ಚಿಕ್ಕಮಗಳೂರು: ಕುಡುಕರ ಅಡ್ಡೆಯಾದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಳಿಗೆಗಳು..!

By Girish Goudar  |  First Published Oct 4, 2023, 8:11 PM IST

ಉದ್ಘಾಟನೆಯಾಗಿದ್ದರೂ ಉಪಯೋಗಕ್ಕೆ ಬಾರದ ಮಳಿಗೆಗಳು ವರ್ತಕರಿಗೆ ಲಭ್ಯವಾಗಿಲ್ಲ,  ವರ್ತಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಿರ್ಮಾಣವಾಗಿರುವ ಮಳಿಗೆಗಳು ಅವ್ಯವಸ್ಥೆಯ ಅಗರವಾಗಿದೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ  ನಿರ್ಮಾಣ ಮಾಡಿರುವ ಮಳಿಗೆಗಳು ಉದ್ಟಾಟನೆಯಾಗಿ ಅನಾಥವಾಗಿದ್ದು ನಗರಸಭೆಯ ಆದಾಯಕ್ಕೂ ಕತ್ತರಿ ಬಂದಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.04):  ಚಿಕ್ಕಮಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯಮಳಿಗೆಗಳು ಇಂದು ಕುಡುಕರ ಅಡ್ಡೆವಾಗಿ ಪರಿವರ್ತನೆ ಆಗಿದೆ. ಉದ್ಘಾಟನೆಯಾಗಿದ್ದರೂ ಉಪಯೋಗಕ್ಕೆ ಬಾರದ ಮಳಿಗೆಗಳು ವರ್ತಕರಿಗೆ ಲಭ್ಯವಾಗಿಲ್ಲ,  ವರ್ತಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಿರ್ಮಾಣವಾಗಿರುವ ಮಳಿಗೆಗಳು ಅವ್ಯವಸ್ಥೆಯ ಅಗರವಾಗಿದೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ  ನಿರ್ಮಾಣ ಮಾಡಿರುವ ಮಳಿಗೆಗಳು ಉದ್ಟಾಟನೆಯಾಗಿ ಅನಾಥವಾಗಿದ್ದು ನಗರಸಭೆಯ ಆದಾಯಕ್ಕೂ ಕತ್ತರಿ ಬಿದ್ದಿದೆ.

Tap to resize

Latest Videos

undefined

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಳಿಗೆಗಳು 

ಚಿಕ್ಕಮಗಳೂರು ನಗರದ ಹೃದಯ ಭಾಗವಾಗಿರುವ ಎಮ್ ಜಿ ರಸ್ತೆ ಮತ್ತು ದಂಟರಮಕ್ಕಿ ಬಳಿ  54 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.ಚಿಕ್ಕಮಗಳೂರು ನಗರಸಭೆ ವತಿಯಿಂದ ರಾಜ್ಯದಲ್ಲೇ ಮಾದರಿ ಎನ್ನುವ ರೀತಿಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ನಂತರ ಕೈ ತೊಳೆದುಕೊಂಡಿರುವ ಪರಿಣಾಮ ಮಳಿಗೆಗಳಿಗೆ ಗ್ರಹಣ ಹಿಡಿದಿದೆ.ನಗರಸಭೆಗೆ ಹೆಚ್ಚು ಆದಾಯ ತಂದುಕೊಡಬೇಕಿದ್ದ ನೂತನವಾಗಿ ನಿರ್ಮಿಸಿರುವ ನಗರಸಭೆ ಮಳಿಗೆಗೆಳು ಉದ್ಘಾಟನೆಯಾದರೂ ಬಾಡಿಗೆ ನೀಡಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. 

ಚಿಕ್ಕಮಗಳೂರು: ಅಡಿಕೆಗೆ ಎಲೆಚುಕ್ಕಿ ರೋಗ, ಬೆಳೆಗಾರರು ಕಂಗಾಲು..!

3.50 ಕೋಟಿ ರೂ ವೆಚ್ಚದಲ್ಲಿ ದಂಟರಮಕ್ಕಿ ಕತ್ರಿಮಾರಮ್ಮ ದೇವಸ್ಥಾನದ ಸಮೀಪ 32 ವಾಣಿಜ್ಯ ಮಳಿಗೆ ನಿರ್ಮಿಸಿದೆ.ಅದೇ ರೀತಿ ನಗರದ ಎಮ್ ಜಿ ರಸ್ತೆಯ ಹಳೆ ತರಕಾರಿ ಮಾರುಕಟ್ಟೆಯಲ್ಲಿ 3.50 ಕೋಟಿ ರೂ.ವೆಚ್ಚದಲ್ಲಿ ಅಟಲ್ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು ಅಲ್ಲಿಯೂ 22 ಮಳಿಗೆ ನಿರ್ಮಿಸಲಾಗಿದೆ. ಈ ಎರಡೂ ವಾಣಿಜ್ಯ ಸಂಕೀರ್ಣಗಳನ್ನು ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದರೆ 2023ರ ಫೆಬ್ರವರಿಯಲ್ಲಿ ಅಂದಿನ ಶಾಸಕ ಸಿ.ಟಿ.ರವಿ ಉದ್ಘಾಟಿಸಿದ್ದಾರೆ. ಆದರೆ ಈವರೆಗೂ ಮಳಿಗೆಗಳು ಮಾತ್ರ ವರ್ತಕರಿಗೆ ದೊರೆತಿಲ್ಲ. ನಗರಸಭೆ ಆದಾಯ ಖೋತಾ ಆಗುತ್ತಿದೆ.

15ರಿಂದ 20 ಲಕ್ಷ ರೂ ಬಾಡಿಗೆ ಖೋತಾ : 

ಇಲ್ಲಿಯವರೆಗೆ ಎರಡೂ ವಾಣಿಜ್ಯ ಸಂಕೀರ್ಣ ಮಳಿಗೆಗೆಳ ದರಪಟ್ಟಿಯನ್ನೇ ನಿಗಧಿ ಮಾಡಿಲ್ಲ. ಇತ್ತೀಚೆಗೆ ದರಪಟ್ಟಿ ತಯಾರಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿ ಬಳಿ ಕಳುಹಿಸಲಾಗಿದೆ.ಈ ಎರಡೂ ಸಂಕೀರ್ಣಗಳಿಂದ  ನಗರಸಭೆಗೆ ಮಾಸಿಕ 15ರಿಂದ 20 ಲಕ್ಷ ರೂ ಬಾಡಿಗೆ ನಿರೀಕ್ಷಿಸಿದ್ದು ಅಷ್ಟೂ ಹಣ ಈಗ ನಷ್ಟವಾಗುತ್ತಿದೆ. ಸದ್ಯ ಕಾಮಗಾರಿ  ಮುಕ್ತವಾಗಿದ್ದು ಮಳಿಗೆಳನ್ನು ಉದ್ಟಾಟನೆ ಮಾಡಿ ನಿರ್ಲಕ್ಷ್ಯ ಧೋರಣೆ ಅನುಸುರಿಸುತ್ತಿದೆ. ಇದರ ಪರಿಣಾಮ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 54 ಅಂಗಡಿ ಮಳಿಗೆಳನ್ನು ಟೆಂಡರ್ ಕರೆದಿಲ್ಲ, ಕಳೆದ 8 ತಿಂಗಳಿನಿಂದ ಹಾಗೇ ಉಳಿದಿವೆ.ಇದಕ್ಕೆ ಮೂಲ ಕಾರಣ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವದರಿಂದ ಈ ಮಳಿಗೆಳ ವರ್ತಕರಿಗೆ ಸಿಗುವ ಭಾಗ್ಯ ದೊರೆತ್ತಿಲ್ಲ, ಇದರಿಂದ ಪ್ರತಿನಿತ್ಯ ರಾತ್ರಿ ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಾಮಿಸಿದೆ. ಈ ಮಳಿಗೆಳನ್ನು ಟೆಂಡರ್ ಮೂಲಕ ಕರೆದು ಬಾಡಿಗೆ ನೀಡಿದರೇ ನಗರಸಭಗೆ ಪ್ರತಿ ತಿಂಗಳು ಲಕ್ಷಾಂತರ ರೂ ಆದಾಯ ಬರಲಿದ್ದು 54 ಕುಟುಂಬಗಳಿಗೆ ಆಧಾರವಾಗಲಿದೆ.ಆದ್ರೆ ಇದರ ಕಡೆ ಯಾವೋಬ್ಬ ಜನ ನಾಯಕರು ತಿರುಗಿ ನೋಡುತ್ತಿಲ್ಲ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಭೆ ಅಧ್ಯಕ್ಷರು ಇನ್ನು ಕೆಲವೇ ದಿನದಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.

ಒಟ್ಟಾರೆ ಅನಾಥವಾಗಿರುವ ಮಳಿಗೆಗಳು ಇಂದು ಅನೈತಿಕ ಚಟುಟವಟಿಕೆ ತಾಣವಾಗಿದೆ. ಕುಡುಕರ ಅಡ್ಡವಾಗಿ ಪರಿವರ್ತನೆ ಯಾಗಿದ್ದು ಮಳಿಗೆಗಳು ಮುಂಭಾಗದಲ್ಲಿ ಮದ್ಯ ಬಾಟಲಿಗಳು ರಾಶಿಯೇ ಬಂದಿದೆ. ಇನ್ನಾದ್ರೂ ಸಂಬಂಧಪಟ್ಟವರು ಎಚ್ಚೇತ್ತ ಇತ್ತ ಗಮನ ಹರಿಸಿಬೇಕಾಗಿದೆ. ಮಳಿಗೆ ಪಡೆಯಲು ತುದಿಗಾಲಲಿದ್ದು ನಗರಸಭೆ ಮಾತ್ರ ಹಲವು ತಾಂತ್ರಿಕ ಸಬೂಬು ಹೇಳುತ್ತಾ ಇರುವುದು ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.

click me!