ಮೃತ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ., ಪತ್ನಿಗೆ KMFನಲ್ಲಿ ಉದ್ಯೋಗ: DCM ಅಶ್ವತ್ಥನಾರಾಯಣ

Suvarna News   | Asianet News
Published : May 11, 2020, 11:09 AM ISTUpdated : May 11, 2020, 11:11 AM IST
ಮೃತ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ., ಪತ್ನಿಗೆ KMFನಲ್ಲಿ ಉದ್ಯೋಗ: DCM ಅಶ್ವತ್ಥನಾರಾಯಣ

ಸಾರಾಂಶ

ಅಪಘಾತದಲ್ಲಿ ಮೃತಪಟ್ಟ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿದ ಡಿಸಿಎಂ ಡಾ. ಅಶ್ವತ್ಥನಾರಾಯಣ| ಕೆಎಂಎಫ್‌ನಲ್ಲಿ ಹನಮಂತು ಅವರ ಪತ್ನಿ ಎನ್‌. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ಜತೆಗೆ, ಸರ್ಕಾರದ ಕಡೆಯಿಂದ ಬರಬೇಕಿರುವ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ|

ರಾಮನಗರ(ಮೇ.11): ಅಪಘಾತದಲ್ಲಿ ಮೃತಪಟ್ಟ ಖಾಸಗಿ ಸುದ್ದಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು, ಪತ್ರಕರ್ತನ ಪತ್ನಿಗೆ ಕೆಎಂಎಫ್‌ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 

ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಇಂದು(ಸೋಮವಾರ) ಭೇಟಿ ನೀಡಿ  ವೈಯಕ್ತಿಕವಾಗಿ 5 ಲಕ್ಷ ರೂ. ಚೆಕ್‌ಅನ್ನು ಕುಟುಂಬದವರಿಗೆ ನೀಡಿದ್ದಾರೆ. 
ಕೆಎಂಎಫ್‌ ಅಧ್ಯಕ್ಷರಿಗೆ ಪತ್ರ ಬರೆದು, ಅವರ ಜತೆ ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹನಮಂತು ಅವರ ಪತ್ನಿ ಎನ್‌. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ಜತೆಗೆ, ಸರ್ಕಾರದ ಕಡೆಯಿಂದ ಬರಬೇಕಿರುವ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ. 

ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

ಕಳೆದ ಏಪ್ರಿಲ್ 21 ರಂದು ರಾಮನಗರದಲ್ಲಿ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರ ಹನುಮಂತು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದೇ ಡಾ. ಅಶ್ವತ್ಥನಾರಾಯಣ ಅವರು  5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು. 

ಈ ಮಧ್ಯೆ, ಬೆಂಗಳೂರಿನ ಖಾಸಗಿ ವಾಹಿನಿಯ ವಾಹಿನಿಯ ಕೊರೋನಾ ಸೋಂಕಿತ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಹೀಗಾಗಿ ಉಪಮುಖ್ಯಮಂತ್ರಿಯವರ ರಾಮನಗರ ಭೇಟಿಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು.
 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ