ದೆಹಲಿ ಗಲಭೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ: ಲಕ್ಷ್ಮಣ ಸವದಿ

Kannadaprabha News   | Asianet News
Published : Feb 28, 2020, 11:50 AM IST
ದೆಹಲಿ ಗಲಭೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ: ಲಕ್ಷ್ಮಣ ಸವದಿ

ಸಾರಾಂಶ

ಮಹದಾಯಿ ಕುರಿತು ಗೋವಾ ಸರ್ಕಾರದಿಂದ ಮತ್ತೆ ಸುಪ್ರೀಂನಲ್ಲಿ ಅರ್ಜಿ| ಮಹದಾಯಿ ವಿಚಾರದ ಬಗ್ಗೆ ಯಾರೂ ಚರ್ಚೆ ಮಾಡಬಾರದು| ಬೆಳಗಾವಿ ಜಿಲ್ಲೆಯ ನಾಯಕರು ಮತ್ತು ಯಾರು ಕೂಡ ಮಹದಾಯಿ ಬಗ್ಗೆ ಚರ್ಚೆ ಮಾಡಬಾರದು| 

ಬೆಳಗಾವಿ(ಫೆ.28): ದೆಹಲಿ ಗಲಭೆಯನ್ನು ವಿರೋಧ ಪಕ್ಷ ಕಾಂಗ್ರೆಸ್‌ನವರೇ ಮಾಡಿಸಿರುವಂತಹದ್ದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಆರೋಪಿಸಿದ್ದಾರೆ. 

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಟ್ರಂಪ್ ಅವರು ಬಂದಾಗ ದೇಶದಲ್ಲಿ ಅಶಾಂತಿ ಇದೆ ಏನೋ ನಡೆದಿದೆ ಎಂಬ ಸಂದೇಶ ಬೇರೆ ದೇಶಗಳಿಗೆ ಹೋಗಬೇಕಂತ ಮಾಡಿದ್ದಾರೆ. ಕಾಂಗ್ರೆಸ್‌ನವರೇ ಮಾಡಿರಬಹುದು ಎಂದು ನಮಗೆ ಅನುಮಾನ ಇದೆ ಎಂದರು. 

ಮಹದಾಯಿ ಯೋಜನೆ ಕುರಿತು ಗೋವಾ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮಹದಾಯಿ ವಿಚಾರದ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಜಿಲ್ಲೆಯ ನಾಯಕರು ಮತ್ತು ಯಾರು ಕೂಡ ಚರ್ಚೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳಗಾವಿ ಜಿಲ್ಲೆ ವಿಭಜನೆ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸವದಿ ಅವರು, ಹುಬ್ಬಳ್ಳಿ ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಗಳ ಕೈಯಲ್ಲಿ ಸರ್ಕಾರಿ ದಾಖಲೆ ಪರಿಶೀಲನೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಣೆ ಮಾಡಲಾ ಗುತ್ತದೆ. ಕಚೇರಿ ದುರಸ್ತಿ ಕಾರ್ಯದ ಸಂದರ್ಭದಲ್ಲಿ ತೆಗೆದ ವಿಡಿಯೋ ಅದಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆ ವಿಡಿಯೋ ಮಾಡಲಾಗಿದೆ ಎಂದು ಹೇಳಿದರು.
 

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ