವರು ಉಪಸ್ಥಿತರಿದ್ದರು.
ಹೆಗಡೆ ಕುಂದರಗಿ ಪುತ್ಥಳಿ ಸ್ಥಾಪಿಸೋಣ: ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ, ಪ್ರಾಮಾಣಿಕ ಸಮಾಜ ಸೇವೆಯ ತುಡಿತ ಹೊಂದಿದ್ದ ಎನ್.ಎಸ್. ಹೆಗಡೆ ಕುಂದರಗಿ ನಮ್ಮನ್ನಗಲಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಭರತನಹಳ್ಳಿಯ ಪ್ರಗತಿ ಸಭಾಭವನದಲ್ಲಿ ಕುಂದರಗಿಯ ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಎನ್.ಎಸ್. ಹೆಗಡೆ ಕುಂದರಗಿ ನುಡಿನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಮಾತನಾಡಿದರು. ಅವರು ಎಲ್ಲೆಲ್ಲಿಯಿಂದಲೋ ಹಣ ತಂದು ಇಲ್ಲಿ, ಶಿಕ್ಷಣ ಸಂಸ್ಥೆ, ಬತ್ತದ ಗಿರಣಿ, ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿರದಿದ್ದರೆ, ಕಟ್ಟದಿದ್ದರೆ ಈ ಪ್ರದೇಶದ ಜನರಿಗೆ ಶಿಕ್ಷಣ ಮತ್ತು ಸೌಲಭ್ಯಗಳು ಸುಲಭವಾಗಿ ಸಿಗುತ್ತಿರಲಿಲ್ಲ.
ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರ್ಲಕ್ಷ್ಯತೆ, ತಪ್ಪು ಸರಿಪಡಿಸಿಕೊಳ್ಳಿ: ಶಾಸಕ ಹಾಲಪ್ಪ
ಅವರು ಇಲ್ಲಿಯ ಸಂಘ-ಸಂಸ್ಥೆಗಳಲ್ಲದೇ, ಬೇರೆಡೆಗೂ ಹಲವಾರು ಸಂಘ-ಸಂಸ್ಥೆಗಳನ್ನು ಕಟ್ಟಿಬೆಳೆಸಿದ್ದಾರೆ. ಅವರು ಈಗ ನಮ್ಮೊಂದಿಗಿರದಿದ್ದರೂ ಅವರು ಅವರು ಬೆಳೆಸಿದ ಸಂಸ್ಥೆಗಳು ನಮ್ಮೊಂದಿಗಿವೆ. ಇಲ್ಲಿನ ಪ್ರೌಢಶಾಲೆಯ ಎದುರು ನಾವೆಲ್ಲರೂ ಸೇರಿ ಅವರ ಪುತ್ಥಳಿಯನ್ನು ಸ್ಥಾಪಿಸಿ, ಅವರು ಶಾಶ್ವತವಾಗಿ ನೆನಪಿನಲ್ಲಿರುವಂತೆ ನೋಡಿಕೊಳ್ಳೋಣ ಎಂದರು. ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬದುಕಿನೊಂದಿಗಿನ ಅವರ ಸೃಜನಾತ್ಮಕ ಕ್ರಿಯೆಗಳು ಅವರನ್ನು ಇಷ್ಟೊಂದು ಚಟುವಟಿಕೆಯಿಂದ ಇರುವಂತೆ ಮಾಡಿ ಇಷ್ಟೆಲ್ಲ ಸಾಧನೆ ಮಾಡಲು ಕಾರಣವಾಗಿರಬಹುದು. ಅವರು ಅಗಲಿದರೂ ಅವರ ಸಾಧನೆಗಳು ಸದಾ ನಮಗೆಲ್ಲ ಸ್ಫೂರ್ತಿಯಾಗಿ ನಮ್ಮೊಂದಿಗಿವೆ ಎಂದರು.