ನಿಷೇಧಾಜ್ಞೆ ನಡುವೆಯೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮಾಲೀಕರಿಂದ ನಾನು ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ನಾನು ದೇವಾಸ್ಥಾನದ ಎದುರು ನಿಂತು ಪ್ರಮಾಣ ಮಾಡುತ್ತಿದ್ದೇನೆ ಎಂದು ಲಂಚ ಆರೋಪದ ಬಗ್ಗೆ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ದೇವಸ್ಥಾನದ ಎದುರು ಪ್ರಮಾಣ ಮಾಡಿದರು.
ಮಂಡ್ಯ(ಜೂ.24): ನಿಷೇಧಾಜ್ಞೆ ನಡುವೆಯೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮಾಲೀಕರಿಂದ ನಾನು ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ನಾನು ದೇವಾಸ್ಥಾನದ ಎದುರು ನಿಂತು ಪ್ರಮಾಣ ಮಾಡುತ್ತಿದ್ದೇನೆ ಎಂದು ಲಂಚ ಆರೋಪದ ಬಗ್ಗೆ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ದೇವಸ್ಥಾನದ ಎದುರು ಪ್ರಮಾಣ ಮಾಡಿದರು.
ಕೆ.ಆರ್.ಪೇಟೆ ತಾಲೂಕಿನ ಸಾಸಲು ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಬೇಬಿ ಗ್ರಾಮಸ್ಥರಿಗೆ ವಿಜಯೇಂದ್ರ ಸ್ಪಷ್ಟನೆ ನೀಡಿ, ನಾನು ಈಗ ದೇವರ ಸನ್ನಿಧಿಯಲ್ಲಿ ಇದ್ದೇನೆ. ಅಕ್ರಮ ಗಣಿಗಾರಿಕೆ ಕುಮ್ಮಕ್ಕು ನೀಡಲು ನಾನು ನಯಾ ಪೈಸೆ ಲಂಚ ತೆಗೆದುಕೊಂಡಿಲ್ಲ. ಇದೊಂದು ಶುದ್ಧ ಸುಳ್ಳಿನ ಸಂಗತಿ ಹಾಗೂ ಆಧಾರ ರಹಿತವಾಗಿದೆ ಎಂದು ಹೇಳಿದರು. ಕೆ.ಆರ್. ಪೇಟೆ ತಾಲೂಕಿನ ಸಾಸಲು ಹಾಗೂ ಬæೕಬಿ ಬೆಟ್ಟದಲ್ಲಿ ನಿಷೇಧಾಜ್ಞೆ ನಡುವೆ ಗಣಿಗಾರಿಕೆ ನಡೆಯುತ್ತಿದೆ, ಕೂಡಲೇ ನಿಲ್ಲಿಸುವಂತೆ ಗ್ರಾಮಸ್ಥರು ವಿಜಯೇಂದ್ರ ಅವರಿಗೆ ಮನವಿ ಮಾಡಿದರು.
ಬೇಬಿ ಬೆಟ್ಟಪ್ರದೇಶಕ್ಕೆ ಡಿಸಿ ದಿಢೀರ್ ಭೇಟಿ: ನಿಷೇಧದ ನಂತರವೂ ನಡೀತಿದ್ಯಾ ಅಕ್ರಮ ಗಣಿಗಾರಿಕೆ..?
ಬೇಬಿ ಬೆಟ್ಟಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಕಲ್ಲು ಗಣಿಗಾರಿಕೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಈ ನಿಷೇಧಾಜ್ಞೆ ತೆರವುಗೊಳಿಸಲು ವಿಜಯೇಂದ್ರಗೆ 8-10ಕೋಟಿ ಲಂಚ ನೀಡಿದ್ದೇವೆ ಎಂದು ರಾಜಾರೋಷವಾಗಿ ಗಣಿ ಮಾಲೀಕರು ಹೇಳುತ್ತಿದ್ದಾರೆ. ಇಂತಹದ್ದೊಂದು ಆರೋಪ ಮಾಡಿ ಆ ಮೂಲಕ ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ತರುವ ಪ್ರಯತ್ನವನ್ನು ಗಣಿ ಮಾಲೀಕರು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.
ಈ ವೇಳೆ ಇಂತಹ ಆರೋಪಗಳು ಶುದ್ಧ ಸುಳ್ಳು. ಅಕ್ರಮ ಗಣಿಗಾರಿಕೆಗೆ ಯಾವುದೇ ಅವಕಾಶವೇ ಇಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ನಾನು ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ವಿಜಯೇಂದ್ರ ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ
ವಿಜಯೇಂದ್ರರ ಗಮನ ಸೆಳೆದ ಗ್ರಾಮಸ್ಥರು ನಾವು ಈ ಹಿಂದೆ ನಿಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೂ ನಾವು ಬಂದು ಸಿಎಂ ಯಡಿಯೂರಪ್ಪನವರಿಗೂ ಮನವಿ ನೀಡಿದ್ದೇವು. ನಿಮ್ಮ ತಂದೆ ಗಣಿಗಾರಿಕೆ ನಿಲ್ಲಿಸಿದ್ದಾರೆ. ಆದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕæಲವು ಅಧಿಕಾರಿಗಳು ಜೆಡಿಎಸ್ ಏಜೆಂಟ್ ರೀತಿಯಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರುಗಳ ವಿರುದ್ಧವೂ ಕ್ರಮ ಜರುಗಿಸಿ ಎಂದು ಸಿಎಂ ಬಳಿ ಹೇಳಿಕೊಂಡಿರುವುದನ್ನು ವಿಜಯೇಂದ್ರ ಗಮನಕ್ಕೆ ತಂದರು.