'ಚಾನೆಲ್‌ ಕ್ಯಾಮೆ​ರಾ​ಮನ್‌ಗೆ ತಗು​ಲಿದ ಕೊರೋನಾ ಸೋಂಕು ಮೂಲ ಪತ್ತೆ'

By Kannadaprabha News  |  First Published Apr 30, 2020, 3:12 PM IST

ವಿಜಯಪುರದ ಚಪ್ಪರಬಂದ್‌ ಪ್ರದೇಶದ ಪಿ-228 ಸಂಪರ್ಕದಿಂದ ಕ್ಯಾಮೆರಾಮನ್‌ಗೆ ಸೋಂಕು ತಗುಲಿರುವುದು ದೃಢ| ಈತ ಹಲವು ಬಾರಿ ಪಿ-228 ಮನೆ ಬಳಿ ಅಡ್ಡಾಡಿರುವುದು ಪರಿಶೀಲನೆಯಿಂದ ತಿಳಿದುಬಂದಿದೆ| ಈ ಕ್ಯಾಮೆರಾಮನ್‌ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಂಟು ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಂಟು ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ|


ವಿಜಯಪುರ(ಏ.30): ಬಾರಾಕಮಾನ್‌ ಪ್ರದೇಶದ ನಿವಾಸಿ, ಯೂಟ್ಯೂಬ್‌ ಚಾನೆಲ್‌ವೊಂದರ ಕ್ಯಾಮೆರಾಮನ್‌ಗೆ (ಪಿ511) ಕೊರೋನಾ ಸೋಂಕು ತಗುಲಿರುವ ಮೂಲ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಪ್ಪರಬಂದ್‌ ಪ್ರದೇಶದ ಪಿ-228 ಸಂಪರ್ಕದಿಂದ ಕ್ಯಾಮೆರಾಮನ್‌ಗೆ ಸೋಂಕು ತಗುಲಿರುವುದು ದೃಢವಾಗಿದೆ. ಈತ ಹಲವು ಬಾರಿ ಪಿ-228 ಮನೆ ಬಳಿ ಅಡ್ಡಾಡಿರುವುದು ಪರಿಶೀಲನೆಯಿಂದ ತಿಳಿದುಬಂದಿದೆ. ಈ ಕ್ಯಾಮೆರಾಮನ್‌ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಂಟು ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಂಟು ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ 41 ಕಾರ್ಮಿಕರ ಸೈಕಲ್‌ ಸವಾರಿ: 2000 ಕಿ.ಮೀ. ಜರ್ನಿ

ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ತಗುಲಿರುವ ಮೂಲ ಇನ್ನೂ ಪತ್ತೆಯಾಗಿಲ್ಲ. ಆದರೆ ನಗರದಲ್ಲಿ ಈಗಾಗಲೇ ಕೋವಿಡ್‌ ದೃಢಪಟ್ಟಿರುವ ರೋಗಿಗಳು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದು ಖಚಿತವಾಗಿದೆ. ಬಹುತೇಕ ಅವರಿಂದಲೇ ಸೋಂಕು ತಗುಲಿರಬಹುದು ಎಂದರು.

ಕೋವಿಡ್‌-19 ಸೋಂಕು ತಗುಲಿರುವವರ ಜೊತೆಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಸುಮಾರು 1000 ಜನರನ್ನು ಹೋಂ ಕ್ವಾರಂಟೈನ್‌ಲ್ಲಿ ಇಟ್ಟು, ಜಿಯೊ ಫೆನ್ಸಿಂಗ್‌ ಹಾಕಲಾಗಿದೆ. ಜಿಯೋ ಫೆನ್ಸಿಂಗ್‌ ಇರುವವರು 10ರಿಂದ 12 ಮೀಟರ್‌ ವ್ಯಾಪ್ತಿ ಮೀರಿ ಯಾರಾದರೂ ಹೊರಬಂದರೆ ಅಂಥವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಮತ್ತು ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 

click me!