ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ 4159 ವಲಸೆ ಕಾರ್ಮಿಕರ ಆಗಮನ

By Kannadaprabha NewsFirst Published May 13, 2020, 12:24 PM IST
Highlights

ರಾಜ್ಯದ ವಿವಿಧ ಜಿಲ್ಲೆಗಳಿಂದ 22592 ಜನ ವಲಸೆ ಕಾರ್ಮಿಕರು| 1667 ವಲಸೆ ಕಾರ್ಮಿಕರು ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ತೆರಳಿದ್ದಾರೆ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ| ಜಿಲ್ಲೆಗೆ ಆಗಮಿಸಿದ ಎಲ್ಲ ವಲಸೆ ಕಾರ್ಮಿಕರ ಸಾಂಸ್ಥಿಕ ಹಾಗೂ ಹೋಮ್‌ ಕ್ವಾರಂಟೈನ್‌|

ವಿಜಯಪುರ(ಮೇ.13): ಜಿಲ್ಲೆಗೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 4159 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ 22,592 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, 1667 ವಲಸೆ ಕಾರ್ಮಿಕರು ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ. 

ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ, ಗೋವಾ ಸೇರಿದಂತೆ ಒಟ್ಟು 4159 ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಯಿಂದ ರಾಜಸ್ಥಾನಕ್ಕೆ 887 ಜನರು, ಮಧ್ಯಪ್ರದೇಶಕ್ಕೆ 27, ಆಂಧ್ರಪ್ರದೇಶಕ್ಕೆ 60, ಗುಜರಾತಗೆ 23, ಪಶ್ಚಿಮ ಬಂಗಾಳಕ್ಕೆ 70, ಉತ್ತರ ಪ್ರದೇಶಕ್ಕೆ 211, ಜಾರ್ಖಂಡಕ್ಕೆ 53 ಸೇರಿದಂತೆ ಒಟ್ಟು 1667 ವಲಸೆ ಕಾರ್ಮಿಕರು 56 ಬಸ್‌ಗಳ ಮೂಲಕ ತೆರಳಿದ್ದಾರೆ. 3377 ಜನರು ಆರೋಗ್ಯ ಸೇತು ಆ್ಯಪ್‌ ಬಳಸುತ್ತಿದ್ದಾರೆ ಎಂದರು.

ವಿಜಯಪುರ ಜಿಲ್ಲೆಯೂ ಕೊರೋನಾ ಸೋಂಕು ಮುಕ್ತವಾಗುವುದೇ?

ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಜಯಪುರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಿಗೆ ಒಟ್ಟು 22,592 ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಬೆಂಗಳೂರನಿಂದ ವಿಜಯಪುರಕ್ಕೆ 4650, ಬೆಂಗಳೂರನಿಂದ ಮುದ್ದೇಬಿಹಾಳಕ್ಕೆ 2365, ಬೆಂಗಳೂರು ಮತ್ತು ಉಡುಪಿಗಳಿಂದ ಇಂಡಿಗೆ 1863, ಬೆಂಗಳೂರನಿಂದ ಸಿಂದಗಿಗೆ 1632, ಧಾರವಾಡದಿಂದ ಬಬಲೇಶ್ವರಕ್ಕೆ 2365, ಬೆಂಗಳೂರದಿಂದ ತಿಕೋಟಾಗೆ 1463, ಚಾಮರಾಜನಗರ ಮತ್ತು ಧಾರವಾಡದಿಂದ ನಿಡಗುಂದಿಗೆ 1250, ಬೆಂಗಳೂರು ಮತ್ತು ಮಂಗಳೂರುಗಳಿಂದ ಕೊಲ್ಹಾರಕ್ಕೆ 963, ಬೆಂಗಳೂರದಿಂದ ತಾಳಿಕೋಟೆಗೆ 1463, ಬೆಂಗಳೂರು ಮತ್ತು ಮಂಗಳೂರುಗಳಿಂದ ಚಡಚಣಗೆ 1598, ಬೆಂಗಳೂರದಿಂದ ದೇವರಹಿಪ್ಪರಗಿಗೆ 1348, ಬೆಂಗಳೂರು, ಮಂಗಳೂರು ಮತ್ತು ಉಡುಪಿಗಳಿಂದ ಬಸವನಬಾಗೇವಾಡಿಗೆ 1632 ವಲಸೆ ಕಾರ್ಮಿಕರು ಸೇರಿದಂತೆ ಒಟ್ಟು 22592 ಜನರು ಆಗಮಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗೆ ಆಗಮಿಸಿದ ಎಲ್ಲ ವಲಸೆ ಕಾರ್ಮಿಕರ ಸಾಂಸ್ಥಿಕ(ಇನ್ಸ್‌ಟಿಟ್ಯೂಷನಲ್‌) ಹಾಗೂ ಹೋಮ್‌ ಕ್ವಾರಂಟೈನ್‌ಗೆ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ಹೇಳಿದ್ದಾರೆ.
 

click me!