'70 ವರ್ಷದಿಂದ ಕಾಂಗ್ರೆಸ್ ‌ಹೀನಾಯ ರಾಜಕಾರಣ ಮಾಡುತ್ತಾ ಬಂದಿದೆ'

By Suvarna NewsFirst Published Dec 22, 2019, 1:20 PM IST
Highlights

ಡಿಸಿಎಂ ಹುದ್ದೆಯ ಬಗ್ಗೆ ನಮ್ಮ ನಾಯಕರು ಹೇಳಿದ್ರೆ ನಾನು ಪ್ರತಿಕ್ರಿಯೆ ನೀಡುತ್ತೇನೆ| ಹಾದಿ-ಬಿದಿಯಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಹೇಳಿಕೆ ನೀಡುವವರಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ ಎಂದ ಡಿಸಿಎಂ ಕಾರಜೋಳ|ಈ ಭೂಮಿ ಮೇಲೆ ಜನ ಇರುವವರೆಗೆ ಬೆಳಗಾವಿ, ಸುತ್ತಮುತ್ತಲಿನ ಪ್ರದೇಶ ಕರ್ನಾಟಕದಲ್ಲಿ ಇರುತ್ತದೆ| ಉದ್ಭವ್ ಠಾಕ್ರೆ ಹೇಳಿದ್ರೂ ಅದು ಕನ್ನಡ ನಾಡಾಗಿಯೇ ಇರುತ್ತದೆ|

ಬೆಳಗಾವಿ(ಡಿ.22): ಉಪಚುನಾವಣೆಯಲ್ಲಿ ನಾವು 12 ಸ್ಥಾನಗಳನ್ನು ಗೆದ್ದಿದ್ದೇವೆ ನೂತನ ಶಾಸಕರೆಲ್ಲರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಸ್ವಲ್ಪ ಕಾಯಬೇಕು ಅಷ್ಟೇ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ದೇಶದಲ್ಲಿ ಆಡಳಿತ ನಡೆಸುತ್ತಿದೆ. ಪಕ್ಷದ ಯಾವುದೇ ಚಟುವಟಿಕೆ, ತೀರ್ಮಾನ ರಾಷ್ಟ್ರ ಮಟ್ಟದಲ್ಲಿ ಆಗುತ್ತವೆ. ಪ್ರಧಾನಿ‌ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷರು, ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ, ಡಿಸಿಎಂ ಹುದ್ದೆಯ ಬಗ್ಗೆ ನಮ್ಮ ನಾಯಕರು ಹೇಳಿದ್ರೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಹಾದಿ-ಬಿದಿಯಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಹೇಳಿಕೆ ನೀಡುವವರಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ ಎಂದು ಡಿಸಿಎಂ ಹುದ್ದೆ ವಿಚಾರವಾಗಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರೇಣಾಕಾಚಾರ್ಯಗೆ ತಿರುಗೇಟು ಕೊಟ್ಟಿದ್ದಾರೆ. 
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಆಯ್ತು, 70 ವರ್ಷದಿಂದ ಕಾಂಗ್ರೆಸ್ ‌ಹೀನಾಯ ರಾಜಕಾರಣ ಮಾಡಿದೆ. ಕಾಂಗ್ರೆಸಿನವರು ಇಷ್ಟು ‌ದಿನ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದ್ದಾರೆ. ಆದ್ರೆ ಬಿಜೆಪಿ ಹಾಗೂ ನಮ್ಮ‌ ರಾಷ್ಟ್ರೀಯ ನಾಯಕರು ದೇಶದ ಐಕ್ಯತೆ, ಭದ್ರತೆ ಕುರಿತು ಚಿಂತನೆ ಮಾಡುತ್ತಾರೆ. ಮಂಗಳೂರು ಗೋಲಿಬಾರ್ ವಿಚಾರದಲ್ಲಿ ಕಾಂಗ್ರೆಸ್ ‌ತನ್ನ ನೀತಿ ಮುಂದುವರೆಸಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಮಾಯಕರನ್ನು ಗೋಲಿಬಾರ್ ಮಾಡಿ ನಾವು ಸಾಯಿಸಿಲ್ಲ, ಯಾರು ದೇಶ ದ್ರೋಹ, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂತರವನ್ನು ಹತ್ತಿಕ್ಕಲಾಗಿದೆ ಅಷ್ಟೇ ಎಂದು ಹೇಳುವ ಮೂಲಕ ಗೋಲಿಬಾರ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ. 

ಗಡಿವಿವಾದ ಕುರಿತು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ ಡಿಸಿಎಂ ಕಾರಜೋಳ, ಈ ಭೂಮಿ ಮೇಲೆ ಜನ ಇರುವವರೆಗೆ ಬೆಳಗಾವಿ, ಸುತ್ತಮುತ್ತಲಿನ ಪ್ರದೇಶ ಕರ್ನಾಟಕದಲ್ಲಿ ಇರುತ್ತದೆ. ಉದ್ಭವ್ ಠಾಕ್ರೆ ಹೇಳಿದ್ರೂ ಅದು ಕನ್ನಡ ನಾಡಾಗಿಯೇ ಇರುತ್ತದೆ ಎಂದು ತಿಳಿಸಿದ್ದಾರೆ.
 

click me!