ಪೌರತ್ವ ಕಾಯಿದೆಯಿಂದ ದೇಶದ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್, ಕಮ್ಯೂನಿಸ್ಟ್ ಗಳು ಮುಸಲ್ಮಾನರ ದಾರಿತಪ್ಪಿಸುತ್ತಿವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ತುಮಕೂರು(ಡಿ.22): ಪೌರತ್ವ ಕಾಯಿದೆಯಿಂದ ದೇಶದ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್, ಕಮ್ಯೂನಿಸ್ಟ್ ಗಳು ಮುಸಲ್ಮಾನರ ದಾರಿತಪ್ಪಿಸುತ್ತಿವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ ಅಡಿ ಪೌರತ್ವ ನೋಂದಣಿ ಬೇಡ ಅನ್ನುವ ಸಿದ್ದರಾಮಯ್ಯರ ಯಾಕೇ ಜಾತಿ ಗಣತಿ ಮಾಡಿದ್ರು..? ಯಾವ್ಯಾವ ಜಾತಿ ಎಷ್ಟಿದೆ ಎಂದು ಯಾಕೇ ಲೆಕ್ಕ ಹಾಕಿದ್ರು..? ಎಂದು ಅವರು ಪ್ರಶ್ನಿಸಿದ್ದಾರೆ.
ಕೇರಳ ವಿದ್ಯಾರ್ಥಿಗಳು ಮಂಗಳೂರು ಬಿಟ್ಟು ಬನ್ನಿ: ಸಿಎಂ ಪಿಣರಾಯಿ ಸೂಚನೆ
ಭಾರತದ ಮುಸಲ್ಮಾನರು ಯಾರೂ ಬೇರೆಯವರಲ್ಲ. ಮತಾಂತರಗೊಂಡ ಹಿಂದೂಗಳೇ. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇದ್ದೇವೆ. ಕಾಂಗ್ರೆಸ್ ನಮ್ಮ ನಡುವೆ ಬೆಂಕಿ ಇಡುತ್ತಿದೆ. ಮುಸಲ್ಮಾನರು ಯಾವುದೇ ಆತಂಕ ಪಡಬಾರದು ಎಂದು ಅವರು ಸೂಚಿಸಿದ್ದಾರೆ.
ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರದ ರೂಪ ತಳೆದಿತ್ತು.
ಮಂಗಳೂರು ಅಘೋಷಿತ ಬಂದ್ ವಾತಾವರಣ: KSRTCಗೆ ನಷ್ಟ