ತಾಲೂಕಿನ ನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡಿದ ಟ್ಯಾಂಕರ್ ಸೇವೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಗಣಿ ನೀರನ್ನು ಮೈಮೇಲೆ ಹೋಯಿದುಕೊಂಡು ಪ್ರತಿಭಟನೆ ತಾಲೂಕು ಪಂಚಾಯಿತಿ ಕಚೇರಿ ಎದುರು ನಡೆಸಿದ ಘಟನೆ ನಡೆದಿದೆ.
ಹೊಸನಗರ (ಮೇ.27) : ತಾಲೂಕಿನ ನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡಿದ ಟ್ಯಾಂಕರ್ ಸೇವೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಗಣಿ ನೀರನ್ನು ಮೈಮೇಲೆ ಹೋಯಿದುಕೊಂಡು ಪ್ರತಿಭಟನೆ ತಾಲೂಕು ಪಂಚಾಯಿತಿ ಕಚೇರಿ ಎದುರು ನಡೆಸಿದ ಘಟನೆ ನಡೆದಿದೆ.
ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿಹೀಗೊಂದು ಪ್ರತಿಭಟನೆ ಮಾಡಿದವರು. ಗ್ರಾಮ ಪಂಚಾಯಿತಿ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಈ ಹಿಂದೆ ಅರೆಬೆತ್ತಲೆ, ಮರವನ್ನು ಹತ್ತಿ, ಜಡಿ ಮಳೆಯಲ್ಲಿ ಪ್ರತಿಭಟನೆ ಹೀಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸಿದ ಕರುಣಾಕರ ಶೆಟ್ಟಿ, ಈ ಬಾರಿ ಮೈ ಮೇಲೆ ಸೆಗಣಿ ನೀರು ಸುರಿದುಕೊಂಡು, ಸಗಣಿ ರಾಡಿಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಅಕಾಲಿಕ ಮಳೆಗೆ ಬೆಳೆ ಹಾನಿ; ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ!
ಗ್ರಾಮ ಪಂಚಾಯಿತಿಗಳಲ್ಲಿ 3 ತಿಂಗಳಿಂದ ಅಗತ್ಯವಿದ್ದ ಹಳ್ಳಿಗಳಲ್ಲಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಆದರೆ, ಇಲ್ಲಿಯತನಕ ಒಂದು ಬಿಡಿಕಾಸು ಸಹ ಬಿಡುಗಡೆಯಾಗಿಲ್ಲ ಎಂಬುದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಡಿ.ಜಿ.ಕೋರಿ ಹಾಗೂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೂಡಲೇ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಕಚೇರಿಯಿಂದ ಶೀಘ್ರದಲ್ಲಿ .20 ಲಕ್ಷ ಬಿಡುಗಡೆ ಆಗಲಿದ್ದು, ನಗರ ಗ್ರಾಮ ಪಂಚಾಯಿಗೆ ಪ್ರಥಮ ಆದ್ಯತೆ ನೀಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ನಿಲ್ಲಿಸಲಾಯಿತು.
Wresters Protest ಇಷ್ಟು ದಿನ ಬೀದಿಯಲ್ಲಿ ಕೂರಬೇಕು ಎಂದು ಗೊತ್ತಿರಲಿಲ್ಲ: ಕುಸ್ತಿಪಟು ವಿನೇಶ್ ಫೋಗಾಟ್
-26ಎಚ್‌ಒಸ್1ಪಿ.ಜೆಪಿಜಿ: ಹೊಸನಗರ ತಾಲೂಕು ಪಂಚಾಯಿತಿ ಕಚೇರಿ ಎದುರು ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿಕುಡಿಯುವ ನೀರು ಪೂರೈಸಿದ ಟ್ಯಾಂಕರ್ ಸೇವೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೈ ಮೇಲೆ ಸಗಣಿ ನೀರು ಸುರಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.