ಕೊರೋನಾ ನಿಯಂತ್ರಣಕ್ಕೆ 208 ಕೋಟಿ ಬಿಡುಗಡೆ: ಸಚಿವ ಅಶೋಕ್‌

By Kannadaprabha NewsFirst Published May 8, 2020, 10:08 AM IST
Highlights

ಕೋವಿಡ್‌-19 ನಿಯಂತ್ರಣಕ್ಕಾಗಿ 208.01 ಕೋಟಿ ರು. ವಿಪತ್ತು ನಿರ್ವಹಣಾ ಕೇಂದ್ರದಿಂದ ಬಿಡುಗಡೆ| ಬಿಡುಗಡೆ ಮಾಡಿದ ಹಣದ ಪೈಕಿ ಆರೋಗ್ಯ ಇಲಾಖೆಗೆ 20 ಕೋಟಿ ರು., ಬೆಂಗಳೂರು ನಗರ ಜಿಲ್ಲೆ 25 ಕೋಟಿ ರು., ಪೊಲೀಸರಿಗೆ ರಕ್ಷಣಾ ಕವಚ ಖರೀದಿಗೆ 5 ಕೋಟಿ ರು. ಬಿಡುಗಡೆ|

ಬೆಂಗಳೂರು(ಮೇ.08): ಕೋವಿಡ್‌-19 ನಿಯಂತ್ರಣಕ್ಕಾಗಿ 208.01 ಕೋಟಿ ರು.ಗಳನ್ನು ವಿಪತ್ತು ನಿರ್ವಹಣಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡುಗಡೆ ಮಾಡಿದ ಹಣದ ಪೈಕಿ ಆರೋಗ್ಯ ಇಲಾಖೆಗೆ 20 ಕೋಟಿ ರು., ಬೆಂಗಳೂರು ನಗರ ಜಿಲ್ಲೆ 25 ಕೋಟಿ ರು., ಪೊಲೀಸರಿಗೆ ರಕ್ಷಣಾ ಕವಚ ಖರೀದಿಗೆ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ತರಕಾರಿ, ಹಣ್ಣು ಬೆಳೆಗಾರರಿಗೂ ಶೀಘ್ರವೇ ಪ್ಯಾಕೇಜ್‌: ಸಚಿವ ಪಾಟೀಲ

ಜೈಲು ಸಿಬ್ಬಂದಿಗೆ ರಕ್ಷಣಾ ಕವಚ ಖರೀದಿಸಲು 2 ಕೋಟಿ ರು. ನೀಡಲಾಗಿದೆ. ಚಾಮರಾಜನಗರದಲ್ಲಿ ಪ್ರಯೋಗಾಲಯಕ್ಕಾಗಿ 1.09 ಕೋಟಿ ರು., ರಾಮನಗರದಲ್ಲಿ ಪರೀಕ್ಷಾ ಪ್ರಯೋಗಾಲಯಕ್ಕಾಗಿ 1.1 ಕೋಟಿ ರು. ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಒಟ್ಟು 150 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

click me!