ಬೆಳಗಾವಿಯಲ್ಲಿ MES ಪುಂಡರ ಉದ್ಧಟತನ: ಕನ್ನಡ ಪರ ಹೋರಾಟಗಾರನ ಬಂಧನ, ಭುಗಿಲೆದ್ದ ಆಕ್ರೋಶ

By Suvarna News  |  First Published Nov 1, 2020, 2:14 PM IST

ಬೆಳಗಾವಿಯಲ್ಲೇ ಇದ್ದುಕೊಂಡೇ ಎಂಇಎಸ್‌ ಪುಂಡರಿಂದ ಕರಾಳ ದಿನ ಆಚರಣೆ| ಕರವೇ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ| ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು| 


ಬೆಳಗಾವಿ(ನ.01): ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಲು ಸಿದ್ಧತೆ ನಡೆಸಿದ್ದ ಎಂಇಎಸ್‌ಗೆ ಭಾರೀ ಮುಖಭಂಗವಾಗಿದೆ. ಹೌದು, ಕರಾಳ ದಿನ ಆಚರಿಸಲು ಜಿಲ್ಲಾಧಿಕಾರಿ ಪರವಾನಗಿ ನೀಡಿರಲಿಲ್ಲ. ಹೀಗಾಗಿ ಜಿಲ್ಲಾಡಳಿತದ ಕ್ರಮವನ್ನ ಖಂಡಿಸಿದ ಎಂಇಎಸ್‌- ಶಿವಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದೆ.

"

Tap to resize

Latest Videos

ನಗರದ ಮರಾಠಾ ಮಂದಿರದ ಮಂಗಲ‌ ಕಾರ್ಯಾಲಯದಲ್ಲಿ‌ ಎಂಇಎಸ್ ಸಭೆ ನಡೆಸಿದೆ. ಬಳಿಕ ಪ್ರತಿಭಟನೆಗಳಿದ ಎಂಇಎಸ್‌- ಶಿವಸೇನೆ ಪುಂಡರು ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.

ಪ್ರತಿವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್‌ ಕರಾಳ ದಿನಾಚರಣೆ ಆಚರಿಸುತ್ತಿತ್ತು. ಈ ಬಾರಿ ಕರಾಳ ದಿನಾಚರಣೆ ಆಚರಣೆಗೆ ಜಿಲ್ಲಾಡಳಿತ ಬ್ರೇಕ್‌ ನೀಡಿತ್ತು. ಹೀಗಾಗಿ ನಗರದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಎಂಇಎಸ್ ಪುಂಡರು ರಹೆಂಗೇ ತೋ ಮಹಾರಾಷ್ಟ್ರ ಮೇ ನಹೀ ತೋ ಜೈಲ್ ಮೇ ಎಂದು ಘೋಷಣೆ ಕೂಗಿದ್ದಾರೆ. 

ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: MES ಪುಂಡರಿಗೆ ಭಾರೀ ಮುಖಭಂಗ

ಕನ್ನಡಪರ ಕಾರ್ಯಕರ್ತನ ಬಂಧನ

ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆ ಪ್ರತಿಭಟನಾ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಕನ್ನಡಪರ ಹೋರಾಟಗಾರರು ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ. ಕನ್ನಡಪರ ಹೋರಾಟಗಾರು ಎಂಇಎಸ್‌ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಕೈಯಲ್ಲಿ ಕನ್ನಡ ಧ್ವಜ ಹಿಡಿದು ಸಭೆಗೆ ನುಗ್ಗಿಸಲು ಯತ್ನಿಸಿದವನನ್ನ  ಪೊಲೀಸರು ತಡೆ ಹಿಡಿದ್ದಾರೆ. ಹೋರಾಟಗಾರನ ಕೈಯಲ್ಲಿದ್ದ ಕನ್ನಡ ಧ್ವಜ ಕಸಿದುಕೊಂಡ ಪೊಲೀಸರು, ಹೋರಾಟಗಾರನ ತಡೆದು ಜೀಪ್‌ನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.  ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಎಂಇಎಸ್ ನಾಯಕಿ, ಮಾಜಿ ಉಪಮೇಯರ್ ರೇಣು ಕಿಲ್ಲೇಕರ್ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಕನ್ನಡಪರ ಹೋರಾಟಗಾರರು ಎಂಇಎಸ್‌ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದಾರೆ. 

ಎಂಇಎಸ್ ಪ್ರತಿಭಟ‌ನಾ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸುತ್ತಿದ್ದ ಕರವೇ ಕಾರ್ಯಕರ್ತರನ್ನ    ಪೊಲೀಸರು ತಡೆ ಹಿಡಿದ್ದಾರೆ. ಇದರಿಂದ ಆಕ್ರೋಶಭರಿತರಾದ ಕನ್ನಡಪರ ಹೋರಾಟಗಾರರು ಎಂಇಎಸ್‌ ಕರಾಳ ದಿನ ಬಂದ್ ಆಗಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಎಂಇಎಸ್ ಪುಂಡರ ಪರ ನಿಂತ ರಾಜ್ಯ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರು, ನಮಗೆ ಮೆರವಣಿಗೆ ಅವಕಾಶ ಕೊಟ್ಟಿಲ್ಲ ಎಂಇಎಸ್‌ಗೆ ಸಭೆ ನಡೆಸಲು ಅನುಮತಿ ನೀಡಿದ್ದೇಕೆ? ಸಭೆ, ರ್ಯಾಲಿಗೆ ಅವಕಾಶ ನೀಡಲ್ಲ ಎಂದು‌‌ ಜಿಲ್ಲಾಡಳಿತ ಹೇಳಿತ್ತು, ನಮ್ಮ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಿಲ್ಲ, ಕೋವಿಡ್ ನೆಪವೊಡ್ಡಿ ನಮ್ಮ ರಾಜ್ಯೋತ್ಸವ ಮೆರವಣಿಗೆಗೆ ತಡೆ ಹಿಡಿಯಲಾಗಿತ್ತು. ಆದರೆ, ಎಂಇಎಸ್‌ನವರಿಗೆ ಏಕಾಏಕಿ ಸಭೆ ನಡೆಸಲು ಅನುಮತಿ ನೀಡಿದ್ದೇಕೆ ಎಂಇಎಸ್‌ ಸಭೆಗೆ ಅವಕಾಶ ಕೊಡುವವರು ನಮಗ್ಯಾಕೆ ರಾಜ್ಯೋತ್ಸವ ಮಾಡಲು ಅವಕಾಶ ಕೊಡುತ್ತಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದು ಅಕ್ರೋಶವನ್ನ ಹೊರಹಾಕಿದ್ದಾರೆ. 

ತೀಟೆ ತೀರಿಸಿಕೊಳ್ಳಲು ಬೆಂಬಲ ಕೊಡ್ತಿದ್ದಾರೆ : ಲಕ್ಷ್ಮಣ್ ಸವದಿ ಗರಂ

ಎಂಇಎಸ್‌ ಪುಂಡರು ಬೆಳಗಾವಿಯಲ್ಲೇ ಇದ್ದುಕೊಂಡೇ ಕರಾಳ ದಿನವನ್ನ ಆಚರಣೆ ಮಾಡುತ್ತಿದ್ದಾರೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕರವೇ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. 

ದ್ವಿಮುಖ‌ ನೀತಿ ಖಂಡಿಸಿ ಪ್ರತಿಭಟನೆ

ಇಂತಹ ದ್ವಿಮುಖ‌ ನೀತಿ ಏಕೆ? ಎಂಇಸ್ ಸಭೆಯನ್ನು ಮೊಟಕುಗೊಳಿಸಬೇಕು ಇಲ್ಲ ನಮ್ಮನ್ನು ಸಭೆಗೆ ಬಿಡಿ ಎಂದು ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಮಹಾದೇವ ತಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಎಂಇಎಸ್ ಪ್ರತಿಭಟನಾ ಸಭೆಗೆ ಮಹಾರಾಷ್ಟ್ರದ ಎನ್‌ಸಿಪಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾಲಿ ಚಾಕನಕರ್ ಆಗಮಿಸಿದ್ದಾರೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ರೂಪಾಲಿ‌ ಚಾಕನಕರ್ ಸಭೆಗೆ ಆಗಮಿಸಿದ್ದಾರೆ. 

ಎಂಇಎಸ್ ಪ್ರತಿಭಟನಾ ಸಭೆ ಉದ್ದೇಶಿಸಿ ಭಾಷಣ ಮಾಡಿದ ರೂಪಾಲಿ ಚಾಕನಕರ್, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ. ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸುತ್ತಿದ್ದೇವೆ. ಪೊಲೀಸರು ತಡೆಯೊಡ್ಡುತ್ತಾರೆ ಎಂದು ಗೊತ್ತಿದ್ದು ಅವರ ಕಣ್ತಪ್ಪಿಸಿ ಸಭೆಗೆ ಬಂದಿದ್ದೇನೆ. ಗಡಿಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಭಾಷಣ ಮಾಡಿದ್ದಾರೆ. 
 

click me!