Udupi: ಮೂಲ್ಕಿ ಸೀಮೆ ಅರಸು ಕಂಬಳ, ಒಟ್ಟು 150 ಜೊತೆ ಕೋಣ ಭಾಗಿ

By Kannadaprabha News  |  First Published Jan 1, 2023, 9:55 PM IST

ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಒಟ್ಟು 150 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆಯಲ್ಲಿ 5, ಅಡ್ಡಹಲಗೆಯಲ್ಲಿ 7, ಹಗ್ಗ ಹಿರಿಯದಲ್ಲಿ 15, ಕಿರಿಯದಲ್ಲಿ 17 ಜತೆ, ನೇಗಿಲು ಹಿರಿಯದಲ್ಲಿ 26, ಹಗ್ಗ ಕಿರಿಯ: 80 ಜೊತೆ ಕೋಣಗಳು ಭಾಗವಹಿಸಿತ್ತು.


ಮೂಲ್ಕಿ (ಜ.1): ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಒಟ್ಟು 150 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆಯಲ್ಲಿ 5, ಅಡ್ಡಹಲಗೆಯಲ್ಲಿ 7, ಹಗ್ಗ ಹಿರಿಯದಲ್ಲಿ 15, ಕಿರಿಯದಲ್ಲಿ 17 ಜತೆ, ನೇಗಿಲು ಹಿರಿಯದಲ್ಲಿ 26, ಹಗ್ಗ ಕಿರಿಯ: 80 ಜೊತೆ ಕೋಣಗಳು ಭಾಗವಹಿಸಿತ್ತು. ಕನೆಹಲಗೆಯಲ್ಲಿ ಪ್ರಥಮ: ಕಾಂತಾವರ ಬೇಲಾಡಿ ಬಾವ ಅಶೋಕ್‌ ಶೆಟ್ಟಿ, ಮುಟ್ಟಿದವರು: ತೆಕ್ಕಟ್ಟೆಸುಧೀರ್‌ ದೇವಾಡಿಗ, ದ್ವಿತೀಯ: ಬಾರ್ಕೂರು ಶಾಂತರಾಮ ಶೆಟ್ಟಿ, ಹಲಗೆ ಮುಟ್ಟಿದವರು: ಬೈಂದೂರು ರಾಂಪ ರಾಘವೇಂದ್ರ ಪೂಜಾರಿ.

ಅಡ್ಡ ಹಲಗೆಯಲ್ಲಿ ಪ್ರಥಮ: ಮೋರ್ಲ ಪ್ರಾಪ್ತಿ ಗಿರೀಶ್‌ ಆಳ್ವ, ಕೋಣ ಓಡಿಸಿದವರು: ಮುಳಿಕಾರು ಕಿವು ಡೇಲು ಅಣ್ಣಿ ದೇವಾಡಿಗ, ದ್ವಿತೀಯ: ಮೇರೆ ಮಜಲು ಮಿಷನ್‌ ಗಾಡ್ರಿನ್‌ ವಾಜ್‌ ಎ ಕೋಣ, ಓಡಿಸಿದವರು: ಬೈಂದೂರು ಮಹೇಶ್‌.

Tap to resize

Latest Videos

undefined

ಹಗ್ಗ ಹಿರಿಯದಲ್ಲಿ ಪ್ರಥಮ: ನಂದಳಿಕೆ ಶ್ರೀಕಾಂತ ಭಟ್‌ ಬಿ, ಕೋಣ ಓಡಿಸಿದವರು: ಬೈಂದೂರು ವಿವೇಕ್‌, ದ್ವಿತೀಯ: ಪದವು ಕಾನಡ್ಕ ಪ್ಲೇವಿ ಡಿಸೋಜ ಬಿ, ಕೋಣ ಓಡಿಸಿದವರು: ಬಂಬ್ರಾಣ ಬೈಲು ವಂದಿತ್‌ ಶೆಟ್ಟಿ.

ಹಗ್ಗ ಕಿರಿಯದಲ್ಲಿ ಪ್ರಥಮ: ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌, ಓಡಿಸಿದವರು: ಕೊಳಕ್ಕೆ ಇರ್ವತ್ತೂರು ಆನಂದ, ದ್ವಿತೀಯ: ನಿಟ್ಟೆಪರಪ್ಪಾಡಿ ಸುರೇಶ್‌ ಕೋಟ್ಯಾನ್‌, ಓಡಿಸಿದವರು: ಅತ್ತೂರು ಕೊಡಂಗೆ ಸಂದೀಪ್‌ ಸಾಲ್ಯಾನ್‌.

ನೇಗಿಲು ಹಿರಿಯದಲ್ಲಿ ಪ್ರಥಮ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಬಿ., ಓಡಿಸಿದವರು: ಮಿಜಾರ್‌ ಅಶ್ವತ್ಥಪುರ ಶ್ರೀನಿವಾಸ ಗೌಡ, ದ್ವಿತೀಯ: ಮೂಡಬಿದ್ರೆ ನ್ಯೂ ಪಡಿವಾಲ್ಸ್‌, ಹಾರ್ದಿಕ್‌ ಹರ್ಷವರ್ಧನ್‌ ಕೋಣ, ಓಡಿಸಿದವರು: ಬೈಂದೂರು ವಿವೇಕ್‌ ಪೂಜಾರಿ.

ನೇಗಿಲ ಕಿರಿಯದಲ್ಲಿ ಪ್ರಥಮ ವರಪ್ಪಾಡಿ ಬಡಗು ಮನೆ ದಿವಾಕರ ಚೌಟ, ಓಡಿಸಿದವರು: ಪಟ್ಟೆಗುರು ಚರಣ್‌, ದ್ವಿತೀಯ: ಕಾರ್ಕಳ ಗುಂಡ್ಯಡ್ಕ ದುರ್ಗಾ ಪ್ರಸಾದ್‌ ನಿಲಯ ಪ್ರಸಾದ್‌ ಅಣ್ಣು ಶೆಟ್ಟಿಎ, ಓಡಿಸಿದವರು: ಭಟ್ಕಳ ಶಂಕರ.

ಕಂಬಳ ಉಳಿಸಿ ಪ್ರೋತ್ಸಾಹಿಸಿ: ರಮಾನಾಥ ರೈ
ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮೂಲ್ಕಿ ಸೀಮೆ ಅರಸು ಕಂಬಳ ಸಂದರ್ಭ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಕೊಡಮಣಿತ್ತಾಯ ಕಂಬಳದಲ್ಲಿ ತುಳುನಾಡ ದೈವಾರಾಧನೆ

ಸಾಧಕರ ನೆಲೆಯಲ್ಲಿ ಉದ್ಯಮಿ ಎಂ.ರವಿ ಶೆಟ್ಟಿಕತಾರ್‌, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ನಾಗಸ್ವರ ವಾದಕ ನಾಗೇಶ್‌ ಬಪ್ಪನಾಡು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜಕುಮಾರ್‌ ಬೆಹರಿನ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿಅವರನ್ನು ಸನ್ಮಾನಿಸಲಾಯಿತು.

Udupi: ಕಾಂತರಾ ಕಂಬಳ ಗದ್ದೆಯಲ್ಲಿ ಮತ್ತೊಮ್ಮೆ ಕೋಣಗಳ ಕಲರವ!

ಶಾಸಕ ಉಮಾನಾಥ ಕೋಟ್ಯಾನ್‌, ಜಾಗತಿಕ ಬಂಟರ ಸಂಘದ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್‌ ಹೆಗ್ಡೆ, ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ, ಮಲ್ಲಿಕಾ ಶೆಟ್ಟಿಬಳ್ಕುಂಜೆಗುತ್ತು, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್‌, ದಿನೇಶ್‌ ಶೆಟ್ಟಿಕಾಪು, ಅನಿವಾಸಿ ಉದ್ಯಮಿ ಬಿಆರ್‌ ಶೆಟ್ಟಿ, ಯಶವಂತ ಶೆಟ್ಟಿ, ಲೋಲಾಕ್ಷಿ ಶೆಟ್ಟಿಕಂಬಳ ಸಮಿತಿ ಅಧ್ಯಕ್ಷ ಕಿರಣ್‌ ಶೆಟ್ಟಿಕೋಲ್ನಾಡು ಗುತ್ತು, ಚಂದ್ರಹಾಸ ಶೆಟ್ಟಿಮಸ್ಕತ್‌, ಕೃಷ್ಣ ಹೆಬ್ಬಾರ್‌, ವಿನೋದ್‌ ಸಾಲ್ಯಾನ್‌ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು. ಕಂಬಳದಲ್ಲಿ ಸುಮಾರು 150 ಜೋಡಿ ಕೋಣಗಳು ಭಾಗವಹಿಸಿದ್ದವು. ನವೀನ್‌ ಶೆಟ್ಟಿಹೆಡ್ಮೆ ಎಡ್ಮೆಮಾರ್‌ ನಿರೂಪಿಸಿದರು.

click me!