ನಾಳೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್‌ಡೌನ್ ಜಾರಿಯ ಸಂಬಂಧ ಪ್ರಮುಖ ತೀರ್ಮಾನ ನಾಳೆ ಹೊರ ಬೀಳಲಿದೆ. ಮಹಾನಗರಿಯಲ್ಲಿ ಈಗಾಗಲೇ ಕೊರೋನಾ ಅಟ್ಟಹಾಸ ಅಪಾಯಕಾರಿಯಾಗಿ ಮುಂದುವರಿದ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ ಇನ್ನಷ್ಟು ತಡವಾಗಲಿದೆಯಾ..? ಇಲ್ಲಿ ಓದಿ
ನಾಳೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್‌ಡೌನ್ ಜಾರಿಯ ಸಂಬಂಧ ಪ್ರಮುಖ ತೀರ್ಮಾನ ನಾಳೆ ಹೊರ ಬೀಳಲಿದೆ. ಮಹಾನಗರಿಯಲ್ಲಿ ಈಗಾಗಲೇ ಕೊರೋನಾ ಅಟ್ಟಹಾಸ ಅಪಾಯಕಾರಿಯಾಗಿ ಮುಂದುವರಿದ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಂಚಾರವನ್ನೂ ಸದ್ಯ ನಿರೀಕ್ಷಿಸುವಂತಿಲ್ಲ.
ನಾಳೆಯ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಜಾರಿಯ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇದರ ಜೊತೆಗೆ ಸಂಪುಟ ಸಭೆಯಲ್ಲಿ ಮೆಟ್ರೋ ಸಂಚಾರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಅಂಟಿದ ಮಹಾಮಾರಿ ಕೊರೋನಾ..!
ಬೆಂಗಳೂರಿನಲ್ಲಿ ದಿನೇ ದಿನೆ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ ಮೆಟ್ರೋ ಸಂಚಾರಕ್ಕೆ ಅನುಮತಿ ಬೇಡ ಎಂದು ಕೆಲ ಸಚಿವರು ಅಭಿಪ್ರಾಯ ಪಡುತ್ತಿದ್ದಾರೆ. ಈಗ ಬಿಎಂಟಿಸಿ, ಕೆಎಸ್ ಆರ್ ಟಿ ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಇದರ ಜೊತೆಗೆ ಬಿಎಂಟಿಸಿಯ ಸಿಬ್ಬಂದಿಗಳಿಗೂ ಕೋರೋನಾ ಸೊಂಕು ಕಾಣಿಸಿಕೊಳ್ಳುತ್ತಿದೆ.
ಈ ಸಮಯದಲ್ಲಿ ಮತ್ತೆ ಮೆಟ್ರೋ ಸಂಚಾರಕ್ಕೆ ಅನುಮತಿ ಕೊಡೋದು ಬೇಡ ಎಂದು ಸರ್ಕಾರಕ್ಕೆ ಕೆಲವರು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಜುಲೈನಿಂದ ಮೆಟ್ರೋ ಸಂಚಾರ ಆರಂಭಿಸುವ ಬಗ್ಗೆ ಮೊದಲು ಚಿಂತನೆ ನಡೆದಿತ್ತು.
ಗಣಿ ಮಾಲೀಕರಿಂದ ಲಂಚ ಪಡೆದಿಲ್ಲ: ದೇವರ ಮುಂದೆ ಸಿಎಂ ಪುತ್ರ ವಿಜಯೇಂದ್ರ ಪ್ರಮಾಣ
ಆದರೆ ಈಗ ಬೆಂಗಳೂರಿನಲ್ಲಿ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಧ್ಯಕ್ಕೆ ಮೆಟ್ರೋ ಸಂಚಾರ ಬೇಡ ಎಂದು ಹಲವಾರು ಸಚಿವರು ಸಹ ಅಭಿಪ್ರಾಯ ಪಟ್ಟಿದ್ದಾರೆ. ಅಂತಿಮವಾಗಿ ನಾಳೆ ಸಚಿವ ಸಂಪುಟ ಸಭೆಯಲ್ಲಿ ಮೆಟ್ರೋ ಸಂಚಾರದ ಬಗ್ಗೆಯೂ ಚರ್ಚೆ ಸಾಧ್ಯತೆ ಇದೆ. ಅದು ಅಲ್ಲದೆ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಸಹ ಇದುವರೆಗೂ ಒಪ್ಪಿಗೆ ಸೂಚಿಸಿಲ್ಲ. ಸದ್ಯಕ್ಕೆ ಬೆಂಗಳೂರಲ್ಲಿ ಮೆಟ್ರೋ ಸಂಚಾರ ಆರಂಭವಬಾಗುವ ಸಾಧ್ಯತೆ ಕಡಿಮೆ ಇದೆ.