ಬಿಜೆಪಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ನಂದೀಶ್‌

By Kannadaprabha News  |  First Published Jan 4, 2023, 6:00 AM IST

ಭಾರತ ಪ್ರಧಾನಿ ಮೋದಿಯವರ ಆಡಳಿತದಲ್ಲಿ ವಿಶ್ವಮಾನ್ಯ ರಾಷ್ಟ್ರವಾಗಿ ಹೊರ ಹೊಮ್ಮಿದ್ದು, ಇವರ ನಾಯಕತ್ವ ಇದೇ ರೀತಿ ಮುಂದುವರಿದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕುವ ವಾತವರಣ ಸೃಷ್ಟಿಯಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್‌ ತಿಳಿಸಿದರು.


 ಮಧುಗಿರಿ :  ಭಾರತ ಪ್ರಧಾನಿ ಮೋದಿಯವರ ಆಡಳಿತದಲ್ಲಿ ವಿಶ್ವಮಾನ್ಯ ರಾಷ್ಟ್ರವಾಗಿ ಹೊರ ಹೊಮ್ಮಿದ್ದು, ಇವರ ನಾಯಕತ್ವ ಇದೇ ರೀತಿ ಮುಂದುವರಿದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕುವ ವಾತವರಣ ಸೃಷ್ಟಿಯಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್‌ ತಿಳಿಸಿದರು.

ಇಲ್ಲಿನ ಕುಂಚಿಟಿಗ ಸಮುದಾಯ ಭವನದಲ್ಲಿ ಸೋಮವಾರ ಮಧುಗಿರಿ ಸಂಘಟನಾತ್ಮಕ ಜಿಲ್ಲಾಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಬೂತ್‌ ಮಟ್ಟದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ತಳ ಮಟ್ಟದಿಂದ ಪಕ್ಷ ಕಟ್ಟಬೇಕಿದೆ. ಬೂತ್‌ ಗೆದ್ದರೆ ಚುನಾವಣೆ ಗೆದ್ದಂತೆ, ಭಾರತೀಯ ಜನತಾ ಪಾರ್ಟಿಯಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವ ಕಾರ್ಯಕರ್ತ ಆಧಾರಿತ ಪಕ್ಷ ನಮ್ಮದು, ಆ ನಿಟ್ಟಿನಲ್ಲಿ ಕಾರ್ಯಕರ್ತ ಬಂಧುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮತದಾರರ ಮುಂದಿಟ್ಟು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ಸಮಾಜದ, ದೇಶದ ಅಭ್ಯುದಯಕ್ಕೆ ಸ್ವಾಭಿಮಾನಿ ಕಾರ್ಯಕರ್ತರ ಪಡೆ ಕಟ್ಟಬೇಕಿದೆ. ಜನರನ್ನು ಜಾತಿ, ಹಣದಿಂದ ಹೊರ ತಂದು ದೇಶದ ಬಗ್ಗೆ ಗೌರವ ಮೂಡಿಸುವ ವಾತವರಣ ಸೃಷ್ಟಿಸಿ ಬೆಳಸುವ ಸಲುವಾಗಿ ಈ ಬೂತ್‌ ವಿಜಯ ಅಭಿಯಾನದ ಮೂಲ ಉದ್ದೇಶ ಎಂದರು.

ಶಿರಾ ಶಾಸಕ ಡಾ.ರಾಜೇಶ್‌ಗೌಡ ಮಾತನಾಡಿ, ಕೇವಲ ಇನ್ನೂ 3 ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಎದುರಾಗಲಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ

ತಯಾರಿ ಮಾಡಿಕೊಳ್ಳಬೇಕು. ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಿ ಪ್ರತಿ ಬೂತ್‌ ಮಟ್ಟದಲ್ಲಿ ಮನೆಗಳ ಮೇಲೆ ಕನಿಷ್ಟ50 ಬಾವುಟಗಳು ಹಾರುವಂತಾಗಬೇಕು. ಬಿಜೆಪಿ ಅಂದರೆ ಅದು ಆಂದೋಲನ ಮತ್ತು ಕ್ರಾಂತಿ ಪಕ್ಷ, ಸರ್ಕಾರದ ಯೋಜನೆಗಳನ್ನು ತಳ ಮಟ್ಟದ ಜನತೆಗೆ ತಲುಪಿಸಬೇಕು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್‌್ಥನಾರಾಯಣ್‌ ಮಾತನಾಡಿ, ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಇಂದು 10 ಲಕ್ಷ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆ ಫಲಾನುಭವಿಗಳಾಗಿದ್ದು, 11511 ಜನ ಪೌರಕಾರ್ಮಿಕರಿಗೆ ಕಾಯಂ ಮಾಡಲಾಗಿದೆ. 15 ಸಾವಿರ ಶಿಕ್ಷಕರ ನೇಮಕಾತಿ, ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದ್ದು ಸಿಎಂ ಬೊಮ್ಮಾಯಿ ಅವರು ರಾಜ್ಯದ ಉದ್ದಗಲಕ್ಕೂ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದು 30 ಲಕ್ಷ ಜನರಿಗೆ ಸಾಲ ಸೌಲಭ್ಯ ಕಲ್ಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್‌, ವಿಪ ಸದಸ್ಯ ನವೀನ್‌ಕುಮಾರ್‌, ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಹನುಮಂತೇಗೌಡ, ಮಾಜಿ ಐಎಎಸ್‌ ಅ

ಧಿಕಾರಿ ಅನಿಲ್‌ಕುಮಾರ್‌, ಹಿರಿಯ ಮುಖಂಡ ಡಾ.ವೆಂಕಟರಾಮು, ಜಿಲ್ಲಾ ಉಪಾಧ್ಯಕ್ಷರಾದ ಸುಶೀಲಮ್ಮ, ಲಕ್ಷ್ಮೇಪತಿ, ರವಿ, ಜಯಣ್ಣ, ಮಂಡಲದ ಅಧ್ಯಕ್ಷ

ಪಿ.ಎಲ್‌.ನರಸಿಂಹಮೂರ್ತಿ, ರಂಗಸ್ವಾಮಿ, ವಿಜಯರಾಜು, ಪವನಕುಮಾರ್‌, ರವಿಶಂಕರ್‌ ನಾಯಕ್‌, ಕಚೇರಿ ಕಾರ್ಯದರ್ಶಿ ಸುರೇಶ್‌ ಸೇರಿದಂತೆ ಅನೇಕರಿದ್ದರು.

.3 ತಿಂಗಳಲ್ಲಿ ಚುನಾವಣೆ ಬರಲಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮಧುಗಿರಿ ಉಪವಿಭಾಗದ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಲು ಎಲ್ಲರೂ ಶ್ರಮ ವಹಿಸಬೇಕು.

ಚಿದಾನಂದಗೌಡ ಎಂಎಲ್‌ಸಿ

click me!