ಗದಗ: ಕೊಣ್ಣೂರು ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರ ದುರ್ಮರಣ..!

By Girish Goudar  |  First Published Aug 18, 2024, 9:31 AM IST

ಸಾರಿಗೆ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಇಂದು ನಡೆದಿದೆ. 


ಗದಗ(ಆ.18)  ಸಾರಿಗೆ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಇಂದು(ಭಾನುವಾರ) ನಡೆದಿದೆ. 

ಮೃತರನ್ನ ಹಾವೇರಿ ಮೂಲದ ರುದ್ರಪ್ಪ ಅಂಗಡಿ(55),ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16),ಮಗ ವಿಜಯ(12) ಎಂದು ಗುರುತಿಸಲಾಗಿದೆ. 

Tap to resize

Latest Videos

undefined

ತುಮಕೂರು: ಬೈಕ್‌ನಿಂದ ಆಯತಪ್ಪಿ ಬಿದ್ದ ಬಾಲಕನ ತಲೆ ಮೇಲೆ ಹರಿದ ಶಾಲಾ ಬಸ್‌, ಸ್ಥಳದಲ್ಲೇ ಸಾವು..!

ಸಾರಿಗೆ ಬಸ್‌ ಬಾಗಲಕೋಟೆ ಜಿಲ್ಲೆಯ ಇಳಕಲ್ ನಿಂದ ಹುಬ್ಬಳ್ಳಿಗೆ ಹೊರಟ್ಟಿತ್ತು. ಹಾವೇರಿಂದ ಕಲ್ಲಾಪೂರದ ಕಡೆಗೆ ಕಾರು ಹೊರಟ್ಟಿತ್ತು. ಈ ವೇಳೆ ಕಾರಿಗೆ ಸಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!