ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ ಎಂದು ಪ್ರಶ್ನಿಸಿದ ಕೇಂದ್ರ ಸಚಿವ

Suvarna News   | Asianet News
Published : Dec 22, 2019, 01:04 PM IST
ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ ಎಂದು ಪ್ರಶ್ನಿಸಿದ ಕೇಂದ್ರ ಸಚಿವ

ಸಾರಾಂಶ

ನಾವು ಯಾರ ಪೌರತ್ವವನ್ನು ಕಿತ್ತುಕೊಳ್ಳುತ್ತಿದ್ದೇವೆ,ಕಾಂಗ್ರೆಸ್ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು| ದೇಶದ 130 ಕೋಟಿ ಜನರು ಸುರಕ್ಷಿತವಾಗಿದ್ದಾರೆ| ಅಫ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್, ಹಿಂದೂ, ಪಾರ್ಸಿ, ಜೈನರು ಅವರ ಸಲುವಾಗಿ ಕಾನೂನು ಮಾಡಿದ್ದೇವೆ| ಅವರು ಗೌರವದಿಂದ ಇರಬೇಕೋ ಬೇಡವೋ? ಎಂದು ಪ್ರಶ್ನಿಸಿದ ಸುರೇಶ ಅಂಗಡಿ|

ಬೆಳಗಾವಿ(ಡಿ.22): ರೈಲ್ವೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಎಲ್ಲ ರಾಜ್ಯ ಸರ್ಕಾರಗಳಿಗೆ ಹೇಳಿದ್ದೇನೆ. ನಾನು ಯಾರನ್ನೂ‌ ಪ್ರವೋಕ್ ಮಾಡಿಲ್ಲ, ಪ್ರವೋಕ್ ಮಾಡಿದ್ರೆ ಹೇಳಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಹೇಳಿದ್ದಾರೆ. 

ಸುರೇಶ್ ಅಂಗಡಿ ಹೇಳಿಕೆ ಪ್ರಚೋದನಕಾರಿ ಅಲ್ವಾ ಎಂಬ ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನೆ ವಿಚಾರದ ಬಗ್ಗೆ ಭಾನುವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯದಮವರ ಜೊತೆ ಮಾತನಾಡಿದ ಅವರು, ನಾವು ಯಾರ ಪೌರತ್ವವನ್ನು ಕಿತ್ತುಕೊಳ್ಳುತ್ತಿದ್ದೇವೆ, ಕಾಂಗ್ರೆಸ್ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ 130 ಕೋಟಿ ಜನರು ಸುರಕ್ಷಿತವಾಗಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್, ಹಿಂದೂ, ಪಾರ್ಸಿ, ಜೈನರು ಅವರ ಸಲುವಾಗಿ ಕಾನೂನು ಮಾಡಿದ್ದೇವೆ. ಅವರು ಗೌರವದಿಂದ ಇರಬೇಕೋ ಬೇಡವೋ? ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆ ಮೂರು ರಾಷ್ಟ್ರಗಳು ಇಸ್ಲಾಂ ರಾಷ್ಟ್ರ ಅಂತಾ ಘೋಷಿಸಿಕೊಂಡಿದ್ದಾರೆ. ಅಲ್ಲಿರುವರ ಮೇಲೆ ನಿರಂತರ ಅತ್ಯಾಚಾರ ‌‌ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದಾರಾ ಎಂಬ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರದ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸುರೇಶ ಅಂಗಡಿ, ಹಿಂದೂ ರಾಷ್ಟ್ರ ಏಕೆ ಮಾಡಬಾರದು? ಬೇರೆಯವರಿಗೂ ಒಂದೊಂದು ರಾಷ್ಟ್ರ ಇದಾವಲ್ಲ, ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ ಅಂತ ಪ್ರಶ್ನೆ ಮಾಡಿದ ಅವರು ನಾವು ಹಿಂದೂ ರಾಷ್ಟ್ರ ಮಾಡುತ್ತಿಲ್ಲ, ಇಲ್ಲಿ ಎಲ್ಲರೂ ಬದುಕಬೇಕು, ಹಿಂದೂ ಅಂತಾ ಅಂದ್ರೆ ಅದ್ಯಾವುದೋ ಜಾತಿಗೆ ಸೀಮಿತ ಆಗಿಲ್ಲ , ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಸಿ.ಎಂ.ಇಬ್ರಾಹಿಂ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಹಿನ್ನಡೆಯಾದ ಬಗ್ಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಇಷ್ಟರಲ್ಲೇ ಸಿಹಿ ಸುದ್ದಿ ನೀಡಲಿದೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!