ಚಾರ್ಲಿ ಸಿನಿಮಾ ನೋಡಿ ಮುದ್ದಾದ ನಾಯಿ ಸಾಕಿದವರು ಬಹಳ ಮಂದಿ. ಅದೇ ನಾಯಿಯ ಟಾರ್ಚರ್ ತಾಳದೆ ಮೂರೇ ದಿನದಲ್ಲಿ ಬಿಟ್ಟು ಬರುವವರೂ ಕಂಡಿದ್ದೇವೆ. ಇಲ್ಲೊಬ್ಬ ಇಂಜಿನಿಯರ್ ತಮ್ಮ ಮುದ್ದಾದ ನಾಯಿಯ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿದ್ದಾನೆ.
ಮೈಸೂರು (ಆ.24) : ಚಾರ್ಲಿ ಸಿನಿಮಾ ನೋಡಿ ಮುದ್ದಾದ ನಾಯಿ ಸಾಕಿದವರು ಬಹಳ ಮಂದಿ. ಅದೇ ನಾಯಿಯ ಟಾರ್ಚರ್ ತಾಳದೆ ಮೂರೇ ದಿನದಲ್ಲಿ ಬಿಟ್ಟು ಬರುವವರೂ ಕಂಡಿದ್ದೇವೆ. ಇಲ್ಲೊಬ್ಬ ಇಂಜಿನಿಯರ್ ತಮ್ಮ ಮುದ್ದಾದ ನಾಯಿಯ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿದ್ದಾನೆ. ಮೈಸೂರಿ(Mysuru)ನ ಇಂಜಿನಿಯರಿಂಗ್(Engineering) ಉದ್ಯೋಗಿಯೊಬ್ಬ ತನ್ನ ಮುದ್ದಾದ ನಾಯಿಯ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿ ಗಮನ ಸೆಳೆದಿದ್ದಾನೆ. ಮೃತಪಟ್ಟ ಪ್ರೀತಿಯ ನಾಯಿಗೆ ಅಂತಿಮ ವಿಧಿವಿಧಾನ ನಡೆಸಿದ ಕುಟುಂಬಸ್ಥರು, ಅದರ ಸಾವಿಗೆ ಕಣ್ಣೀರಾಗಿದ್ದಾರೆ.
ಚಾರ್ಲಿಗಿಂತಲೂ ಸಖತ್ ನಟ ಈ ಟಾಮಿ, ಚಿರತೆ ಮುಂದೆ ಸತ್ತಂತೆ ನಟಿಸಿ ಬದುಕುಳಿದ ನಾಯಿ!
ಮೈಸೂರಿನ ರಾಮಾನುಜ ರಸ್ತೆ(Ramanuja Road) ನಿಮಾಸಿ ವಿನಯ್' ಪವನ್(Vinay Pavan) ತನ್ನ ಮುದ್ದಾದ ನಾಯಿಯ ಅಂತ್ಯಕ್ರಿಯೆ ಮಾಡಿ ಗಮನ ಸೆಳೆದಿರೋದು. ಸೋಫಿ(Sofy) ಹೆಣ್ಣು ನಾಯಿ ಇಂದು ಬೆಳಗ್ಗೆ ಮೃತಪಟ್ಟಿದ್ದು, ಅದರ ಅಂತ್ಯ ಸಂಸ್ಕಾರ ಹಾಗೂ ಧಾರ್ಮಿಕ ವಿಧಿ ವಿದಾನ ಅದೇ ಕುಟುಂದ ನಿಯಮಾವಳಿಯಂತೆ ನಡೆದಿದೆ.
ಮನೆಯಲ್ಲೇ ಹುಟ್ಟಿ ಬೆಳೆದಿದ್ದಳು ಸೂಫಿ: ಸೂಫಿ ಹೆಸರಿನ ಮುದ್ದಾದ ನಾಯಿಮರಿ ವಿನಯ್ ಅವರ ಮನೆಯಲ್ಲೇ ಹುಟ್ಟಿತ್ತು. 6.5 ವರ್ಷ ಈ ನಾಯಿ ಮನೆಯ ಸದಸ್ಯರಲ್ಲಿ ಒಂದಾಗಿ ಉಳಿದುಕೊಂಡಿತ್ತು. ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೋಫಿ ನಾಯಿ, ಇಂದು ಮುಂಜಾನೆ ಮೃತಪಟ್ಟಿದೆ. ಹೊಟ್ಟೆಯ ಆರೋಗ್ಯ ಸಮಸ್ಯೆಯಿಂ ನರಳುತ್ತಿದ್ದ ಸೂಫಿಗೆ ನಿತ್ಯ ಎರಡು ಬಾರಿ ಗ್ಲೂಕೋಸ್ ಹಾಗೂ ಎರೆಡೆರಡು ಇಂಜೆಕ್ಷನ್ ನೀಡಲಾಗ್ತಿತ್ತು. ಕೊನೆಗೆ ಚಿಕಿತ್ಸೆ ಫಲಿಸದೆ, ಜಾಂಡಿಸ್‌ಗೆ ಬಲಿಯಾಗಿದೆ.
ನಾಯಿ ಮರಿ ಅಂದಕೊಂಡು ಮನೆಗೆ ತಂದರು : ಬಾತುಕೋಳಿ ತಿಂದಾಗಲೇ ಗೊತ್ತಾಗಿದ್ದು ನರಿ ಎಂದು!
ಈ ವೇಳೆ ಸೋಫಿಗೆ ಅಂತಿಮ ವಿಧಿವಿಧಾನದ ಮೂಲಕ ಅಂತಿಮ ಸಂಸ್ಕಾರ ಮಾಡಲಾಗಿದೆ. ವೀರಶೈವ ಪದ್ಧತಿಯಂತೆ ಕಾರ್ಯ ನೆರವೇರಿಸಿದ ಕುಟುಂಬಸ್ಥರು, 11 ದಿನದ ಕಾರ್ಯ ಮಾಡಲು ಸಹ ಸಿದ್ದತೆ ಮಾಡಿಕೊಂಡಿದ್ದಾರೆ.