ಕಾಂಗ್ರೆಸ್, ಎಸ್ಡಿಪಿಯಿಂದ ಸೌಹಾರ್ದತೆ ಹಾಳು|ಎಸ್ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ತಯಾರಿ| ಗಲಭೆ ಪ್ರಕರಣಕ್ಕೆ ಕಾಂಗ್ರೆಸ್‌ನ ಒಳ ಜಗಳವೇ ಕಾರಣ ಎಂದು ಈಗ ಬಹಿರಂಗ| ಸರ್ಕಾರ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದು, ಅದರ ಮೂಲಕವೇ ತನಿಖೆ ನಡೆಯುತ್ತದೆ|
ಕೆ.ಆರ್.ಪೇಟೆ(ಆ.17): ಬೆಂಗಳೂರಿನ ಡಿ.ಜಿ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಬಿಜೆಪಿ ನಾಯಕ ಅಘಾಲಯ ಮಂಜುನಾಥ್ ಅವರ ಮನೆಗೆ ಖಾಸಗಿ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಬೇಡಿಕೆ ಇಟ್ಟಿದ್ದು, ಅವರ ಅಪೇಕ್ಷೆಯನ್ನು ತಿಳಿಸಿದ್ದಾರೆ. ಆದರೆ ನವೀನ್ ಎಂಬ ಯುವಕ, ನಾನು ಕಾಂಗ್ರೆಸ್ ಕಾರ್ಯಕರ್ತ, ನಾನೇ ಆ ಪೋಸ್ಟ್ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅದಕ್ಕೆ ಉತ್ತರ ಕೊಡುವುದಕ್ಕೆ ಬೇರೆಯದ್ದೇ ದಾರಿ ಇತ್ತು. ಆದರೆ ಕಾನೂನನ್ನು ಕೈಗೆತ್ತಿಕೊಳ್ಳಬಾರದಿತ್ತು. ಸರ್ಕಾರ ತಕ್ಷಣವೇ ಸ್ಪಂದಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದು, ಗಲಭೆಕೋರರ ವಿರುದ್ಧ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಗಲಭೆಕೋರರ ನವರಂಗಿ ಆಟ!
ಗಲಭೆ ಪ್ರಕರಣಕ್ಕೆ ಕಾಂಗ್ರೆಸ್‌ನ ಒಳ ಜಗಳವೇ ಕಾರಣ ಎಂದು ಈಗ ಬಹಿರಂಗವಾಗಿದೆ. ಸರ್ಕಾರ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದು, ಅದರ ಮೂಲಕವೇ ತನಿಖೆ ನಡೆಯುತ್ತದೆ. ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದರು.
ಎಸ್ಪಿಡಿಐ ಹಾಗೂ ಪಿಎಫ್ಐಗಳಿಂದ ಟಾರ್ಗೆಟೆಡ್ ಕಿಲ್ಲಿಂಗ್ ತಂತ್ರ ನಡೆಯುತ್ತಿದೆ. ಇದು ಹಿಂದಿನಿಂದಲೂ ನಡೆಯುತ್ತಿದ್ದು, ತನ್ವೀರ್‌ಶೇಠ್ ಮೇಲಿನ ಕೊಲೆ ಯತ್ನ ಹಾಗೂ ಮಡಿಕೇರಿ ಪ್ರಕರಣಗಳೇ ಇದಕ್ಕೆ ಉದಾಹರಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಳ್ಳಿ ಗದೆ ನೀಡಿ ಸನ್ಮಾನ :
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ನಾಯಕ ಅಘಾಲಯ ಮಂಜುನಾಥ್ ಅವರು 2 ಲಕ್ಷ ರೂ. ಬೆಲೆ ಬಾಳುವ ಬೆಳ್ಳಿ ಗದೆಯನ್ನು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರಿಗೆ ನೀಡಿ ಸನ್ಮಾನಿಸಿದರು. ಮಂಜುನಾಥ್ ಅವರ ಮನೆಯಲ್ಲಿ ನಡೆದ ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶ್ವತ್ಥನಾರಾಯಣ ಅವರಿಗೆ ಪೊಲೀಸ್ ಬ್ಯಾಂಡ್ ಮತ್ತು ಸಶಸ್ತ್ರ ಪೊಲೀಸರಿಗೆ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್, ಬಿಜೆಪಿ ಮುಖಂಡರಾದ ಡಾ. ಸಿದ್ದರಾಮಯ್ಯ, ನಾಗಣ್ಣಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಪಾಲ್ಗೊಂಡಿದ್ದರು.