'ದೇವೇಗೌಡ್ರು ತಮ್ಮ ಮಗನ ಮಾತು ಸರಿಯಿದೆಂದರೆ ನಾನೂ ಒಪ್ಪುತ್ತೇನೆ'

By Kannadaprabha News  |  First Published Dec 8, 2020, 9:33 AM IST

ತಮ್ಮ ಮಗನ ಮಾತು ಸರಿ ಎಂದು ದೇವೇಗೌಡರು ಒಪ್ಪಿಕೊಂಡರೆ ನಾನೂ ಒಪ್ಪಿಕೊಳ್ಳುತ್ತೇನೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 


ಮಂಡ್ಯ (ಡಿ.08):  ಕುಮಾರಸ್ವಾಮಿ ಅವರ ಮಾತಿನ ಬಗ್ಗೆ ನನಗೆ ನಂಬಿಕೆ ಇಲ್ಲ. ದೇವೇಗೌಡರು ನನ್ನ ಮಗನ ಮಾತು ಸರಿಯಿದೆ ಅಂದರೆ ನಾನು ಒಪ್ಪುತ್ತೇನೆ ಎಂದು ಎನ್ ಚೆಲುವರಾಯಸ್ವಾಮಿ ಹೇಳಿದ್ದಾರೆ.  

ಯಾರ ಶ್ರಮವಿಲ್ಲದೆ ಇವರು ಮುಖ್ಯಮಂತ್ರಿಯಾದರಾ ಎಂದು ಪ್ರಶ್ನೆ ಮಾಡಿದ ಚಲುವರಾಯಸ್ವಾಮಿ, ಜಗಮೋಹನ್‌ ರೆಡ್ಡಿಗೆ ಏನೆಲ್ಲ ತೊಂದರೆ ಕೊಟ್ಟರು ಅವರು ಪೂರ್ಣ ಪ್ರಮಾಣದಲ್ಲಿ ಗೆದ್ದು ಮುಖ್ಯಮಂತ್ರಿಯಾಗಿಲ್ವ ಎಂದು ಪ್ರಶ್ನೆ ಮಾಡಿದ್ದಾರೆ.. 

Tap to resize

Latest Videos

'ನಾನು ಬಿಎಸ್‌ವೈ ಜೊತೆ ಅಡ್ಜಸ್ಟ್ ಆಗ್ತೀನಿ ನೀವೇನ್ ಮಾಡ್ತೀರಾ ಅಂತಾರೆ HDK' : ಹೊಸ ಬಾಂಬ್

120 ಸೀಟ್‌ ಗೆಲ್ತೀವಿ ಅಂತ ಹೇಳೋದು ಯಾರಿಗೂ ಬಹುಮತ ಬರದಿದ್ರೆ ಯಾವುದಾದರು ಒಂದು ಪಕ್ಷದ ಜತೆಯಲ್ಲಿ ಸೇರಿಕೊಂಡು ಹೀಗಾಡೋದು ಸರಿಯಿಲ್ಲ. ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ಕೊಡುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು ಎಂದು ತಿಳಿಸಿದರು.

click me!