ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಅವರ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿ ಸಹಕಾರ ಇಲಾಖೆ ಆದೇಶ ಹೊರಡಿಸಿದ್ದು, ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರಿಗೆ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗ(ಜು.16): ಡಿಸಿಸಿ ಬ್ಯಾಂಕಿನಲ್ಲೀಗ ಪುನಃ ಹೈಡ್ರಾಮ ಶುರುವಾಗಿದೆ. ಬ್ಯಾಂಕಿನ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಅವರ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿ ಸಹಕಾರ ಇಲಾಖೆ ಆದೇಶ ಹೊರಡಿಸಿದ್ದು, ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರಿಗೆ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಇದೇ ವೇಳೆ ಬ್ಯಾಂಕಿನ ಎಂ.ಡಿ. ಆಗಿದ್ದ ರಾಜಣ್ಣ ರೆಡ್ಡಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು, ಆ ಸ್ಥಾನವನ್ನು ಜಿಲ್ಲಾ ಸಹಕಾರ ಇಲಾಖೆಯ ಉಪ ನಿಬಂಧಕ ನಾಗೇಶ್ ಡೋಂಗ್ರೆ ವಹಿಸಿಕೊಂಡಿದ್ದಾರೆ. ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಪಾಂಡುರಂಗ ಗರಗ್ ಮಂಜುನಾಥಗೌಡರ ಸದಸ್ಯತ್ವ ರದ್ದುಗೊಳಿಸಿ ಮಂಗಳವಾರವೇ ಆದೇಶ ಹೊರಡಿಸಿದ್ದು, ಈ ಆದೇಶದ ಆಧಾರದ ಮೇಲೆ ಜಿಲ್ಲಾ ಸಹಕಾರ ಉಪ ನಿಬಂಧಕ ನಾಗೇಶ್ ಡೋಂಗ್ರೆ ಬುಧವಾರ ಕ್ರಮ ಕೈಗೊಂಡರು.
ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ DCC ಬ್ಯಾಂಕ್ 1 ಕೋಟಿ ದೇಣಿಗೆ
ಆದರೆ ಈ ಕುರಿತು ತಮಗೆ ಯಾವುದೇ ಆದೇಶ ಪ್ರತಿ ನೀಡಲಾಗಿಲ್ಲ ಎಂದು ಅಧ್ಯಕ್ಷ ಮಂಜುನಾಥಗೌಡ ಪ್ರತಿಕ್ರಿಯಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ನಡೆದ ನಕಲಿ ಬಂಗಾರ ಅಡವು ಪ್ರಕರಣದ ಮುಂದುವರಿದ ಭಾಗ ಇದಾಗಿದೆ ಎನ್ನಲಾಗಿದೆ.