'ಕಾಂಗ್ರೆಸ್‌ಗೆ ಏನು ಗುರಿ ಇಲ್ಲಾ, ಬರಿ ಗೊಳ್ಳು ಭಾಷಣ ಬಿಗಿಯೋದು ಒಂದೇ ಗೊತ್ತು'

Kannadaprabha News   | Asianet News
Published : Mar 31, 2021, 11:08 AM IST
'ಕಾಂಗ್ರೆಸ್‌ಗೆ ಏನು ಗುರಿ ಇಲ್ಲಾ, ಬರಿ ಗೊಳ್ಳು ಭಾಷಣ ಬಿಗಿಯೋದು ಒಂದೇ ಗೊತ್ತು'

ಸಾರಾಂಶ

ಬೆಂಗಳೂರು ನಂತರ ಪ್ರಾಮುಖ್ಯತೆ ಗಳಿಸಿರುವುದು ಬೆಳಗಾವಿ| ನಮ್ಮ ಸರ್ಕಾರವಿದ್ದಾಗಲೇ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಲಾಗಿದೆ| ಈ ಭಾಗದ ಅಭಿವೃದ್ಧಿಗೆ ಕ್ರಮ| ಕಾಂಗ್ರೆಸ್ನದ್ದು ಮಾತಷ್ಟೆ, ಗುರಿ ಇಲ್ಲ: ಡಿಸಿಎಂ ಕಾರಜೋಳ| 

ಬೆಳಗಾವಿ(ಮಾ.31): ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಏನಾದರು ಬೆಳಗಾವಿಯಲ್ಲಿ ಕೆಲಸ ಮಾಡಿದ್ದರೆ ಹೇಳಲಿ, ಅವರದು ಮಾತು ಅಷ್ಟೇ. ಕೆಲಸ ಇಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಪಕ್ಷದವರಿಗೆ ತಿರುಗೇಟು ನೀಡಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುರೇಶ ಅಂಗಡಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಬೆಂಬಲ ನೀಡಲು ಸಲ್ಲಿಸಲು ಬಂದಿದ್ದೇವೆ. ಸರ್ಕಾರದ ಕೆಲಸಗಳನ್ನು ನೋಡಿ ಜನರು ಮತ ನೀಡಲಿದ್ದು, ಬೆಳಗಾವಿ ಲೋಕಸಭೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'60 ವರ್ಷಕ್ಕಿಂತ ಹೆಚ್ಚಿನ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಮುಂದೆ ಹೇಗೆ ನಿಲ್ತಾರೆ ಎಂಬುದು ಗೊತ್ತಿದೆ'

ಬೆಂಗಳೂರು ನಂತರ ಪ್ರಾಮುಖ್ಯತೆ ಗಳಿಸಿರುವುದು ಗಡಿನಾಡು ಬೆಳಗಾವಿ. ನಮ್ಮ ಸರ್ಕಾರವಿದ್ದಾಗಲೇ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬೆಳಗಾವಿ ಯಾಕೆ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಅವರು ಸುಮ್ಮನೆ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಏನು ಗುರಿ ಇಲ್ಲಾ ಬರಿ ಗೊಳ್ಳು ಭಾಷಣ ಬಿಗಿಯೋದು ಒಂದೇ ಗೊತ್ತು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ನವರು ಬೆಳಗಾವಿಗೆ ಏನಾದರು ಕೆಲಸ ಮಾಡಿದ್ದರೆ ಹೇಳಲಿ. ಬಿಜೆಪಿಯಿಂದ ಬೆಳಗಾವಿಗೆ ರಿಂಗ್ರೋಡ್ಮಾಡಲು ಅನುಮತಿ ಸಿಕ್ಕಿದೆ. ಹಾಗಾಗಿ ಕಾಂಗ್ರೆಸ್ನವರು ಹೇಳಿಕೆ ನೀಡಲು ಮಾತ್ರ ಯೋಗ್ಯರು ಯಾವುದೇ ಕೆಲಸ ಇಲ್ಲಾ ಎಂದು ಕಿಡಿಕಾರಿದರು.
 

PREV
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!