ಬೆಂಗಳೂರು: 9 ದಿನ ಹಿಂದೆ ನಾಪತ್ತೆ ಆಗಿದ್ದವ ಚರಂಡಿಯಲ್ಲಿ ಶವವಾಗಿ ಪತ್ತೆ

Published : Mar 01, 2023, 10:01 AM ISTUpdated : Mar 01, 2023, 10:18 AM IST
ಬೆಂಗಳೂರು: 9 ದಿನ ಹಿಂದೆ ನಾಪತ್ತೆ ಆಗಿದ್ದವ ಚರಂಡಿಯಲ್ಲಿ ಶವವಾಗಿ ಪತ್ತೆ

ಸಾರಾಂಶ

ಚರಂಡಿ ಮೇಲೆ ಚಪ್ಪಡಿ ಹಾಕಿದ್ದ ಕಾರಣಕ್ಕೆ ಮೃತದೇಹ ಯಾರಿಗೂ ಕಂಡಿರಲಿಲ್ಲ. ಚರಂಡಿ ನೀರು ಹರಿಯದೆ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಚರಂಡಿ ಚಪ್ಪಡಿಯನ್ನು ಸರಿಸಿ ಸ್ಥಳೀಯರು ನೋಡಿದಾಗ ಮೃತದೇಹ ಪತ್ತೆ. 

ಬೆಂಗಳೂರು(ಮಾ.01): ಒಂಭತ್ತು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನೊಬ್ಬ ಮೃತದೇಹವು ಆತನ ಮನೆ ಸಮೀಪದ ಚರಂಡಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಬಿನ್ನಿಮಿಲ್‌ ಸಮೀಪದ ಮಾರ್ಕಂಡೇಯ ಲೇಔಟ್‌ ನಿವಾಸಿ ಮಧುಸೂದನ್‌ (33) ಮೃತ ದುರ್ದೈವಿ. ಮನೆ ಸಮೀಪದ ಚರಂಡಿ ನೀರು ಸರಾಗವಾಗಿ ಸಾಗದ ಹಿನ್ನಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಪತ್ನಿ ಸುಷ್ಮಿತಾ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದ ಮಧುಸೂದನ್‌, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಮನೆಗೆ ಬಾರದೆ ಫೆಬ್ರವರಿ 19ರಿಂದ ಕಾಣೆಯಾಗಿದ್ದ. ತನ್ನ ಪತಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಕೊನೆಗೆ ಎಲ್ಲೂ ಕಾಣದೆ ಹೋದಾಗ ಮಂಗಳವಾರ ಜೆ.ಜೆ.ನಗರ ಠಾಣೆಗೆ ಆತನ ಪತ್ನಿ ಸುಷ್ಮಿತಾ ದೂರು ನೀಡಿದ್ದಳು. ಆದರೆ ಮನೆ ಸಮೀಪದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ಗೋಕಾಕ್‌: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ

ಚರಂಡಿ ಮೇಲೆ ಚಪ್ಪಡಿ ಹಾಕಿದ್ದ ಕಾರಣಕ್ಕೆ ಮೃತದೇಹ ಯಾರಿಗೂ ಕಂಡಿರಲಿಲ್ಲ. ಚರಂಡಿ ನೀರು ಹರಿಯದೆ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಚರಂಡಿ ಚಪ್ಪಡಿಯನ್ನು ಸರಿಸಿ ಸ್ಥಳೀಯರು ನೋಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Read more Articles on
click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ