ಖಡಕ್ ಅಧಿಕಾರಿ ಇಶಾ ಪಂತ್ ವರ್ಗಾವಣೆ ರದ್ದು

By Suvarna News  |  First Published Feb 29, 2020, 1:20 PM IST

ಬೆಂಗಳೂರು ಆಗ್ನೇಯ ಡಿಸಿಪಿ ಇಶಾ ಪಂತ್ ಅವರ ವರ್ಗಾವಣೆಯನ್ನು ರದ್ದು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಅವರು ತಮ್ಮ ಹಿಂದಿನ ಸ್ಥಾನದಲ್ಲಿಯೇ ಮುಂದುವರಿಯಲಿದ್ದಾರೆ. 


ಬೆಂಗಳೂರು [ಫೆ.29]: ಖಡಕ್ ಪೊಲೀಸ್ ಅಧಿಕಾರಿ ಎಂದೇ ಕರೆಸಿಕೊಳ್ಳುವ ಇಶಾ ಪಂತ್ ಅವರ ವರ್ಗಾವಣೆ ರದ್ದು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 

ಬೆಂಗಳೂರು ಆಗ್ನೇಯ ವಲಯದ DCPಯಾಗಿದ್ದ ಇಶಾ ಪಂತ್ ಅವರನ್ನು ಫೆಬ್ರವರಿ 26 ರಂದು CIDಗೆ ವರ್ಗಾವಣೆ ಮಾಡಲಾಗಿತ್ತು. 

Tap to resize

Latest Videos

undefined

ಸೂಪರ್ ವುಮೆನ್ ಎಂಬ ಭ್ರಮೆ ಬೇಡ:ಇಶಾ ಪಂಥ್...

ಆದರೆ ಇದೀಗ ಅವರ ವರ್ಗಾವಣೆ ರದ್ದು ಮಾಡಿದ್ದು, ಮುಂದಿನ ಆದೇಶದವರೆಗೂ ಆಗ್ನೇಯ ಡಿಸಿಪಿಯಾಗಿಯೇ ಮುಂದುವರಿಯಲಿದ್ದಾರೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. 

ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ...

ಮಹಿಳಾ ಸುರಕ್ಷತೆ ಕುರಿತಂತೆ ಪೊಲೀಸ್ ಇಲಾಖೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಇಶಾ ಪಂತ್ ಹೆಸರಾಗಿದ್ದಾರೆ. ಇದೀಗ ಖಡಕ್ ಅಧಿಕಾರಿಯ ವರ್ಗಾವಣೆ ರದ್ಧು ಮಾಡಿ ತಮ್ಮ ಹಿಂದಿನ ಸ್ಥಾನದಲ್ಲಿ ಮುಂದುವರಿಯಲು ಸರ್ಕಾರ ಸೂಚಿಸಿದೆ. 

ಬೆಂಗ್ಳೂರಲ್ಲಿ ಈ 8 ಪ್ರದೇಶಗಳಲ್ಲಿ ಮಹಿಳೆಯರು ನಾಟ್ ಸೇಫ್..!...

click me!