ಕಡೂರು (ನ.6) : ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ತಿನ್ನುವಂತೆ ವೈದ್ಯರು ಶಿಫಾರಸು ಮಾಡುತ್ತಿರುವುದು ನÜಮ್ಮ ರೈತರಿಗೆ ಆಶಾಕಿರಣವಾಗಿದೆ. ಹಾಗಾಗಿ ಪ್ರಧಾನಿಗಳು 2023 ಅನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವæ ಶೋಭಾ ಕರಂದ್ಲಾಜೆ ಹೇಳಿದರು.
Chikkaballapura : ಜಿಲ್ಲೆಯಲ್ಲಿ ಈ ಬಾರಿ ಗುರಿ ಮೀರಿ ಸಿರಿಧಾನ್ಯ ಬಿತ್ತನೆ
undefined
ಶನಿವಾರ ಸಂಜೆ ಕಡೂರಿನಲ್ಲಿ ಬಿಜೆಪಿ ವಕ್ತಾರ ಶಾಮಿಯಾನ ಚಂದ್ರು ನಿವಾಸದಲ್ಲಿ ಸುದ್ದಿಗೋಷ್ಟಿನಡೆಸಿ ಮಾತನಾಡಿದ ಅವರು, ದೇಶದ ರೈತರು 360 ಮಿಲಿಯನ್ ಧಾನ್ಯ, ತರಕಾರಿಗಳನ್ನು ಬೆಳೆದಿದ್ದು, ವಿದೇಶಗಳಿಗೆ ರಫ್ತು ಮಾಡಲು ನಿರ್ಧಾರ ಕೈಗೊಂಡ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹೇಳುವಂತೆ ರೈತರ ಆದಾಯ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಯುವಕರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
2013- 2014ರಲ್ಲಿ ಭಾರತದ ಸುಮಾರು ಶೇ.70ರಷ್ಟುರೈತರ ಬಗ್ಗೆ ಯಾರು ಯೋಚನೆ ಮಾಡದೇ ರೈತರಿಗೆ .23,000 ಕೋಟಿ ಮಾತ್ರ ಬಜೆಟ್‌ನಲ್ಲಿ ಇಡಲಾಗಿತ್ತು. ಇದೀಗ ಪ್ರಧಾನಿ ಮೋದಿ ನೇತೃತ್ವ್ವದಲ್ಲಿ .1,32,000 ಕೋಟಿ ನಮ್ಮ ದೇಶದ ಕೃಷಿ ಬಜೆಟ್ ಏರಿಕೆಯಾಗಿದೆ. ಇದರ ಜೊತೆಗೆ .1 ಲಕ್ಷ ಕೋಟಿ ಕೃಷಿ ಸಂಬಂಧಿತ ಮೂಲಭೂತ ಸವಲತ್ತುಗಳಿಗಾಗಿ ನಿಧಿ ಮೀಸಲಿಡಲಾಗಿದೆ. ಇದರಲ್ಲಿ ಶೈತ್ಯಾಗಾರ, ಸಂಸ್ಕರಣಾ ಘಟಕ ನಿರ್ಮಾಣ, ಆಹಾರ ಪರೀಕ್ಷಾ ಕೇಂದ್ರಗಳು, ಪ್ಯಾಕೇಜಿಂಗ್ ಮತ್ತು ಬ್ರಾಂಡಿಂಗ್ ಯುನಿಟ್‌ಗಳ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದರು.
ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ರೈತರ ಕೃಷಿ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗುವಂತೆ ಕ್ರಮ ವಹಿಸಲಾಗಿದೆ. ಕಡೂರು ಸೇರಿದಂತೆ ಭಾರತದ ಎಲ್ಲೆಡೆ ಮತ್ತು ವಿದೇಶಗಳಿಗೂ ಉತ್ತಮ ಬೀಜಗಳನ್ನು ರಫ್ತು ಮಾಡಲು ಖಾಸಗಿ ಸಂಸ್ಥೆಗಳಿಂದ ಕೂಡ ಉತ್ತಮ ಬೀಜಗಳನ್ನು ತಯಾರಿಸಿ ಬೆಳೆಗಳನ್ನು ಬೆಳೆಯಲು ರೈತರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಬೆಳೆ ವಿಮೆ ರೈತರ ಬೆಳೆಗೆ ನಷ್ಟಕ್ಕೆ ಪರಿಹಾರ ಕಟ್ಟಿಕೊಡುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡ 50ರಷ್ಟುಬೆಳೆವಿಮೆ ಕಟ್ಟಿರುವ ರೈತರಿಗೆ 37 ಕೋಟಿ ರು. ಬೆಳೆ ವಿಮೆ ಸಿಕ್ಕಿದ್ದು ಹಾಗು 10 ಲಕ್ಷ ಕೋಟಿ ರು. ಇಡೀ ದೇಶಾದ್ಯಂತ ಪರಿಹಾರವಾಗಿ ರೈತರಿಗೆ ವಿಮೆ ಪರಿಹಾರ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ರೈತರ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಕಟ್ಟಿಬದ—ವಾಗಿದೆ. ರಾಜ್ಯ ಸರ್ಕಾರವು ಕೂಡ ಕೇಂದ್ರ ಸರ್ಕಾರದ ಕೈಜೋಡಿಸಿ ದೇಶದ ಬೆನ್ನೆಲುಬಾಗಿರುವ ರೈತರ ನೆಮ್ಮದಿ ಬದುಕಿಗೆ ಸಹಕಾರ ನೀಡಬೇಕು ಎಂದರು.
ಇನ್ನು ಜಿಲ್ಲೆಯ ತರೀಕೆರೆ, ಕಡೂರು ಭಾಗದಲ್ಲಿ ರೈತರ ಈರುಳ್ಳಿ ಮತ್ತಿತರ ಪದಾರ್ಥಗಳು ಲಾಭ ದಕ್ಕದೇ ಹಾಳಾಗುವ ಸಾದ್ಯತೆಗಳಿದ್ದು, .9 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. ತರೀಕೆರೆಯ ಎರಡು ಕಡೆ ಆಹಾರ ಪದಾರ್ಥ ಪರೀಕ್ಷೆ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಆಹಾರ ಪದಾರ್ಥಗಳ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಈಗಾಗಲೇ ಇಡೀ ದೇಶದಲ್ಲಿ ಏರ್‌ಫೋರ್ಚ್ ನಿರ್ಮಾಣ, ಹೈವೇ ಕಾಮಗಾರಿಗಳು, ಕೇಂದ್ರದಿಂದ ಮನೆ ಮನೆಗೆ ಮೊದಲ ಬಾರಿಗೆ ಸರ್ಕಾರವು ಜಲಜೀವನ್ ಯೋಜನೆಯಲ್ಲಿ ನೀರು ನೀಡುವ ಮತ್ತು ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಆ ಮೂಲಕ ಬರಲಿರುವ 100ನೇ ವರ್ಷದ ಭಾರತದ ಸ್ವಾತಂತ್ರ್ಯ ಮಹೋತ್ಸವದ ಆಚರಣೆಯಲ್ಲಿ ಭಾರತವು ಹೇಗಿರಬೇಕು ಎಂಬ ಕಲ್ಪನೆ ನಮ್ಮೆಲ್ಲರಿಗೂ ಇರಬೇಕು ಎಂದು ಪ್ರಧಾನಿಗಳು ಹೇಳಿದ್ದಾರೆ ಎಂದ ಅವರು, ಕಡೂರು, ತರೀಕೆರೆ ಭಾಗಗಳಲ್ಲಿ ಸಾಕಷ್ಟುಅಭಿವೃದಿ— ಕೆಲಸಗಳು ಆಗುತ್ತಿವೆ.ಗ್ರಾಮೀಣ ರಸ್ತೆಗಳು ಕೆರೆ ತುಂಬಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು
ಇದೇ ಸಂದರ್ಭದಲ್ಲಿ ಶಾಸಕರಾದ ಬೆಳ್ಳಿ ಪ್ರಕಾಶ್, ತರೀಕೆರೆ ಶಾಸಕ ಡಿ.ಎಸ್. ಸುರೇಶ್, ತಹಸೀಲ್ದಾರ್ ಜೆ.ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಬಿಜೆಪಿ ಮುಖಂಡರಾದ ದೇವಾನಂದ್, ಶಾಮಿಯಾನ ಚಂದ್ರು, ಪುರಸಭಾ ಸದಸ್ಯೆ ಮಂಜುಳಾ ಚಂದ್ರು, ಬೋರ್‌ವೆಲ್ ಬಾಬು, ಅಡಕೆ ಚಂದ್ರು, ಜಿಗಣೇಹಳ್ಲಿ ನೀಲಕಂಠಪ್ಪ, ಎಸ್.ಬಸವರಾಜು ಸೇರಿದಂತೆ ಮತಿತ್ತರರು ಇದ್ದರು.