ವಿಶಾಖಪಟ್ಟಣ ವಿಷಾನಿಲ ದುರಂತ: ಕನ್ನಡಿಗರ ನೆರವಿಗೆ ಹೆಲ್ಪ್‌ಲೈನ್‌ ಶುರು

Kannadaprabha News   | Asianet News
Published : May 08, 2020, 10:25 AM ISTUpdated : May 08, 2020, 10:58 AM IST
ವಿಶಾಖಪಟ್ಟಣ ವಿಷಾನಿಲ ದುರಂತ: ಕನ್ನಡಿಗರ ನೆರವಿಗೆ ಹೆಲ್ಪ್‌ಲೈನ್‌ ಶುರು

ಸಾರಾಂಶ

ವಿಶಾಖಪಟ್ಟಣದ ಬಳಿ ವಿಷಾನಿಲ ಸೋರಿಕೆ| ಘಟನೆ ನಡೆದ ಪ್ರದೇಶದಲ್ಲಿ ಕರ್ನಾಟಕದವರು ಸಿಲುಕಿದ್ದರೆ ಪತ್ತೆ ಮಾಡಲು ಸಹಾಯವಾಣಿ ಆರಂಭ| ರಾಯಚೂರು ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ (08532 228559 ಮತ್ತು 8660761866)|

ಬೆಂಗಳೂರು(ಮೇ.08): ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ವಿಷಾನಿಲ ಸೋರಿಕೆ ಘಟನೆ ನಡೆದ ಪ್ರದೇಶದಲ್ಲಿ ಕರ್ನಾಟಕದವರು ಸಿಲುಕಿದ್ದರೆ ಪತ್ತೆ ಮಾಡಲು ಹಾಗೂ ಸಹಾಯ ಒದಗಿಸುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಸಹಾಯವಾಣಿ ಆರಂಭಿಸಿದ್ದಾರೆ. 

ರಾಯಚೂರು ಜಿಲ್ಲಾಡಳಿತದಿಂದ ಈ ಸಹಾಯವಾಣಿ (08532 228559 ಮತ್ತು 8660761866) ಆರಂಭಿಸಲಾಗಿದೆ. ಸಂತ್ರಸ್ತರು ಈ ಸಹಾಯವಾಣಿಯ ಪ್ರಯೋಜನ ಪಡೆಯಬಹುದು ಎಂದು ಸವದಿ ಹೇಳಿದ್ದಾರೆ.

ವಿಷಾನಿಲ ಸೋರಿಕೆ, 11 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!

ಈ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸೋವು-ನೋವು ಉಂಟಾಗಿರುವುದು ದುರ್ದೈವ. ಈ ದುರ್ಘಟನೆಯಿಂದ ನೊಂದವರಿಗೆ ಸಾಂತ್ವನ ಹೇಳಿರುವ ಸಚಿವರು, ಘಟನೆಯಿಂದ ತೊಂದರೆಗೆ ಒಳಗಾದ, ಅನಾರೋಗ್ಯಕ್ಕೆ ಈಡಾಗಿರುವ ಹಾಗೂ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ