ಎಂಇಎಸ್‌ನವರಿಗೂ ಸ್ವಾತಂತ್ರ್ಯವಿದೆ, ಭಾವನೆ ವ್ಯಕ್ತಪಡಿಸಲು: ಅಶ್ವತ್ಥ್‌ ನಾರಾಯಣ್ ವಿವಾದಾತ್ಮಕ ಹೇಳಿಕೆ

By Suvarna NewsFirst Published Nov 1, 2020, 3:29 PM IST
Highlights

ಎಂಇಎಸ್‌ನವರು ಪ್ರತಿವರ್ಷ ಕರಾಳ ದಿನ ಆಚರಿಸಿಕೊಂಡು ಬರುತ್ತಿದ್ದಾರೆ. ಅವರಿಗೂ ಸ್ವಾತಂತ್ರ್ಯವಿದೆ, ಅವರ ಭಾವನೆ ವ್ಯಕ್ತಪಡಿಸಲು ಹಕ್ಕಿದೆ. ಆದರೆ ನಾವು ಕನ್ನಡತನವನ್ನ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ: ಅಶ್ವತ್ಥ್‌ ನಾರಾಯಣ್
 

ರಾಮನಗರ(ನ.01):  ಎಂಇಎಸ್‌ನವರು ಪ್ರತಿವರ್ಷ ಕರಾಳ ದಿನ ಆಚರಿಸಿಕೊಂಡು ಬರುತ್ತಿದ್ದಾರೆ. ಅವರಿಗೂ ಸ್ವಾತಂತ್ರ್ಯವಿದೆ, ಅವರ ಭಾವನೆ ವ್ಯಕ್ತಪಡಿಸಲು ಹಕ್ಕಿದೆ. ಆದರೆ ನಾವು ಕನ್ನಡತನವನ್ನ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಇಂದು(ಭಾನುವಾರ) ರಾಮನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್ ಅವರು, ಎಂಇಎಸ್‌ ಮಾಡುತ್ತಿರುವ ಪುಂಡಾಟವನ್ನ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದ್ದಾರೆ. 

ಬೆಳಗಾವಿಯಲ್ಲಿ MES ಪುಂಡರ ಉದ್ಧಟತನ: ಕನ್ನಡ ಪರ ಹೋರಾಟಗಾರನ ಬಂಧನ, ಭುಗಿಲೆದ್ದ ಆಕ್ರೋಶ

ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್‌ ಪುಂಡರು ಬೆಳಗಾವಿಯಲ್ಲಿ ಕರಾಳ ದಿನ ಅಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಕರಾಳ ದಿನ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ಪರವಾನಗಿ ನೀಡಿಲ್ಲ. ಹೀಗಾಗಿ ಕುಂದಾನಗರಿಯಲ್ಲಿ ನಾಡದ್ರೋಹಿ ಎಂಇಎಸ್‌ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಓರ್ವ ಕನ್ನಡಪರ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. 
 

click me!