ತಲೆಬುರುಡೆ ಇಲ್ಲದ ವ್ಯಕ್ತಿಯ ಮೃತದೇಹ ಒಂದು ಪತ್ತೆಯಾಗಿದ್ದು ಜನರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ರಾಯಚೂರು (ಡಿ.08): ತಲೆ ಬುರಡೆಯಿಲ್ಲದೆ ಇರುವ ವ್ಯಕ್ತಿ ದೇಹ ರಾಯಚೂರು ತಾಲೂಕಿನ ಚಿಕ್ಕಸೂಗೂರು ಗ್ರಾಮದ ಬಳಿ ಪತ್ತೆಯಾಗಿದೆ.
ಚಿಕ್ಕಸೂಗೂರು ಗ್ರಾಮದ ಬಳಿ ಹಾದು ಹೋಗಿರುವ ರೈಲ್ವೆ ಹಳಿಯ ಮೇಲೆ ವ್ಯಕ್ತಿ ದೇಹ ಪತ್ತೆಯಾಗಿದೆ. ಕತ್ತಿನಿಂದ ಕಾಲುನವರಿಗೆ ಇರುವ ದೇಹ ಪತ್ತೆಯಾಗಿದ್ದು, ತಲೆಬುರಾಡೆ ಕಾಣುತ್ತಿಲ್ಲ. ಇಂದು ಬೆಳಿಗ್ಗೆ ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದೆ.
ಭಾರತ್ ಬಂದ್ : ಮೆಜೆಸ್ಟಿಕ್‌ನಲ್ಲಿ ಬಂದ್ ಬಿಸಿ ಹೇಗಿದೆ? ನೋಡೋಣ ಬನ್ನಿ! ..
ತಲೆಬುರಾಡೆಯಿಲ್ಲದೆ ಇರುವುದರಿಂದ ವ್ಯಕ್ತಿ ಗುರುತು ತಿಳಿದು ಬಂದಿಲ್ಲ.ಸ್ಥಳೀಯರು ಈ ದೃಶ್ಯವನ್ನ ಕಂಡು ಗಾಬರಿಗೊಂಡಿದ್ದರೆ. ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ದೌಡಾಯಿಸುತ್ತಿದ್ದಾರೆ.
ವ್ಯಕ್ತಿಯ ಗುರುತು ಪತ್ತೆ ಬಳಿಕ, ಪೊಲೀಸ್ ತನಿಖೆ ಬಳಿಕ ಕೊಲೆಯೋ ಅಥವಾ ಆತ್ಮಹತ್ಯೆ ಎನ್ನುವ ಖಚಿತ ಮಾಹಿತಿ ದೊರೆಯಲಿದೆ.