ಮಿನಿ ವಿಧಾನಸೌಧದಲ್ಲಿಯೇ ಅವ್ಯವಸ್ಥೆ, ಲಿಫ್ಟ್ ಒಳಗೆ ಸಿಕ್ಕಾಕೊಂಡ ದಿವ್ಯಾಂಗ ವ್ಯಕ್ತಿ

By Suvarna NewsFirst Published Feb 29, 2020, 12:58 PM IST
Highlights

ಮೈಸೂರಿನ ಮಿನಿ ವಿಧಾನ ಸೌಧದಲ್ಲಿ ಲಿಫ್ಟ್ ಕೈಕೊಟ್ಟು ದಿವ್ಯಾಂಗ ವ್ಯಕ್ತಿಯೊಬ್ಬರು ಒಳಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ದಿನನಿತ್ಯ ಜನರು ಬರುವಂತಹ ಮಿನಿ ವಿಧಾನಸೌಧದಲ್ಲಿರುವ ಅವ್ಯವಸ್ಥೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು(ಫೆ.29): ಮೈಸೂರಿನ ಮಿನಿ ವಿಧಾನ ಸೌಧದಲ್ಲಿ ಲಿಫ್ಟ್ ಕೈಕೊಟ್ಟು ದಿವ್ಯಾಂಗ ವ್ಯಕ್ತಿಯೊಬ್ಬರು ಒಳಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ದಿನನಿತ್ಯ ಜನರು ಬರುವಂತಹ ಮಿನಿ ವಿಧಾನಸೌಧದಲ್ಲಿರುವ ಅವ್ಯವಸ್ಥೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಿನಿ ವಿಧಾನಸೌಧದಲ್ಲಿ ಲಿಫ್ಟ್ ಕೈ ಕೊಟ್ಟು ತಾಲೂಕು ಕಚೇರಿ ಲಿಫ್ಟ್‌ನಲ್ಲಿ ವ್ಯಕ್ತಿ ಸಿಕ್ಕಿಬಿದ್ದು ಗೆಳೆಯನಿಗೆ ಕರೆ ಮಾಡಿದ್ದಾರೆ. ಗೆಳೆಯನಿಗೆ ಕರೆ ಮಾಡಿ ಲಿಫ್ಟ್ ಬಾಗಿಲು ತೆರೆಸಿ ಹೊರ ಬಂದಿದ್ದಾರೆ. ದಿವ್ಯಾಂಗ ವ್ಯಕ್ತಿ ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯ ಲಿಫ್ಟ್ ಒಳಗೆ ಸಿಲುಕಿದ್ದರು.

ಈಗಷ್ಟೇ ಸಚಿವರಾಗಿರೋ ನಾರಾಯಣಗೌಡ ವಜಾಗೆ ಆಗ್ರಹ

ಕೆಟ್ಟು ನಿಂತ ಲಿಫ್ಟ್ ನಲ್ಲಿ ಸಿಲುಕಿದ್ದ ಎಂಸಿ ಹುಂಡಿ ಗ್ರಾಮದ ಶಿವಮಾದು ಕೆಲಸ ನಿಮಿತ್ತ ಮೈಸೂರಿನ ತಾಲೂಕು ಕಚೇರಿಗೆ ಬಂದಿದ್ದರು. ಶಿವಮಾದು ಸ್ನೇಹಿತ ನಾರಾಯಣ ತಾಲೂಕು ಕಚೇರಿ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದರು. ಬಳಿಕ ತಂತ್ರಜ್ಞರ ಜತೆ ಸ್ಥಳಕ್ಕೆ ದೌಡಾಯಿಸಿ ಲಿಫ್ಟ್ ಬಾಗಿಲು ಓಪನ್ ಮಾಡಲಾಗಿದೆ. ಲಿಫ್ಟ್ ನಲ್ಲಿ ಕನಿಷ್ಠ ಮಟ್ಟದ ಸೇಫ್ಟಿ ಮಾಡದಿರೋದು ದುರಂತ ಎಂದು ಜನ ಆರೋಪಿಸಿದ್ದಾರೆ.

click me!