
ರಾಯಚೂರು(ಜೂ.12): ಸ್ಥಳೀಯ ಯರಮರಸ್ ಸಮೀಪದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶ್ರೀರಾಘವೇಂದ್ರ ಸ್ವಾಮಿಗಳ ಹೆಸರನ್ನಿಡಲು ಸ್ಥಳೀಯ ಆಡಳಿತ ನಿರ್ಧರಿಸಿದೆ.
ಈ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೋವಿಡ್ ಬಳಿಕ ರಾಯಚೂರಿನ ಮಗುವಿನಲ್ಲಿ HLH ಹೊಸ ಕಾಯಿಲೆ ಪತ್ತೆ
ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಶ್ರೀರಾಘವೇಂದ್ರ ಸ್ವಾಮಿಗಳ ಹೆಸರನ್ನಿಡುವಂತೆ ಜಿಲ್ಲೆ ಸಂಸದರು, ಶಾಸಕರು, ಸದಸ್ಯರು ಮನವಿ ಮಾಡಿದ್ದು ಇದನ್ನು ಪರಿಗಣಿಸಿ ವಿಮಾನ ನಿಲ್ದಾಣಕ್ಕೆ ರಾಯರ ಹೆಸರನ್ನಿಡಲು ಸಭೆ ನಿರ್ಧರಿಸಿತು.